ಬೈಕ್ ಸವಾರರೇ ಎಚ್ಚರ! ತಪ್ಪದೇ ಈ ವಿಡಿಯೋ ನೋಡಿ…ಮತ್ತು ಶೇರ್ ಮಾಡಲು ಮರೆಯಬೇಡಿ! ಬೇಜವಾಬ್ದಾರಿತನದ ಪರಮಾವಧಿ! ಸಾವು-ನೋವಿನ ನಷ್ಟಕ್ಕೆ ಯಾರು ಜವಾಬ್ದಾರಿ?

ಅಪಘಾತಗಳು ಯಾವಾಗಲೂ ಹೇಳಿಕೇಳಿ ಆಗುವುದಿಲ್ಲ. ಇವು ಆಕಸ್ಮಿಕವಾಗಿ ಸಂಭವಿಸುತ್ತವೆ. ಇದರಲ್ಲಿ ಮನುಷ್ಯನ ತಪ್ಪೇ 99 % ಇರುತ್ತದೆ ಎಂದರೆ ತಪ್ಪಲ್ಲ. ಅಪಘಾತಗಳಾಗುವ ಬಗ್ಗೆ ಕಿಂಚಿತ್ತು ಮುನ್ಸೂಚನೆ ಇರುವುದಿಲ್ಲ. ಅದರಲ್ಲೂ ಬೈಕ್ ಸವಾರರಂತೂ ಹೆಚ್ಚುತ್ತಿರುವ ವಾಹನಗಳಿಂದಾಗಿ ತಮ್ಮ ಜೀವ ಮುಷ್ಠಿಯಲ್ಲಿ ಹಿಡಿದೇ ಬೈಕ್ ಚಲಾಯಿಸಬೇಕಾಗಿದೆ. ಹೈವೇ ಮೇಲಂತೂ ಪರಿಸ್ಥಿತಿ ತೀರಾ ಭಿನ್ನವಾಗಿರುತ್ತದೆ. ಅಲ್ಲಿ ಅನೇಕ ರೀತಿಯ ವಾಹನಗಳು ಎಡೆಬಿಡದೆ ಚಲಿಸುತ್ತಲೇ ಇರುತ್ತವೆ. ಅಂಥಲ್ಲಿ ಸ್ವಲ್ಪವೂ ಹೆಚ್ಚು ಕಡಿಮೆಯಾದರೂ ಸಾಕು ಬೈಕ್ ಸವಾರರು ಅಪ್ಪಚ್ಚಿಯಾಗುವದರಲ್ಲಿ ಸಂಶಯವೇ ಇಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ವಿಡಿಯೋ ಒಂದು ಇದನ್ನೇ ಹೇಳುತ್ತಿದೆ. ವಿಡಿಯೋದಲ್ಲಿ ಕಾಣುವ ಹಾಗೆ ಮುಖ್ಯ ರಸ್ತೆಯ ಮೇಲೆ ಗೂಡ್ಸ್ ನಿಂದ ತುಂಬಿದ ವಾಹನವೊಂದು ಗೂಡ್ಸ್ ವಾಹನದ ಮೇಲೆ ಪ್ಲಾಸ್ಟಿಕ್ ರೀತಿಯ ಕಪ್ಪು ಬಣ್ಣದ ಕವರ್ ಒಂದನ್ನು ಹಾಕಿಕೊಂಡು ಬೇಕಾಬಿಟ್ಟಿಯಾಗಿ ಡ್ರೈವರ್ ವಾಹನವನ್ನು ಚಲಾಯಿಸುತ್ತಿದ್ದಾನೆ. ಹಿಂದೆ ಪ್ಲಾಸ್ಟಿಕ್ ಕವರ್ ಒಂದೇ ಸವನೆ ಗಾಳಿಗೆ ತೂರಾಡುತ್ತಿದೆ ಎಂಬ ಸಾಮಾನ್ಯ ಅರಿವು ಸಹ ಚಾಲಕನಿಗೆ ಇಲ್ಲದಿರುವುದು ದುರದೃಷ್ಟಕರ. ಅದರ ಹಿಂದೆ ಬೈಕ್ ಸವಾರನೊಬ್ಬ ಡಬಲ್ ಸೀಟ್ ಹೊರಟಿದ್ದಾನೆ. ಕಾಕತಾಳೀಯವೆನೋ ಎಂಬಂತೆ ಸರಿಯಾಗಿ ಅದೇ ಸಮಯಕ್ಕೆ ಗೂಡ್ಸ್ ಮೇಲಿನ ಪ್ಲಾಸ್ಟಿಕ್ ಕವರ್ ಹಾರಿ ಬಂದು ಹಠಾತ್ತನೆ ವೇಗವಾಗಿ ಚಲಿಸುತ್ತಿರುವ ಬೈಕ್ ಸವಾರನ ಮೇಲೆ ಬಂದು ಬಿದ್ದಿದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗಿದೆ.

ಬೈಕ್ ಸವಾರನ ಮೇಲೆ ಬಂದು ಪ್ಲಾಸ್ಟಿಕ್ ಕವರ್ ಬಿದ್ದಾಕ್ಷಣ ಬೈಕ್ ಮೇಲೆ ಕುಳಿತಿರುವ ಇಬ್ಬರೂ ಸವಾರರು ವೇಗದಲ್ಲಿಯೇ ರಸ್ತೆಯ ಮೇಲೆ ಬಿದ್ದು ಬಿಟ್ಟಿದ್ದಾರೆ. ಆಗ ಅವರ ಬದಿಯಿಂದ ದೊಡ್ಡದಾದ ಕಂಟೇನರ್ ಒಂದು ಹೋಗುತ್ತಿತ್ತು. ಬೈಕ್ ಮೇಲೆ ಕುಳಿತಿರುವವರ ಅದೃಷ್ಟ ಚೆನ್ನಾಗಿತ್ತು ಅಂತ ಕಾಣಿಸುತ್ತೆ, ಕೂದಲೆಳೆ ಅಂತರದಲ್ಲಿ ಅವರ ಜೀವ ಉಳಿದಿದೆ. ಸ್ವಲ್ಪ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಕಂಟೇನರ್ ಕೆಳಗೆ ಸಿಕ್ಕು ಸ್ಥಳದಲ್ಲಿಯೇ ಬೈಕ್ ಸವಾರರ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು. ಈ ರೀತಿಯ ಬೇಜವಾಬ್ದಾರಿತನಕ್ಕೆ ಯಾರು ಹೊಣೆ? ಹೇಳಿ ಮಿತ್ರರೇ…

ನೀವೇ ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ discovery.engenharia ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವೆರೆಗೆ 60 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.