ವೈರಲ್ ವಿಡಿಯೋ; ಕಾರಣವಿಲ್ಲದೆ 5 ಜನರು ಕೋಣಕ್ಕೆ ಥಳಿಸುತ್ತಿದ್ದರು ಕೋಲಿನಿಂದ; ಸರಿಯಾದ ಸಮಯಕ್ಕೆ ಕೋಣ ತೆಗೆದುಕೊಂಡಿತು Revenge !
ಪ್ರಾಣಿಗಳಿಗೆ ಮಾತನಾಡಲು ಬರುವುದಿಲ್ಲ, ಆದರೆ ಅವು ತಮ್ಮ ಭಾವನೆಗಳನ್ನು ಮಾತ್ರ ಕೆಲವೊಂದು ಸಲ ವ್ಯಕ್ತ ಮಾಡುವದನ್ನು ಎಷ್ಟೋ ವಿಡಿಯೋಗಳಲ್ಲಿ ಇದಕ್ಕೂ ಮೊದಲು ನೋಡಿದ್ದೇವೆ. ಎಷ್ಟೋ ಸಲ ಪ್ರಾಣಿಗಳು ಮನುಷ್ಯನಿಗಿಂತಲೂ ಹೆಚ್ಚಿಗೆ ಮಾನವೀಯತೆಯನ್ನು ತೋರಿಸುತ್ತವೆ. ಮನುಷ್ಯನಿಗಾಗಿ ಅಥವಾ ತನ್ನ ಮಾಲೀಕರಿಗಾಗಿ ಪ್ರಾಣಿಗಳು ತಮ್ಮ ಜೀವವನ್ನೇ ನೀಡಲು ಹಿಂದೆಮುಂದೆ ನೋಡುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ಸ್ವಾರ್ಥಕ್ಕಾಗಿ ಪ್ರಾಣಿಗಳ ಉಪಯೋಗ ಹದ್ದುಮೀರಿ ತೆಗೆದುಕೊಳ್ಳುತ್ತಾನೆ. ಯಾಕೆಂದರೆ ಮನುಷ್ಯನು ಪ್ರಾಣಿಗಳಿಗೆ ಹಿಂಸೆಯನ್ನು ನೀಡುವ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತೇವೆ. ಈಗ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಇಲ್ಲಿ ಮನುಷ್ಯನು ಅಲ್ಲ ಕ್ರೂರವಾದ 5 ಜನ ಮನುಷ್ಯರು ತಮ್ಮ ಸ್ವ ಆನಂದಕ್ಕಾಗಿ ಎಮ್ಮೆಯನ್ನು ಗಾಡಿಗೆ ಕಟ್ಟಿ ತಾವು ಒಳಗೆ ಕುಳಿತು ಅದನ್ನು ಒಂದೇ ಸವನೆ ಬಡಿಯುತ್ತ ಓಡಿಸುತ್ತಲೇ ಇದ್ದಾರೆ. ಆದರೆ ಈ ವಿಡಿಯೋದ ಅಂತ್ಯ ಪ್ರಾಣಿ ಪ್ರಿಯರಿಗೆ ತುಂಬಾ ಸಮಾಧಾನವನ್ನು ನೀಡುವದು ಮಾತ್ರ ನಿಜ.
ಪ್ರಾಚೀನ ಕಾಲದಲ್ಲಿ ಮಾನವನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವದಕ್ಕಾಗಿ ಪ್ರಾಣಿಗಳ ಉಪಯೋಗವನ್ನು ಮಾಡುತ್ತಿದ್ದನು. ಮೊದಮೊದಲು ಪ್ರಾಣಿಗಳ ಮೇಲೆಯೇ ಪ್ರವಾಸ ಮಾಡಿದರೆ ನಂತರ ಗಾಡಿಯ ನಿರ್ಮಿತಿಯಾದ ಮೇಲೆ ಗಾಡಿಗಳಿಗೆ ಕಟ್ಟಿ ಸಂಚಾರಕ್ಕಾಗಿ ಉಪಯೋಗ ಮಾಡಿಕೊಂಡನು. ಈ ಮಧ್ಯೆ ಪ್ರಾಣಿಗಳ ಮೇಲೆ ಹಿಡಿತವನ್ನು ಸಾಧಿಸಿಕೊಳ್ಳಲು ಅವುಗಳಿಗೆ ಕೋಲಿನಿಂದ ಹೊಡೆಯುತ್ತಿದ್ದನು. ಮುಂದೆ ಮನುಷ್ಯನಿಗೆ ತಿಳಿಯಲು ಶುರುಮಾಡಿದ ನಂತರ ಅವುಗಳಿಗೆ ಹಿಂಸಿಸದೆ ಅವುಗಳ ಜೊತೆಗೆ ಪ್ರೀತಿಯಿಂದ ವರ್ತಿಸಲು ಶುರು ಮಾಡಿದನು. ಆದರೂ ಕೆಲವು ಭಾವನೆಗಳಿಲ್ಲದ ಕ್ರೂರ ಮನುಷ್ಯರು ಪ್ರಾಣಿಗಳಿಗೆ ಇಂದಿಗೂ ಹಿಂಸೆ ನೀಡುತ್ತಾರೆ. ಇದೇ ರೀತಿಯಾಗಿ ಕೋಣಕ್ಕೆ ಹಿಂಸೆ ನೀಡುತ್ತಾ ಗಾಡಿಯನ್ನು ಓಡಿಸುವ 5 ಜನರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಆದಂಥ ಸುಶಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಇದರಲ್ಲಿ ಗಾಡಿಯನ್ನು ಓಡಿಸುವಾಗ ಐದು ಜನರು ಗಾಡಿಯ ಹೆಚ್ಚುವರಿ ವೇಗ ಹೆಚ್ಚಿಸುವ ಸಲುವಾಗಿ ಕೋಣಕ್ಕೆ ಸಿಕ್ಕಾಪಟ್ಟೆ ಬಡಿಗೆಯಿಂದ ಹೊಡೆಯುತ್ತಿದ್ದಾರೆ. ಕೋಣವು ತನ್ನ ಶಕ್ತಿ ಮೀರಿ ಓಡಿದರೂ ಸಹ ಗಾಡಿಯಲ್ಲಿ ಕುಳಿತವರು ಅದಕ್ಕೆ ಹಾಗೆಯೇ ಥಳಿಸುತ್ತಿದ್ದರು. ಪಾಪ ಕೋಣವು ಸಹ ಹಾಗೆಯೇ ತನ್ನ ಶಕ್ತಿ ಮೀರಿ ಓಡಿಯೇ ಓಡುತ್ತಿದೆ. ಅವರು ಮಾಡುತ್ತಿರುವ ಹೆಚ್ಚಿನ ಹಿಂಸೆಯನ್ನು ತಾಳಲಾರದೆ ಕೋಣವು ಅವರಿಗೆ ಸರಿಯಾಗಿ ಪಾಠ ಕಲಿಸುವ ಯೋಚನೆ ಮಾಡಿ ಯೂ ಟರ್ನ್ ಬಂದಾಗ ರಸ್ತೆ ಬದಿಯಲ್ಲಿರುವ ಡಿವೈಡರ್ ಗೆ ಗಾಡಿಯನ್ನು ಹಾಯಿಸಿ ಬಿಟ್ಟಿದೆ. ಇದರಿಂದ ಗಾಡಿಯ ಚಕ್ರವು ವೇಗವಾಗಿ ಡಿವೈಡರ್ ಗೆ ಬಡಿದು ನಂತರ ಹವೆಯಲ್ಲಿ ಗಾಡಿಯೇ ಮೇಲಕ್ಕೆದ್ದು 5 ಜನರನ್ನು ಕ್ಷಣಾರ್ಧದಲ್ಲಿ ಕೆಳಗೆ ಚೆಲ್ಲಾಪಿಲ್ಲಿಯಾಗಿ ಕೆಡವಿದೆ.
ವಿಡಿಯೋ ನೋಡಿ
Karma 🙏
(Watch till the end) pic.twitter.com/4ixpQ7Z5xO— Susanta Nanda IFS (@susantananda3) March 28, 2022
ಈ ವಿಡಿಯೋಗೆ ಸುಶಾಂತ ನಂದಾ ಅವರು ಕರ್ಮ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಉದ್ದೇಶದಿಂದ ಈ ಕ್ಯಾಪ್ಷನ್ ನಂದಾ ಅವರು ನೀಡಿರಬಹುದು. ಪ್ರಸ್ತುತ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ತರತರದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.