ಮಗುವಿನ ಗಾಳಿಪಟದ ಆಸೆ ಉಳಿಸಿತು ಇನ್ನೊಂದು ಪುಟ್ಟ ಮಗುವಿನ ಜೀವ ! ಅಲ್ಲಿ ನಡೆದದ್ದಾದರೂ ಏನು? ನೋಡಿ ಈ ವಿಡಿಯೋದಲ್ಲಿ…

ಯಾವುದೇ ವ್ಯಕ್ತಿಯ ಜೊತೆಗೆ ಏನಾದರೂ ದುರದೃಷ್ಟಕರ ಘಟನೆ ನಡೆದಾಗ ಆ ವ್ಯಕ್ತಿಯು ನನ್ನ ಜೊತೆಗೆಯೇ ಏಕೆ ಹೀಗಾಗುತ್ತದೆ ಎಂಬ ಭಾವನೆ ಮನದಲ್ಲಿ ಮೂಡಿ ಬರುತ್ತದೆ. ಹೀಗಾದಾಗ ಪ್ರಸ್ತುತ ವ್ಯಕ್ತಿಯು ಎಷ್ಟೋ ಸಲ ತನ್ನ ಹಣೆ ಬರಹಕ್ಕೆ ದೋಷ ನೀಡುತ್ತಾನೆ. ಕೆಲವೊಂದು ಸಲ ಅದೃಷ್ಟವು ಸಹ ಒಲಿದು ಬರುತ್ತದೆ. ಆಗ ಅದರ ಮೇಲೆ ವಿಶ್ವಾಸವಿಡುವದೇ ಕಠಿಣವಾಗುತ್ತದೆ. ಈಗ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏಕೆಂದರೆ ಈ ವಿಡಿಯೋದಲ್ಲಿ ಒಂದು ಮಗುವಿನ ಅದೃಷ್ಟ ತುಂಬಾ ಬಲಶಾಲಿಯಾಗಿದ್ದು ಕಂಡು ಬಂದಿದೆ. ಇಲ್ಲಿರುವ ಸಿಸಿಟಿವಿ ಫುಟೇಜ್ ನಲ್ಲಿ ಒಂದು ಮಗು ಕೆಳಗೆ ಬೀಳುತ್ತಿರುವ ಗಾಳಿಪಟವನ್ನು ನೋಡುತ್ತಿರುತ್ತಾನೆ. ಆ ಮಗು ಕೆಳಗೆ ಬಿದ್ದ ಗಾಳಿಪಟವನ್ನು ತೆಗೆದುಕೊಳ್ಳುವ ಆಸೆಯಿಂದ ಅದರ ಹತ್ತಿರ ಹೋಗಿ ಬಾಗಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಸರಿಯಾಗಿ ಅದೇ ಸಮಯಕ್ಕೆ ಮೇಲಿನಿಂದ ಒಂದು ಮಗು ಆತನ ಬೆನ್ನ ಮೇಲೆ ಬೀಳುತ್ತದೆ. ಮೇಲಿನ ಮಗು ಸಹ ಗಾಳಿಪಟದ ಆಸೆಗಾಗಿ ಒಂದನೇ ಅಂತಸ್ತಿನಿಂದ ಕೆಳಗೆ ಬಿದ್ದಿರುವುದು ತಿಳಿದುಬರುತ್ತದೆ. ಒಂದನೇ ಅಂತಸ್ತಿನ ಮಗು ಕೆಳಗೆ ಬಾಗಿ ನಿಂತ ಮಗುವಿನ ಮೇಲೆ ಬಿದ್ದದ್ದರಿಂದ ಯಾವುದೇ ರೀತಿಯ ಗಾಯವಾಗದೇ ಆತ ಸುರಕ್ಷಿತವಾಗಿ ಬದುಕುಳಿದಿದ್ದಾನೆ. ಮಗು ಮೇಲಿನಿಂದ ಬಿದ್ದದ್ದರಿಂದ ಕೆಳಗಿನ ಮಗುವಿಗೂ ಯಾವ ರೀತಿಯ ತೊಂದರೆ ಆಗಿಲ್ಲವೆಂಬುದು ವಿಡಿಯೋದಿಂದ ಕಂಡುಬರುತ್ತದೆ. ಹೀಗಾಗಿ ರಸ್ತೆಯ ಮೇಲೆ ನಿಂತ ಮಗುವಿಗೆ ಗಾಳಿಪಟದ ಆಸೆ ಅಲ್ಲಿಗೆ ಕರೆದೊಯ್ಯಿತು. ಮತ್ತು ಮೇಲಿನಿಂದ ಬಿದ್ದ ಮಗು ಸುರಕ್ಷಿತವಾಗಿ ಬದುಕುಳಿಯಿತು. ಈ ವಿಡಿಯೋ ನೋಡಿದಾಗ ದೇವರ ಲೀಲೆ ನಿಜಕ್ಕೂ ಅದ್ಭುತವಾಗಿದೆ ಎಂದು ಎನಿಸುತ್ತದೆ.

ವಿಡಿಯೋ ನೋಡಿ

18 ಸೆಕೆಂಡಿನ ಈ ವಿಡಿಯೋವನ್ನು ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಈ ವಿಡಿಯೋವನ್ನು @Rajneeshht ಹೆಸರಿನ ಅಕೌಂಟ್ ನಿಂದ ಟ್ವೀಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿದ ನಂತರ ಕ್ಯಾಪ್ಷನ್ ನಲ್ಲಿ “ಒಂದು ಅದ್ಭುತ ಅಪ್ರತಿಮವಾದ ದೃಶ್ಯ, ಅಂತಸ್ತಿನ ಮೇಲಿಂದ ಕೆಳಗೆ ಬೀಳುವ ಮಗುವನ್ನು ಉಳಿಸುವ ಸಲುವಾಗಿ ದೇವರು ಗಾಳಿಪಟವನ್ನು ತೆಗೆದುಕೊಳ್ಳಲು ಇನ್ನೊಂದು ಮಗುವಿಗೆ ಕಳುಹಿಸಿದ್ದಾನೆ, ದೇವರಿಚ್ಛೆಯ ವಿರುದ್ಧ ಇಲ್ಲಿ ಏನೂ ನಡೆಯಲು ಸಾಧ್ಯವಿಲ್ಲ !” ಎಂದಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ತಮ್ಮ ಪ್ರತಿಕ್ರಿಯೆಯಲ್ಲಿ ಮಗುವಿನ ಅದೃಷ್ಟ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.