ಆರ್ಮಿಯಲ್ಲಿ ಭರ್ತಿ ಸಲುವಾಗಿ ಪ್ರದೀಪ ಮಧ್ಯರಾತ್ರಿ ಓಡುವುದು ನಿಂತಿತು; ತಾಯಿಗೆ ಉಪಚಾರ; ‘ಶಾಪರ್ಸ್ ಸ್ಟಾಪ್’ ಕಂಪನಿ ನೀಡಿತು ಇಷ್ಟೊಂದು ಲಕ್ಷ ಹಣ…!

ಕೆಲವೇ ದಿನಗಳ ಹಿಂದೆ ರಸ್ತೆಯ ಮೇಲೆ ಮಧ್ಯರಾತ್ರಿಯ ಕತ್ತಲಿನಲ್ಲಿ ಆರ್ಮಿಯಲ್ಲಿ ಭರ್ತಿಯಾಗುವ ಸಲುವಾಗಿ ಗುರಿಯಿಟ್ಟು ಓಡುತ್ತಿರುವ ತರುಣನ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗಿತ್ತು. ಆತನ ಪರಿಶ್ರಮ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸಗಳ ಮನಸ್ಸನ್ನು ಗೆದ್ದಿತ್ತು. ಆತ ಓಡುವ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ವಿನೋದ್ ಕಾಪ್ರಿ ಅವರು ವಿಡಿಯೋ ಒಂದನ್ನು ಮಾಡಿದ್ದರು. ಈ ವಿಡಿಯೋದಲ್ಲಿ ತರುಣನಿಗೆ ಪದೇಪದೇ ತಮ್ಮ ಗಾಡಿಯಲ್ಲಿ ಬಂದು ಕೂಡು ನಿನಗೆ ಲಿಫ್ಟ್ ಕೊಡುತ್ತೇನೆ ಎಂದು ಕೇಳುತ್ತಿದ್ದರು. ಆ ಸಮಯದಲ್ಲಿ ಅವರಿಬ್ಬರ ಮಧ್ಯ ನಡೆದ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿತ್ತು. ಆತ ಲಿಫ್ಟ್ ನಿರಾಕರಿಸುವುದರ ಹಿಂದಿನ ಉದ್ದೇಶ ಮತ್ತು ತಾನು ಓಡುತ್ತಿರುವ ಕಾರಣಗಳ ಜೊತೆಗೆ ಮನೆಯ ಪರಿಸ್ಥಿತಿಯನ್ನು ಹೇಳಿದ್ದ. ಆತನ ತಾಯಿ ಆಸ್ಪತ್ರೆಯಲ್ಲಿದ್ದದ್ದು ಮತ್ತು ಅಣ್ಣನಿಗಾಗಿ ತಾನೇ ಅಡುಗೆ ಮಾಡುವುದು ಹೀಗೆ ಎಲ್ಲ ಸಮಸ್ಯೆಗಳನ್ನು ಹೇಳಿಕೊಂಡಿದ್ದನು. ಉದರ ನಿರ್ವಹಣೆಗೆ ಮ್ಯಾಗ್ಡೊನಾಲ್ಡ್ ಹೋಟೆಲೊಂದರಲ್ಲಿ ಕೆಲಸ ಮಾಡುವುದು ನಂತರ ಮನೆಗೆ ಓಡುತ್ತಾ ಹೋಗುವುದು ಇದೆಲ್ಲವನ್ನು ಹೇಳಿದ್ದನು. ಈ ವಿಡಿಯೋ ಸದ್ಯ ಎಲ್ಲ ಕಡೆಗೆ ವೈರಲ್ ಆಗಿರುವುದರಿಂದ ಪ್ರದೀಪನಿಗೆ ಒಂದರಮೇಲೊಂದರಂತೆ ಸಹಾಯ ಮಾಡಲು ಅನೇಕ ಕೈಗಳು ಚಾಚುತ್ತಿವೆ.

ವಿಡಿಯೋ ವೈರಲ್ ಆದ ನಂತರ ರಿಟಾಯರ್ಡ್ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ, ಮಹಿಂದ್ರ ಕಂಪನಿಯ ಮಾಲೀಕರಾದ ಆನಂದ್ ಮಹೀಂದ್ರಾ ಹೀಗೆ ಅನೇಕರ ಹೆಸರು ಸಹಾಯ ಮಾಡುವುದರಲ್ಲಿ ಶಾಮಿಲಾಗಿವೆ. ಈಗ ಪ್ರದೀಪನಿಗೆ ಬಟ್ಟೆಗಳ ರಿಟೇಲ್ ಕ್ಷೇತ್ರದಲ್ಲಿಯ ದೊಡ್ಡ ಕಂಪನಿಯಾದ ‘ಶಾಪರ್ಸ್ ಸ್ಟಾಪ್’ ದೊಡ್ಡ ಸಹಾಯವನ್ನು ಮಾಡಿದ್ದಾರೆ. ಪ್ರದೀಪನ ತಾಯಿಯ ಒಳ್ಳೆಯ ಆರೋಗ್ಯದ ಉಪಚಾರಕ್ಕಾಗಿ ಶಾಪರ್ಸ್ ಸ್ಟಾಪ್ ಕಂಪನಿಯು 2.5 ಲಕ್ಷ ರೂಪಾಯಿಗಳ ಚೆಕ್ ನೀಡಿದೆ. ಇದರಿಂದ ಪ್ರದೀಪನಿಗೆ ಸೈನ್ಯದಲ್ಲಿ ಭರ್ತಿಯಾಗುವ ಕನಸಿನ ಕಡೆಗೂ ಮತ್ತು ತಾಯಿಯ ಆರೋಗ್ಯದ ಗಮನ ನೀಡಲು ಸಾಧ್ಯವಾಗಲಿದೆ. ಒಟ್ಟಿನಲ್ಲಿ ಚಿತ್ರನಿರ್ಮಾಪಕ ವಿನೋದ್ ಕಾಪ್ರಿ ಅವರು ಮಾಡಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತು.