ಶೂಟ್ ಮಾಡುವ ಕ್ಯಾಮೆರಾಮನ್ ನ ವೇಗದ ಓಟವನ್ನು ನೋಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಆಟಗಾರನೇ ಬೆಚ್ಚಿ ಬಿದ್ದನು ! ನೋಡಿ ವೈರಲ್ ವಿಡಿಯೋದಲ್ಲಿ…
ಆಟಗಳಲ್ಲಿ ಎಷ್ಟೋ ಸಲ ಅನೇಕ ವಿಚಿತ್ರ ಮತ್ತು ತಮಾಷೆಯ ಅಷ್ಟೇ ಗಾಂಭೀರ್ಯದ ಘಟನೆಗಳು ನಡೆಯುತ್ತವೆ. ಆ ಸನ್ನಿವೇಶಗಳು ನಂತರ ಸೋಶಿಯಲ್ ಮೀಡಿಯಾ ಮುಖಾಂತರ ಗಮನಕ್ಕೆ ಬರುತ್ತವೆ. ಎಲ್ಲೋ ನಡೆಯುವ ಆಟಗಳನ್ನು ನಮ್ಮ ಮನೆಯವರಿಗೆ ಸರಿಯಾಗಿ ಮುಟ್ಟಿಸುವ ಜವಾಬ್ದಾರಿ ಟೆಕ್ನಾಲಜಿ ಹಾಗೂ ಕ್ಯಾಮೆರಾಮೆನ್ ಗಳದ್ದಾಗಿರುತ್ತದೆ. ಅಲ್ಲಿ ನಡೆಯುವ ಪ್ರಸಂಗಗಳ ಅದ್ಭುತವಾದ ಕ್ಷಣಗಳನ್ನು ಸರಿಯಾಗಿ ತಮ್ಮ ಕ್ಯಾಮೆರಾದಲ್ಲಿ ಫೋಟೋ ಅಥವಾ ವಿಡಿಯೋ ಮುಖಾಂತರ ಸೆರೆಹಿಡಿಯಲು ಕ್ಯಾಮೆರಾಮೆನ್ ತುಂಬಾ ಪರಿಶ್ರಮ ಪಡಬೇಕಾಗುತ್ತದೆ.
ವಾಸ್ತವವಾಗಿ ಯಾವ ಕೆಲಸವೂ ಸಹ ಸಹಜ ಮತ್ತು ಸರಳವಾಗಿಲ್ಲ. ಒಳ್ಳೆಯದನ್ನು ನೀಡಲು ಪ್ರತಿಯೊಂದು ಫೀಲ್ಡಿನಲ್ಲಿ ಪರಿಶ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ. ಆದರೆ ಈ ಪರಿಶ್ರಮವನ್ನು ತೆಗೆದುಕೊಳ್ಳುವಾಗ ವ್ಯಕ್ತಿಯು ತನಗೆ ಗೊತ್ತಿಲ್ಲದೆ ಅನೇಕ ಸಲ ಇನ್ನೊಬ್ಬರು ಹುಬ್ಬೇರಿಸುವಂಥ ಕೃತಿಗಳನ್ನು ಮಾಡುತ್ತಿರುತ್ತಾನೆ. ಇಲ್ಲಿ ನಡೆದದ್ದು ಸಹ ಇದೇ ಆಗಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಕ್ಯಾಮೆರಾಮೆನ್ ಒಬ್ಬ ಓಟದ ಸ್ಪರ್ಧೆಯಲ್ಲಿ ಶೂಟ್ ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಆತನು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಆಟಗಾರರ ಜೊತೆಗೆ ಭಾರವಾದ ಕ್ಯಾಮೆರಾ ತೆಗೆದುಕೊಂಡು ಓಡುತ್ತಿರುವುದು ಕಂಡುಬರುತ್ತಿದೆ. ಇಲ್ಲಿ ಗಮನಿಸುವ ಮುಖ್ಯವಾದ ಅಂಶವೇನೆಂದರೆ ಕ್ಯಾಮೆರಾಮೆನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಆಟಗಾರರರಿಗಿಂತಲೂ ಒಂದು ಹೆಜ್ಜೆ ಮುಂದೆಯೇ ಓಡುತ್ತಿದ್ದಾನೆ ಜೊತೆಗೆ ಭಾರವಾದ ಕ್ಯಾಮೆರಾ ತೆಗೆದುಕೊಂಡು. ಇದನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಆಟಗಾರನೊಬ್ಬ ತುಂಬಾ ಆಶ್ಚರ್ಯದಿಂದ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದಾನೆ.
ನೋಡಿ ಈ ವೀಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ನೇಟಿಜನ್ಸ್ ಗಳಿಗೆ ಆಟಗಾರರಿಗಿಂತ ಕ್ಯಾಮೆರಾಮೆನ್ ನ ಓಟವೇ ತುಂಬಾ ಇಷ್ಟವಾಗಿದೆ. ಓಟದ ಸ್ಪರ್ಧೆಯಲ್ಲಿ ಕ್ಯಾಮೆರಾಮೆನ್ ಭಾಗವಹಿಸಿದ್ದರೆ ಆತನೇ ಗೋಲ್ಡ್ ಮೆಡಲ್ ಗೆಲ್ಲುತ್ತಿದ್ದನು ಎಂದು ನೇಟಿಜನ್ಸ್ ಗಳು ಕಾಮೆಂಟ್ ಮಾಡಿದ್ದಾರೆ.