ಮಹಾರಾಷ್ಟ್ರ : ಕೊರೊನಾ ಪಾಸಿಟಿವ್ ಮಹಿಳೆ ನಾಪತ್ತೆ, 8 ದಿನದ ನಂತರ ಆಸ್ಪತ್ರೆಯ ಶೌಚಾಲಯದಲ್ಲಿ ಶವ ಪತ್ತೆ!
ಮುಂಬಯಿ : ಮಹಾರಾಷ್ಟ್ರರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ತುಂಬಾ ನಿರ್ಲಕ್ಷ್ಯತನದ ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ 80 ವರ್ಷದ ವೃದ್ಧ ಮಹಿಳೆ ಕೋರೊನಾ ಪಾಸಿಟಿವ್ ಆಗಿದ್ದಳು, ಈ ಮಹಿಳೆ ಕಳೆದ ಜೂನ್ 2 ರಿಂದ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಳು. ಆದರೆ 8 ದಿವಸಗಳ ನಂತರ ಅದೇ ಆಸ್ಪತ್ರೆಯ ಶೌಚಾಲಯದಲ್ಲಿ ಅವಳ ಮೃತ ದೇಹ ಸಿಕ್ಕಿದೆ. 8 ದಿವಸಗಳ ವರೆಗೆ ಈ ಶವ ಆಸ್ಪತ್ರೆಯ ಶೌಚಾಲಯದಲ್ಲಿಯೇ ಬಿದ್ದಿತ್ತು, ಆದರೆ ಅಲ್ಲಿದ್ದ ಯಾವ ಸಿಬ್ಬಂದಿಗೂ ಇದರ ಕುರಿತು ತಿಳಿದೇ ಇಲ್ಲ.
80 ವರ್ಷದ ವೃದ್ಧ ಮಹಿಳೆಯ ಸೊಸೆಯು ಕೋರೊನಾ ವೈರಸ್ ನಿಂದ ಮೃತ ಪಟ್ಟಿದ್ದಳು, ಆದರೆ ಅದೇ ಸಮಯದಲ್ಲಿ ಈ ಮಹಿಳೆಯ ಆರೋಗ್ಯ ಹದಗೆಡಲು ಪ್ರಾರಂಭವಾಯಿತು, ಆಗ ಅವಳನ್ನು ಭೂಸಾವಳ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಕೆಲವು ದಿವಸಗಳ ನಂತರ ದಿನಾಂಕ 1 ಜೂನ್ ರಂದು ಅವಳನ್ನು ಜಳಗಾಂವ ಸಿವಿಲ್ ಆಸ್ಪತ್ರೆಯಲ್ಲಿ ವರ್ಗಾಯಿಸಲಾಯಿತು. ಅಲ್ಲಿ ವೃದ್ಧ ಮಹಿಳೆಯ ಕೋರೊನಾ ವೈರಸ್ ತಪಾಸಣೆ ಮಾಡಿದಾಗ ಅವಳ ರಿಪೋರ್ಟ್ ಪಾಸಿಟಿವ್ ಬಂದಿತು. ಅದನ್ನು ತಿಳಿದ ಮರುದಿನವೇ ಅಂದರೆ ಜೂನ್ 2 ರಂದು ಮಹಿಳೆ ನಾಪತ್ತೆಯಾದಳು. ನಾಪತ್ತೆಯಾಗಿದ್ದರಿಂದ ಪೊಲೀಸ್ ಸ್ಟೇಷನ್ ನಲ್ಲಿ ಮಿಸ್ಸಿಂಗ್ ಕಂಪ್ಲೀಟ್ ಸಹ ಮಾಡಿದ್ದರು.

ಜಲಗಾಂವ ಡಿಎಂ ಅವಿನಾಶ ಡಾಂಗೆಯವರು ನೀಡಿದ ಮಾಹಿತಿ ಪ್ರಕಾರ, ” ಇಂದು ಮುಂಜಾನೆ 9.30 ಗಂಟೆಗೆ ಸಿವಿಲ್ ಆಸ್ಪತ್ರೆಯಲ್ಲಿ 80 ವರ್ಷದ ವೃದ್ಧ ಮಹಿಳೆಯ ಶವ ಶೌಚಾಲಯದಲ್ಲಿ ಸಿಕ್ಕಿದೆ ಎಂದು ತಿಳಿದುಬಂದಿದೆ. ಇದು ಬಹಳ ಗಂಭೀರವಾದ ವಿಷಯವಾಗಿದೆ ಅಲ್ಲದೆ ಅತ್ಯಂತ ನಿರ್ಲಕ್ಷ್ಯತನದ ವಿಷಯವು ಆಗಿದೆ. ಆಸ್ಪತ್ರೆಯಲ್ಲಿಯ ಶೌಚಾಲಯ ದಿನದಲ್ಲಿ ಸುಮಾರು 2-3 ಸಲ ಸ್ವಚ್ಛಗೊಳಿಸಲಾಗುತ್ತದೆ, ಆ ಸಮಯದಲ್ಲಿ ಶವ ಯಾರು ನೋಡದಿರಲು ಹೇಗೆ ಸಾಧ್ಯ? ನಾವು ಈ ಘಟನೆಯ ಕುರಿತು ಅತ್ಯಂತ ಕಠೋರವಾದ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಇಂತಹದೇ ಒಂದು ಘಟನೆ ಮುಂಬೈನ ಶತಾಬ್ದಿ ಆಸ್ಪತ್ರೆಯಲ್ಲಿ ಸಹ ಕಂಡು ಬಂದಿತ್ತು. 80 ವರ್ಷದ ಕರೋನಾ ಪಾಸಿಟಿವ್ ವೃದ್ಧ ಮಹಿಳೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು ಅದು ಆಸ್ಪತ್ರೆಯಲ್ಲಿರುವ ಯಾವುದೇ ಸಿಬ್ಬಂದಿಗೆ ಗುರುತು ಸಹ ಆಗಿರಲಿಲ್ಲ. ಎರಡು ದಿವಸಗಳ ನಂತರ ಆ ವೃದ್ಧ ಮಹಿಳೆಯ ಮೃತಶರೀರ ಬೋರಿವಲಿ ಸ್ಟೇಷನ್ ಸಮೀಪ ಸಿಕ್ಕಿತ್ತು.