ಹೈಟ್ ಇರುವುದು ಒಳ್ಳೆಯದೋ ಅಥವಾ ಕೆಟ್ಟದ್ದು? ಹೈಟ್ ನಿಂದಾಗಿ ವರ್ಲ್ಡ್ ರೆಕಾರ್ಡ್ ಮಾಡೆಲ್ ಮಹಿಳೆ ಹೇಳುವ ಮಾತೇನು…ನೋಡಿಲ್ಲಿ.

ತಾವು ಎತ್ತರವಾಗಿರಬೇಕೆಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಅದರಲ್ಲೂ ಹುಡುಗಿಯರಿಗೆ ನಾವು ಇನ್ನಷ್ಟು ಎತ್ತರವಾಗಿ ಇರಬೇಕೆಂದು ಸದಾ ವಿಚಾರ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ಅವರು ಎತ್ತರವಾದ ಚಪ್ಪಲಿಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಆದರೆ ಒಬ್ಬಳು ಮೊಡೆಲ್ ಮಾತ್ರ ತನ್ನ ಎತ್ತರವಾದ ದೇಹದ ಬಗ್ಗೆ ಮುನಿಸಿಕೊಂಡಿದ್ದಾಳೆ. ತನ್ನ ಅತಿ ಎತ್ತರದ ದೇಹದಿಂದಾಗಿ ಅಕ್ಷರಶಃ ಬೇಸರಿಸಿಕೊಂಡಿದ್ದಾಳೆ. ಹೈಟ್ ಇರುವುದರ ಲಾಭಗಳು ನಮಗೆ ಗೊತ್ತಿವೆ, ಆದರೆ ಅತಿಯಾದ ಹೈಟ್ ನಿಂದಾಗಿ ಆಗುವ ಹಾನಿಗಳು ಯಾವುದು ಎಂಬುದನ್ನು ಎಂದಾದರೂ ವಿಚಾರ ಮಾಡಿದ್ದೀರಾ?

ಒಬ್ಬಳು ರಶಿಯನ್ ಮಾಡೆಲ್ ಏಕಟೆರಿನಾ ಲಿಸಿನಾ ಹೇಳುತ್ತಾಳೆ, ಆಕೆ ತನ್ನ ಅತಿಯಾದ ಎತ್ತರದಿಂದಾಗಿ ಅನೇಕ ಸಮಸ್ಯೆಗಳಿಗೆ ಫೇಸ್ ಮಾಡಿಕೊಳ್ಳುತ್ತಾಳಂತೆ. ಆಕೆಯು ತನ್ನ ದೇಹದ ಅತಿಯಾದ ಎತ್ತರದಿಂದಾಗಿ ಗಿನ್ನಿಸ್ ಬುಕ್ ನಲ್ಲಿ ವರ್ಲ್ಡ್ ರೆಕಾರ್ಡ್ ಸಹ ಮಾಡಿದ್ದಾಳೆ. ಆದರೆ ಈ ಎತ್ತರವು ಆಕೆಯ ಜೀವನದ ಮೇಲೆ ತುಂಬಾ ವಿಪರೀತವಾದ ಪರಿಣಾಮ ಮಾಡಿದೆ. ಹೀಗಾಗಿ ಪ್ರಸ್ತುತ ಮಹಿಳೆಯ ಅತಿಯಾದ ಎತ್ತರದಿಂದ ನಿಜಕ್ಕೂ ಬೇಸತ್ತಿದ್ದಾಳೆ.

ಜಗತ್ತಿನ ಎಲ್ಲಕ್ಕೂ ಉದ್ದವಾದ ಕಾಲುಗಳನ್ನು ಹೊಂದಿರುವ ಮಹಿಳೆ…

34 ವರ್ಷದ ಏಕಟೆರಿನಾ ಳ ಎತ್ತರ 6 ಫೀಟ್ 9 ಇಂಚು ಇದೆ. ಈ ಜಗತ್ತಿನಲ್ಲಿ ಎಲ್ಲರಿಗಿಂತ ಉದ್ದವಾದ ಕಾಲುಗಳನ್ನು ಹೊಂದಿರುವ ಮಹಿಳೆಯಾಗಿದ್ದಾಳೆ. ಇದೇ ಕಾರಣದಿಂದ ಆಕೆಯ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರಿದೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡುವಾಗ ಮಹಿಳೆಯು ತನ್ನ ಅತಿಯಾದ ಎತ್ತರದಿಂದಾಗಿ ನನ್ನ ಜೀವನದ ಮೇಲೆ ಹೇಗೆ ಪ್ರತಿಕೂಲ ಪರಿಣಾಮವಾಗಿದೆ ಎಂದು ಹೇಳಿದ್ದಾಳೆ.

ಡೆಲಿ ಸ್ಟಾರ್ ನಲ್ಲಿ ಪ್ರಸಿದ್ಧಿಯಾದ ವೃತ್ತದ ಪ್ರಕಾರ, ಈ ಮಹಿಳೆಗೆ ತನ್ನಷ್ಟು ಎತ್ತರದ ಸಂಗಾತಿ ಸಿಗುತ್ತಿಲ್ಲ. ಆಕೆ ತನಗಿಂತಲೂ ಒಂದು ಅಡಿ ಕಡಿಮೆ ಇದ್ದ ಹುಡುಗನ ಜೊತೆಗೆ ಡೇಟ್ ಮಾಡಲು ತಯಾರಾಗಿದ್ದಾಳೆ. ಆದರೆ ಇದಕ್ಕಿಂತಲೂ ಕಡಿಮೆ ಎತ್ತರದ ವ್ಯಕ್ತಿಯ ಜೊತೆಗೆ ಡೇಟ್ ಮಾಡಲು ಸಿದ್ಧಳಿಲ್ಲ.

ರಶಿಯನ್ ಮಾಡೆಲ್ ಆದ ಏಕಟೆರಿನಾ ಬಾಸ್ಕೆಟ್ ಬಾಲ್ ಆಟಗಾರಳಾಗಿದ್ದಳು. ಆಟದಿಂದ ನಿವೃತ್ತರಾದಮೇಲೆ ಮಾಡೆಲ್ ಕ್ಷೇತ್ರದಲ್ಲಿ ಕಾಲಿಟ್ಟಳು. ಈಕೆಯ ತಂದೆ ತಾಯಿ ಇಬ್ಬರ ಹೈಟ್ ಸಹ 6 ಫೀಟ್ 2 ಇಂಚಿದೆ. ಈಕೆ ಇನ್ಸ್ಟಾಗ್ರಾಮ್ ನಲ್ಲಿಯೂ ತುಂಬಾ ಸಕ್ರಿಯವಾಗಿದ್ದಾಳೆ. ಈಕೆ ತನ್ನ ಅನೇಕ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಶೇರ್ ಮಾಡುತ್ತಲೇ ಇರುತ್ತಾಳೆ. ಆಕೆ ಶೇರ್ ಮಾಡಿದ ಪೋಸ್ಟ್ ಗಳಿಗೆ ಸಾಕಷ್ಟು ಜನರು ಲೈಕ್ ಮಾಡುತ್ತಾರೆ.