ರೋಡ್ ಮೇಲಿನ ಆಕ್ಸಿಡೆಂಟ್ ನೋಡಿರ್ತಿರಾ; ನೀರಿನ ಮೇಲೆ ಬೋಟ್ ಗಳ ಮಧ್ಯೆ ನಡೆದ ಈ ಡಿಕ್ಕಿ ನೋಡಿಲ್ಲ ಅಲ್ವಾ? ನೋಡಿ ಈ ವಿಡಿಯೋದಲ್ಲಿ…

ದಿನದಿಂದ ದಿನಕ್ಕೆ ರೋಡ್ ಮೇಲೆ ವಾಹನಗಳ ಸಂಖ್ಯೆ ಅಗಣಿತವಾಗಿ ಹೆಚ್ಚುತ್ತಿದೆ. ರಸ್ತೆಗಳು ಎಷ್ಟೇ ಅಗಲ ಮಾಡಿದರೂ ಮತ್ತು ರಸ್ತೆಯ ಮಧ್ಯೆ ಡಿವೈಡರ್ ಉಪಯೋಗಿಸಿದರೂ ಅಪಘಾತಗಳಾಗುವ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳವೇ ಆಗುತ್ತಿದೆ ಕಡಿಮೆ ಇಲ್ಲ. ರೋಡ್ ಮೇಲೆ ನಡೆಯುವ ಅಪಘಾತಗಳು ಜನರಿಗೆ ಸಾಮಾನ್ಯವಾಗಿ ಬಿಟ್ಟಿದೆ ಅನ್ನೋತರ ಆಗಿದೆ. ಎಷ್ಟೋ ಸಲ ಆಕಾಶದಲ್ಲಿ ವಿಮಾನಗಳು ಸಹ ಒಂದಕ್ಕೊಂದು ಡಿಕ್ಕಿ ಆಗಿದ್ದನ್ನು ಕೇಳಿದ್ದೇವೆ. ಆದರೆ ನೀರಿನಲ್ಲಿ ಬೋಟ್ ಗಳ ಮಧ್ಯೆ ನಡೆದ ಎಕ್ಸಿಡೆಂಟ್ ಎಂದಾದರೂ ವೀಕ್ಷಿಸಿದ್ದೀರಾ? ಒಂದು ವೇಳೆ ಇಲ್ಲವಾದರೆ ಈ ವಿಡಿಯೋದಲ್ಲಿ ನೋಡಬಹುದು.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ aquaswamp ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು, ಈ ವಿಡಿಯೋವನ್ನು ಇಲ್ಲಿಯವರೆಗೆ 31.4 ಮಿಲಿಯನ್ ಜನರು ನೋಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋಗೆ 2.2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಒಂದು ಬೋಟಿನಲ್ಲಿ ಕೆಲವರು ಕುಳಿತು ಎಂಜಾಯ್ ಮಾಡುತ್ತ ಮೀನು ಹಿಡಿಯುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಎದುರಿನಿಂದ ಹಠಾತ್ತನೆ ದೊಡ್ಡದಾದ ಬೋಟ್ ಒಂದು ವೇಗವಾಗಿ ಧುಮ್ಮಿಕ್ಕಿ ತಮ್ಮ ಕಡೆಗೆಯೇ ಬರುತ್ತಿರುವುದನ್ನು ಕಂಡು ಬೋಟಿನಲ್ಲಿದ್ದವರು ಬೆಚ್ಚಿಬಿದ್ದು ಒಂದೇ ಸವನೆ ಎದುರಿನ ಬೋಟಿನವರಿಗೆ ಕೈ ಸನ್ನೆ ಮಾಡುತ್ತಾ ಜೋರು ಜೋರಾಗಿ ಗಂಟಲು ಹರಿಯುವಂತೆ ಅರಚುತ್ತಿದ್ದಾರೆ. ಆದರೆ ದುರದೃಷ್ಟ ದೊಡ್ಡದಾದ ಮತ್ತು ವೇಗವಾಗಿ ಧುಮ್ಮಿಕ್ಕಿ ಬರುತ್ತಿರುವ ಬೋಟಿನಲ್ಲಿದ್ದವರಿಗೆ ಇವರ ಕೈಸನ್ನೆ ಮತ್ತು ಶಬ್ದ ಎಲ್ಲಿಂದ ಕೇಳಿಸಬೇಕು. ಅಷ್ಟೊತ್ತಿಗಾಗಲೇ ಎದುರಿನ ದೊಡ್ಡದಾದ ಬೋಟ್ ಇವರ ಸಮೀಪ ಬಂದಾಗಿತ್ತು. ಇನ್ನೇನು ಡಿಕ್ಕಿ ಹೊಡೆದೇ ಬಿಡುತ್ತದೆ ಎನ್ನುವಷ್ಟರಲ್ಲಿ ಬೋಟಿನಲ್ಲಿದ್ದ ಮೂರ್ನಾಲ್ಕು ಜನ ಬೋಟನ್ನು ಬಿಟ್ಟು ನೀರಿನಲ್ಲಿ ಧುಮುಕಿದ್ದಾರೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Ocean & See Wildlife (@aquaswamp)

ಈ ವೈರಲ್ ವಿಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದಾರೆ. ಮತ್ತು ಲೈಕ್ ಸಹ ಮಾಡಿದ್ದಾರೆ.