ಸಿಟ್ಟಿನಿಂದ ಓಡುತ್ತ ಅ#ಟ್ಯಾಕ್ ಮಾಡಲು ಬಂದ ಆನೆ, ಜಾಗದಿಂದ ಸ್ವಲ್ಪವೂ ಕದಲದೇ ನಿಂತಲ್ಲೇ ನಿಂತು ಈತ ಮಾಡಿದ್ದೇನು? ವೈರಲ್ ವೀಡಿಯೋ ನೋಡಿ……!!

ಅರಣ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದಷ್ಟಪುಷ್ಟವಾದ ಪ್ರಾಣಿ ಎಂದರೆ ಅದು ಆನೆ. ಆನೆಯನ್ನು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಪಲಾಯನ ಮಾಡುತ್ತೇವೆ. ಏಕೆಂದರೆ ಆನೆಯ ಭಾರವೇ ಅಷ್ಟೊಂದು ಇರುತ್ತದೆ ಅದು ಒಂದು ಹೆಜ್ಜೆ ಮನುಷ್ಯನ ಮೇಲೆ ಇಟ್ಟರೆ ಕೆಳಗಿದ್ದ ಮನುಷ್ಯ ಚೂರು ಚೂರಾಗುತ್ತಾನೆ. ಆದ್ದರಿಂದಲೇ ಈ ಪ್ರಾಣಿಯನ್ನು ಕಂಡಾಗ ಅಲ್ಲಿಂದ ದೂರ ಹೋಗುವದೇ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಆನೆಯನ್ನು ಸಹ ಮನೆಯಲ್ಲಿ ಸಾಕುತ್ತಾರೆ. ಆನೆಯನ್ನು ಸಾಕಿ ಅವುಗಳಿಂದ ತಮಗೆ ಬೇಕಾದ ಭಾರವಾದ ಕೆಲಸ ಸಹ ಮಾಡಿಸಿಕೊಳ್ಳುತ್ತಾರೆ ಹೀಗಾಗಿ ಆನೆ ಇದೊಂದು ಸಹಾಯ ಮಾಡುವ ಪ್ರಾಣಿ ಸಹ ಎಂದು ತಿಳಿಯಲಾಗುತ್ತದೆ.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಈ ವೀಡಿಯೋದಲ್ಲಿ ಆನೆಯ ಕೋಪ ಹಾಗೂ ಮನುಷ್ಯನ ತಾಳ್ಮೆ ಎರಡು ಸಹ ನೋಡಬಹುದು. ಪ್ರಸ್ತುತ ವೀಡಿಯೋದಲ್ಲಿ ನೀವು ನೋಡಬಹುದು ಒಂದು ದೊಡ್ಡ ಆನೆ ಒಬ್ಬ ವ್ಯಕ್ತಿಯನ್ನು ಕಂಡು ಸಿಟ್ಟಿಗೆದ್ದು ವ್ಯಕ್ತಿಯ ಮೇಲೆ ಅ#ಟ್ಯಾಕ್ ಮಾಡಲು ಬರುತ್ತದೆ ಆದರೆ ಆನೆ ಬರುವ ರೂಪ ನೋಡಿದರೆ ಅಲ್ಲಿಂದ ಎಸ್ಕೇಪ್ ಆಗಿ ಬಿಡುವದು ಒಳ್ಳೆಯದು ಅಂತ ನೀವು ಹೇಳುವಿರಿ. ಆದರೆ ಅಲ್ಲಿ ನಡೆದದ್ದೇ ಬೇರೆ ಏನೆಂದರೆ ಆನೆ ಕೋಪದಿಂದ ಓಡೋಡಿ ತನ್ನೊಡಗೆ ಬರುತ್ತಿದ್ದರು ಸಹ ಆ ವ್ಯಕ್ತಿ ತಾನು ನಿಂತಿದ್ದ ಜಾಗದಿಂದ ಸ್ವಲ್ಪವೂ ಕದಲದೇ ಅಲ್ಲಿಯೇ ನಿಂತುಕೊಂಡು ಆನೆಯನ್ನು ಬೆದರಿಸುತ್ತಾನೆ. ಆ ವ್ಯಕ್ತಿಯ ಕೈಯಲ್ಲಿ ಒಂದು ಸಣ್ಣ ಕೋಲು ಇರುತ್ತದೆ ಅದರ ಸಹಾಯದಿಂದ ಆನೆಯನ್ನು ಹೆದರಿಸಿ ಅಲ್ಲಿಂದ ಓಡಿಸಿ ಬಿಡುತ್ತಾನೆ. ವ್ಯಕ್ತಿಯ ಧೈರ್ಯ ಮತ್ತು ಸಾಹಸ ಮೆಚ್ಚಲೇ ಬೇಕು.

ವಿಡಿಯೋ ನೋಡಿ.

ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ wild_animal_shorts ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಪ್ರಸ್ತುತ ವೀಡಿಯೋ ಶೇರ್ ಮಾಡಿದ್ದಾಗಿನಿಂದಲೂ ನೆಟ್ಟಿಗರು ಬಹಳಷ್ಟು ವೀಕ್ಷಣೆ ಮಾಡುತ್ತಿದ್ದಾರೆ.