ಅಂದು ಅಜೇಯ ಶತಕ ಬಾರಿಸಿ ಭಾರತದಿಂದ ಚಾಂಪಿಯನ್ಸ್ ಟ್ರಾಫಿ ಕಸಿದುಕೊಂಡಿದ್ದ; ಇಂದು ಟ್ರಕ್ ಓಡಿಸುತ್ತಾನೆ, ಬಸ್ ತೊಳೆಯುತ್ತಾನೆ!
400 ಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ, 8000 ಸಾವಿರಕ್ಕಿಂತ ಹೆಚ್ಚು ರನ್ ಗಳನ್ನು ಗಳಿಸಿದ, ಈಗ ಪೈಸೆ ಪೈಸೆ ಗಾಗಿ ನಿರ್ಗತಿಕನಾಗಿದ್ದಾನೆ. ಓದಿರಿ ನ್ಯೂಜಿಲ್ಯಾಂಡ್ ದ ದಿಗ್ಗಜ ಆಲ್ ರೌಂಡರ್ ಖ್ರಿಸ್ ಕೇನ್ಸ್ ನ ರೋಚಕ ಕಥೆ.
ಬ್ಯಾಟ್ ಹಿಡಿದಾಗ ಬೌಲರ್ ಗಳು ಚಿಂತೆಯಲ್ಲಿರುತ್ತಿದ್ದರು, ಬೌಲಿಂಗ್ ಮಾಡಲು ಬಂದರೆ ಬ್ಯಾಟ್ಸ್ ಮನ್ ಗಳು ದೃತಿಗೆಡುತ್ತಿದ್ದರು. ಕ್ರಿಕೆಟ್ ನಲ್ಲಿ ಇಂಥ ಆಟಗಾರರೂ ಆಗಿ ಹೋಗಿದ್ದಾರೆ, ಬ್ಯಾಟಿಂಗ್ ನಲ್ಲಿ ಇಲ್ಲದಿದ್ದರೆ, ಬೌಲಿಂಗ್ ನಲ್ಲಾದರೂ ಮ್ಯಾಜಿಕ್ ಮಾಡಿ ತಮ್ಮ ಆಲ್ ರೌಂಡರ್ ಆಟವನ್ನು ಪ್ರದರ್ಶಿಸಿ ಅನೇಕ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟ ಧೀಮಂತರಲ್ಲಿ ಒಬ್ಬರಾದ ನ್ಯೂಜಿಲ್ಯಾಂಡ್ ನ ಖ್ರಿಸ್ ಕೇನ್ಸ್ ರ ಕ್ರಿಕೆಟ್ ನಂತರದ ಸಂಘರ್ಷದ ಜೀವನದ ಬಗ್ಗೆ ತಿಳಿದಕೊಳ್ಳುವಾ. ಇಂದು ಈ ವ್ಯಕ್ತಿ ನಿರ್ಗತಿಕನಾಗಿ ಜೀವನದಲ್ಲಿ ಸಂಘರ್ಷ ಮಾಡುತ್ತಿದ್ದಾನೆ. ಬನ್ನಿ ಖ್ರಿಸ್ ಕೇನ್ಸ್ ಅರಮನೆಯಿಂದ ಗುಡಿಸಲಿನವರೆಗೆ ನಡೆದು ಬಂದ ಪಯಣದ ಬಗ್ಗೆ ತಿಳಿಯುವಾ.

ಖ್ರಿಸ್ ಕೇನ್ಸ್ ರ ಕರಿಯರ್.
ಖ್ರಿಸ್ ಕೇನ್ಸ್ ಅವರ ರೆಕಾರ್ಡ್ ಹೇಳುತ್ತದೆ, ಕ್ರಿಕೆಟ್ ನಲ್ಲಿ ಅವರ ಸ್ಥಾನ ಎಷ್ಟು ಮಹತ್ವಾದ್ದಾಗಿತ್ತು ಎಂದು.
1989 ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲಿ ಕಾಲಿಟ್ಟ ಖ್ರಿಸ್ ಕೇನ್ಸ್ ನ್ಯೂಜಿಲ್ಯಾಂಡ್ ಪರವಾಗಿ 62 ಟೆಸ್ಟ್ ಮ್ಯಾಚ್ ಗಳಲ್ಲಿ 3320 ರನ್ ಗಳಿಸಿದ್ದಾರೆ. 215 ಒನ್ ಡೇ ಪಂದ್ಯಗಳಲ್ಲಿ 4950 ರನ್ ಗಳನ್ನು ಗಳಿಸಿದ್ದಾರೆ. ಇಂಟರ್ ನ್ಯಾಶನಲ್ ಕ್ರಿಕೆಟ್ ನಲ್ಲಿ 9 ಶತಕಗಳನ್ನು ಮತ್ತು 48 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಬೌಲಿಂಗ್ ನಲ್ಲಿಯೂ ಖ್ರಿಸ್ ಅವರು ಕಡಿಮೆಯೇನಿಲ್ಲ. ಈ ದಿಗ್ಗಜ ಆಲ್ ರೌಂಡರ್ ಆಟಗಾರ ಟೆಸ್ಟ್ ನಲ್ಲಿ 218 ಮತ್ತು ಒನ್ ಡೇ ನಲ್ಲಿ 201 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಟೆಸ್ಟ್ ನಲ್ಲಿ 13 ಬಾರಿ ಐದು ವಿಕೆಟ್ ಗಳನ್ನು ಮತ್ತು ಒಂದು ಸಲ 10 ವಿಕೆಟ್ ಗಳನ್ನು ಪಡೆಯುವ ಸಾಧನೆ ಮಾಡಿದ್ದಾರೆ. ಖ್ರಿಸ್ ಅವರ ಪ್ರಥಮ ದರ್ಜೆಯ, ಹೀಗೆ ಒಟ್ಟು ಆಟದ ಸಾಧನೆ ನೋಡಿದರೆ, 21 ಸಾವಿರ ರನ್ ಗಳು ಮತ್ತು 1100 ಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಕಿತ್ತಿ ಹಾಕಿದ್ದಾರೆ.