Video: ಕೇವಲ ಒಂದು ಸೆಕೆಂಡ್ ನಲ್ಲಿ ಕಸರತ್ತು ಮಾಡಿ ತನ್ನ ಜೀವ ಉಳಿಸಿಕೊಂಡು ಹದ್ದಿಗೆ ಚಳ್ಳೆಹಣ್ಣು ತಿನ್ನಿಸಿದ ಮೊಲ!!
ಸಾಮಾನ್ಯವಾಗಿ ಕಾಡಿನಲ್ಲಿ ಬದುಕುವ ಪ್ರತಿಯೊಂದು ಪ್ರಾಣಿ ತನ್ನ ಆಹಾರದ ಸಲುವಾಗಿ ಪರದಾಟ ಮಾಡುತ್ತವೆ. ಒಂದು ವೇಳೆ ದಿನನಿತ್ಯ ಪರದಾಟ ಮಾಡದೆ ಇದ್ದರೆ ಉಪವಾಸ ಇರಬೇಕಾಗುವದು ಹೀಗಾಗಿ ಅದು ಸಸ್ಯಹಾರಿಯೇ ಆಗಿರಲಿ ಅಥವಾ ಮಾಂಸಹಾರಿಯೇ ಆಗಿರಲಿ ಆಹಾರಕ್ಕಾಗಿ ಅಲೆದಾಟ ಮಾಡಲೇ ಬೇಕಾಗುವದು. ಶಕ್ತಿ ಹಾಗೂ ಬುದ್ಧಿವಂತಿಕೆ ಹೊಂದಿರುವ ಪ್ರಾಣಿ ಅಥವಾ ಪಕ್ಷಿಗಳು ತಮ್ಮ ಆಹಾರಕ್ಕಾಗಿ ಅಷ್ಟೊಂದು ಕಷ್ಟ ಪಡುವದಿಲ್ಲ ಏಕೆಂದರೆ ಅವುಗಳ ಬುದ್ಧಿವಂತಿಕೆಯಿಂದ ತಮ್ಮ ಬೇ#ಟೆಯನ್ನು ಒಂದೇ ಬಾರಿಗೆ ಯಶಸ್ಸು ಗೊಳಿಸುತ್ತವೆ. ಆದರೆ ಎಷ್ಟೋ ಸಲ ತಮ್ಮ ಬೇ#ಟೆ ವಿಫಲವಾಗುವದನ್ನು ಸಹ ನಾವು ನೋಡಿದ್ದೇವೆ.
ಸದ್ಯಕ್ಕೆ ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಮೊಲ ಮತ್ತು ಹದ್ದು ಇವುಗಳ ನಡುವೆ ನಡೆದ ಬೇಟೆಯ ಘಟನೆ ಇದರಲ್ಲಿದೆ. ಈ ವಿಡಿಯೋದಲ್ಲಿ ಒಂದು ಮೊಲ ತನ್ನಷ್ಟಕ್ಕೆ ತಾನು ಆಹಾರ ಹುಡುಕಾಟ ಮಾಡುತ್ತಾ ಹೊರಟಿರುತ್ತದೆ ಅಷ್ಟರಲ್ಲಿ ಅತಿ ವೇಗವಾಗಿ ಒಂದು ಹದ್ದು ಮೊಲದ ಕಡೆಗೆ ಬರುತ್ತಿರುತ್ತದೆ ಅದನ್ನು ಕಂಡ ಮೊಲ ತನ್ನ ಪ್ರಾಣಕ್ಕೆ ಆಪತ್ತು ಇದೆ ಅಂದುಕೊಂಡು ಅದು ಒಂದು ಉಪಾಯ ಮಾಡುತ್ತದೆ. ಅದೇನೆಂದರೆ ಹದ್ದಿನ ವೇಗವಾಗಿ ಬರುವ ದಿಶೆಯಲ್ಲಿ ಮೊಲ ಸಹಿತ ಓಡುತ್ತ ಹದ್ದು ಇನ್ನೇನು ಕೆಳಗೆ ಬಂದು ಮೊಲವನ್ನು ಹಿಡಿಯಬೇಕು ಅನ್ನೋವಷ್ಟರಲ್ಲಿ ಮೊಲ ಜಂಪ್ ಮಾಡುತ್ತದೆ ಅಂದರೆ ಹದ್ದು ಕೆಳಗೆ ಬಂದಾಗ ಮೊಲ ಅದರ ಮೇಲೆ ಹಾರುತ್ತ ಅಲ್ಲಿಂದ ಪಲಾಯನ ಮಾಡುತ್ತದೆ ಹೀಗಾಗಿ ಹದ್ದಿನಿಂದ ಮೊಲದ ಪ್ರಾಣ ಉಳಿಯುತ್ತದೆ. ಮೊಲ ಇಷ್ಟೊಂದು ಎತ್ತರಕ್ಕೆ ಹಾರಬಹುದಾ ಎಂದು ಈ ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತದೆ.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವೀಡಿಯೋವನ್ನು wildonplanet0 ಎಂಬ ಹೆಸರಿನ ಖಾತೆಯ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ನೋಡಿ ಮೊಲದ ಚಾಣಕ್ಷತನಕ್ಕೆ ನೆಟ್ಟಿಗರು ಹೋಗಳುತ್ತಿದ್ದಾರೆ.