ಬೆಂಚ್ ಮೇಲೆ ಸ್ಥೂಲ ಕಾಯದ ಈ ವ್ಯಕ್ತಿ ಕುಳಿತು ರಿಲ್ಯಾಕ್ಸ್ ಆಗುವ ಪದ್ಧತಿಯನ್ನು ಒಮ್ಮೆ ನೋಡಿಯೇ ಬಿಡಿ…ಸೂಪರ್ ಎನ್ನುತ್ತೀರಿ.
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಕಾರದ ವಿಡಿಯೋಗಳು ಅನೇಕಾನೇಕ ಕಾರಣಗಳಿಂದ ನಮ್ಮ ಮುಂದೆ ಬಂದೇ ಬರುತ್ತವೆ. ಜಗತ್ತಿನಲ್ಲಿ ಹೇಳಲು ಸಾಧ್ಯವಿಲ್ಲದಷ್ಟು ಪ್ರಕಾರದ ಜನ ಇರುತ್ತಾರೆ ಎಂಬುದು ಈ ವೈರಲ್ ಆಗುವ ವಿಡಿಯೋಗಳಿಂದ ಗೊತ್ತಾಗುತ್ತದೆ. ಈಗ ಇಲ್ಲಿ ನೋಡುವ ವಿಡಿಯೋ ಒಂದು ತುಂಬಾ ಇಂಟರೆಸ್ಟಿಂಗ್ ಆಗಿದೆ.
ಕಾರಣ ಈ ವಿಡಿಯೋದಲ್ಲಿ ಧಡಿಯನೊಬ್ಬ ಬೆಂಚ್ ಮೇಲೆ ಕುಳಿತು ರಿಲ್ಯಾಕ್ಸ್ ಆಗುತ್ತಿದ್ದಾನೆ. ಅದರ ಈ ವೀಡಿಯೋವನ್ನು ನೋಡಿದಾಗ ನಕ್ಕು ನಕ್ಕು ಹೊಟ್ಟೆ ನೋಯುತ್ತದೆ. ತುಂಬಾ ಬೇಸರದಿಂದ ವ್ಯಕ್ತಿಯೊಬ್ಬ ಬಂದು ಇಲ್ಲಿ ಕಲ್ಲಿನ ಬೆಂಚ್ ಮೇಲೆ ಕುಳಿತುಕೊಳ್ಳುತ್ತಾನೆ. ಕುಳಿತ ನಂತರ ಯಾಕೋ ಮೈ ಸ್ವಲ್ಪ ಹಗುರ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ತನ್ನ ಎರಡು ಕೈಗಳನ್ನು ಹಿಂದೆ ಮತ್ತು ಕಾಲುಗಳನ್ನು ಮುಂದೆ ಚಾಚಿ ಬೆನ್ನು ನೇರ ಮಾಡಿಕೊಳ್ಳಲು ಸ್ವಲ್ಪ ಫ್ಲ್ಯಾಟ್ ಆಗುತ್ತಾನೆ. ದೇಹ ತುಂಬಾ ಭಾರವಾದ ಕಾರಣ ಫ್ಲ್ಯಾಟ್ ಏನೋ ಆಗುತ್ತಾನೆ ಆದರೆ ಪಾಪ ಮರಳಿ ಮತ್ತೆ ಮೊದಲಿನ ಪೋಸಿಶನ್ ನಲ್ಲಿ ಬರಲು ಯತ್ನಿಸುವಾಗ ಬ್ಯಾಲೆನ್ಸ್ ತಪ್ಪಿ ಎಲ್ಲ ಭಾರ ಹಿಮ್ಮಡಿಯಾಗಿ ಮೇಲೇಳಲು ಸಾಧ್ಯವಾಗದೆ ತಲೆಯ ಮೇಲೆಯೇ ಹಿಂಬದಿಗೆ ಉಲ್ಟಾ ತಿರುಗಿ ಬಿದ್ದಿದ್ದಾನೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ canada_blike04 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.