Video: ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ನೋಡಿದ ನಂತರ ಸಿಟ್ಟಿಗೆದ್ದ ನಾಯಿ, ಅದನ್ನು ಓಡಿಸಿ ಕಳುಹಿಸಲು ಮಾಡಿದ ಪ್ಲಾನ್ ನೋಡಿ…
ಪ್ರಾಣಿಗಳ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಅದರಲ್ಲೂ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಂತೂ ಎಲ್ಲರಿಗೂ ತುಂಬಾ ಇಷ್ಟವಾಗುತ್ತವೆ. ಅವುಗಳು ಮನೆಯಲ್ಲಿ ತಮ್ಮ ಮಾಲೀಕರ ಜೊತೆಗೆ ನಡೆದುಕೊಳ್ಳುವ ರೀತಿ ತುಂಬಾ ವಿಶೇಷವಾಗಿರುತ್ತವೆ. ಈಗ ನಾಯಿಯ ವಿಡಿಯೋ ಒಂದು ಸದ್ಯ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಈ ನಾಯಿ ಕನ್ನಡಿಯ ಮುಂದೆ ತನ್ನ ಪ್ರತಿಬಿಂಬವನ್ನು ನೋಡಿ ತುಂಬಾ ಸಿಟ್ಟಾಗಿದೆ. ಬೀದಿನಾಯಿಗಳಂತೂ ತಮ್ಮ ತಮ್ಮ ಏರಿಯಾದಲ್ಲಿ ಬೇರೆ ನಾಯಿಯನ್ನು ಬರಲು ಅವಕಾಶ ಮಾಡಿಕೊಡುವುದಿಲ್ಲ. ಅಂತದ್ದರಲ್ಲಿ ತನ್ನ ಪ್ರತಿಬಿಂಬವನ್ನೇ ನೋಡಿದ ನಾಯಿ ಬೇರೆ ನಾಯಿಯೇ ತನ್ನ ಏರಿಯಾದಲ್ಲಿ ಬಂದಿದೆಯೆಂದು ತುಂಬಾ ಸಿಟ್ಟಾಗಿದೆ.
ವಿಡಿಯೋದಲ್ಲಿ ನಾಯಿಯೊಂದು ಆಕಸ್ಮಿಕವಾಗಿ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ ಕನ್ನಡಿಯ ಮುಂದೆ ಬಂದು ನಿಂತಾಗ ಅಲ್ಲಿ ಕಾಣುವ ಪ್ರತಿಬಿಂಬ ತನ್ನದೇ ಇದೆಯೆಂದು ಗಮನಕ್ಕೆ ಬಾರದೆ ಬೇರೆ ನಾಯಿಯು ತನ್ನ ಏರಿಯಾದಲ್ಲಿ ಬಂದಿದೆ ಎಂದು ತಿಳಿದುಕೊಂಡು ಒಂದೇ ಸವನೆ ಬೊಗಳುತ್ತಿದೆ.
ಆ ನಾಯಿಯನ್ನು ತಕ್ಷಣ ಇಲ್ಲಿಂದ ಓಡಿಸಿ ಕಳುಹಿಸಬೇಕೆಂಬ ವಿಚಾರ ಅದರ ತಲೆಯಲ್ಲಿ ಬಂದಿದ್ದೇ ತಡ ಬದಿಯಿಂದ ಕನ್ನಡಿಯ ಹಿಂದೆ ಓಡಿ ಹೋಗುತ್ತದೆ. ನಂತರ ಮತ್ತೆ ಕನ್ನಡಿಯಲ್ಲಿಯ ನಾಯಿ ಓಡಿಹೋಗಿದೆಯೋ ಅಥವಾ ಇಲ್ಲ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳಲು ಮತ್ತೆ ಕನ್ನಡಿ ನೋಡುತ್ತದೆ. ಅಲ್ಲಿ ತನ್ನ ಪ್ರತಿಬಿಂಬ ಮತ್ತೆ ಕಂಡಾಗ ಬೊಗಳುತ್ತ ಎರಡನೇ ಬಾರಿಯೂ ಕನ್ನಡಿಯ ಹಿಂದೆ ಓಡಿ ಹೋಗುತ್ತದೆ. ನಾಯಿಯು ಮಾಡಿದ ಈ ಕೃತಿ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.
ವಿಡಿಯೋ ನೋಡಿ
View this post on Instagram
ಸದ್ಯ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಅನೇಕ ರೀತಿಯ ಕಮೆಂಟ್ಗಳನ್ನು ಸಹಿತ ಮಾಡಿದ್ದಾರೆ.