ಹಾಲುಣಿಸಲು ಅಮ್ಮಳೆ ಬೇಕು ಎಂದು ಮಗು ಹಠ ಮಾಡಿದಾಗ ಬಹುದ್ದೂರ್ ತಂದೆ ಮಾಡಿದ ಜುಗಾಡ್ (ಐಡಿಯಾ) ನೋಡಿ ಈ ವೈರಲ್ ವಿಡಿಯೋದಲ್ಲಿ…

ಎಷ್ಟೇ ಪುಟ್ಟ ಮಕ್ಕಳಾಗಿರಲಿ ತನ್ನ ತಾಯಿಯನ್ನು ಗುರುತಿಸುವದರಲ್ಲಿ ತುಂಬಾ ಜಾಣವಾಗಿರುತ್ತವೆ. ತಾಯಿಯ ಹೊರತಾಗಿ ಯಾರೇ ಎತ್ತಿಕೊಳ್ಳಲಿ ಮನಸ್ಸು ಬಂದರೆ ಮಾತ್ರ ಸುಮ್ಮನೆ ಇರುತ್ತವೆ, ಇಲ್ಲವಾದರೆ ತಾಯಿಯೇ ಬೇಕು ಎಂದು ಹಠ ಮಾಡುತ್ತವೆ. ಇನ್ನು ಮಕ್ಕಳಿಗೆ ಆಹಾರ ಅಥವಾ ಹಾಲುಣಿಸುವ ಕೆಲಸವೂ ತುಂಬಾ ಕಷ್ಟದ ಕೆಲಸವಾಗಿದೆ. ಯಾಕೆಂದರೆ ಅನೇಕ ಮಕ್ಕಳು ಅಮ್ಮಳ ಕೈಯಿಂದಲೇ ಆಹಾರ ತಿನ್ನುತ್ತವೆ ಇಲ್ಲ ಹಾಲು ಕುಡಿಯುತ್ತವೆ. ಇಲ್ಲವಾದರೆ ರಗಳೆಯೆ. ಅದಕ್ಕಾಗಿ ಇಲ್ಲೊಬ್ಬ ಭೂಪ ಈ ಸಮಸ್ಯೆಯ ಮೇಲೆ ಪರಿಹಾರವೊಂದನ್ನು ಕಂಡು ಹಿಡಿದಿದ್ದಾನೆ. ಪುಟ್ಟ ಮಗು ಹಾಲು ಕುಡಿಯುವ ಸಲುವಾಗಿ ಅಮ್ಮಳೆ ಬೇಕೆಂದು ಹಠ ಹಿಡಿದಾಗ ತಂದೆ ಹೊಸದಾದ ತರ್ಕವೊಂದನ್ನು ಕಂಡು ಹಿಡಿದಿದ್ದಾನೆ.

ವಿಡಿಯೋದಲ್ಲಿ ಕಾಣುವ ಹಾಗೆ ಮಗುವಿಗೆ ಹಾಲು ಕುಡಿಸುವಾಗ ಮುಖಕ್ಕೆ ಟ್ಯಾಬ್ ಅಟ್ಯಾಚ್ ಮಾಡಿಕೊಂಡು ಅದರಲ್ಲಿ ಮಗುವಿಗೆ ತಾಯಿಯು ಕಾಣುವ ಹಾಗೆ ಮಾಡಿದ್ದಾನೆ. ಮತ್ತು ಎದೆಗೆ ಹಾಲು ತುಂಬಿದ ಬಾಟಲ್ ಒಂದನ್ನು ಇಟ್ಟುಕೊಂಡಿದ್ದಾನೆ. ಇದರಿಂದ ಮಗು ತನ್ನ ತಾಯಿಯೇ ಹಾಲುಣಿಸುತ್ತಿದ್ದಾಳೆ ಎಂಬ ಭಾವನೆ ಮೂಡಿ ನಿರಾತಂಕವಾಗಿ ಮತ್ತು ಯಾವುದೇ ತಗಾದೆ ಇಲ್ಲದೆ ಹಾಲು ಕುಡಿಯುತ್ತಿದೆ. ತಂದೆಯ ಈ ಜುಗಾಡ್ ಗೆ ನಿಜಕ್ಕೂ ಒಂದು ಮೆಚ್ಚುಗೆಯನ್ನು ನೀಡಲೇಬೇಕು…ಅಲ್ವಾ?

ವಿಡಿಯೋ ನೋಡಿ

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ earth_brains ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ನೆಟಿಜನ್ಸ್ ಗಳ ಅನೇಕ ರೀತಿಯ ಪ್ರತಿಕ್ರಿಯೆಗಳು ಹರಿದು ಬರುವದರೊಂದಿಗೆ ವಿಡಿಯೋ ತುಂಬಾ ಜನರಿಗೆ ಇಷ್ಟವಾಗುತ್ತಿದೆ. ಈ ವಿಡಿಯೋಗೆ ಸುಮಾರು 1.5 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.