Viral Video : ಅಯ್ಯೋ, ನಾಚಿಕೆ ! ತುಂಬಿದ ಕಲ್ಯಾಣ ಮಂಟಪದಲ್ಲಿ ಮದುಮಗನಿಗೆ ಆತನ ಮಿತ್ರರು ನೀಡಿದ ಗಿಫ್ಟ್ ಗಳನ್ನಾದರೂ ಒಮ್ಮೆ ನೋಡಿ…
ಯಾರದೇ ಮದುವೆ ಫಿಕ್ಸ್ ಆಗಲಿ, ಮೊದಲು ಖುಷಿ ಪಡುವವರು ಗೆಳೆಯರು. ಮದುವೆಯಲ್ಲಿ ಮಿತ್ರರು ಚೇಷ್ಟೆ, ಕುಚೇಷ್ಟೆ ಮಾಡದೆ ಇದ್ದರೆ ಅದು ಒಂದು ಮದುವೆನಾ? ಅವರಿಂದಲೇ ನೆರವೇರುವ ಮದುವೆ ಅವರಿಂದಲೇ ಹಗುರವು ಎನಿಸುತ್ತದೆ. ಕಾರಣ ಮದುವೆ ಎಂದ ಬಳಿಕ ನೂರಾರು ರೀತಿಯ ತಯಾರಿ ಮತ್ತು ಕೆಲಸಗಳು ಸಾಂಗೋಪಾಂಗವಾಗಿ ನಡೆಯಬೇಕಾಗಿರುತ್ತದೆ. ಆ ಎಲ್ಲ ಕೆಲಸಗಳು ಆ ಗೆಳೆಯರಿಂದಲೇ ಆಗಬೇಕಾಗಿರುತ್ತವೆ. ಹಾಗೆಯೇ ಇವರು ತಮ್ಮ ಮದುವೆಯಾಗಲಿರುವ ಮಿತ್ರನಿಗೂ ಗೋಳು ಹೊಯ್ದುಕೊಳ್ಳುವ ಯಾವುದೇ ಚಾನ್ಸ್ ಮಿಸ್ ಮಾಡಿಕೊಳ್ಳುವುದಿಲ್ಲ. ಅದು ಗಿಫ್ಟ್ ಕೊಡುವುದರಿಂದ ಹಿಡಿದು.
ಈಗ ಇದೇ ರೀತಿ ಮದುವೆಯೊಂದರಲ್ಲಿ ಮಿತ್ರರು ತಮ್ಮ ಮಿತ್ರನಿಗೆ ಗೋಳು ಹೊಯ್ದುಕೊಂಡಿದ್ದಾರೆ. ತುಂಬು ಮಂಟಪದಲ್ಲಿ ಮಿತ್ರರು ಕೊಟ್ಟ ಗಿಫ್ಟ್ ಗಳನ್ನು ನೋಡಿದಾಗ ನಕ್ಕು ನಕ್ಕು ಸುಸ್ತಾಗುವಿರಿ. ಮಿತ್ರರು ಮಾಡಿದ ಚೇಷ್ಟೆಯಿಂದ ಮದುಮಕ್ಕಳು ಇಬ್ಬರು ಮುಜುಗರಕ್ಕೆ ಒಳಗಾಗಿದ್ದಾರೆ. ಅಕ್ಷತೆಯ ನಂತರ ಮದುಮಕ್ಕಳಿಬ್ಬರು ಸ್ಟೇಜ್ ಮೇಲೆ ನಿಂತಿದ್ದರು. ಆಗ ಮದುಮಗನ ಮಿತ್ರನೊಬ್ಬ ಮೊದಲು ಕೈಯಲ್ಲಿ ಖಾಲಿ ಪ್ಲಾಸ್ಟಿಕ್ ಚೀಲ ತೆಗೆದುಕೊಂಡು ಅಲ್ಲಿಗೆ ಬಂದು ಮದುಮಗನ ಕೈಯಲ್ಲಿ ಕೊಡುತ್ತಾನೆ. ತದನಂತರ ಒಬ್ಬೊಬ್ಬರಾಗಿ ಮಿತ್ರರು ಸ್ಟೇಜ್ ಮೇಲೆ ಸಾಲಾಗಿ ಬಂದು ಟಾಯ್ಲೆಟ್ ಮತ್ತು ಅಡುಗೆಮನೆಯಲ್ಲಿ ಉಪಯೋಗವಾಗುವ ತುಂಬಾ ಚಿಕ್ಕ ಪುಟ್ಟ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಲು ಶುರು ಮಾಡುತ್ತಾರೆ.
ಮಿತ್ರರೆಂದಾಗ ದೊಡ್ಡ ದೊಡ್ಡ ಬೆಲೆಬಾಳುವ ವಸ್ತುಗಳನ್ನು ಗಿಫ್ಟ್ ರೂಪದಲ್ಲಿ ಕೊಡುವುದನ್ನು ಬಿಟ್ಟು, ಯಾವ ವಸ್ತುಗಳನ್ನು ಹೆಂಡತಿಯ ಮುಂದೆ ಗಿಫ್ಟ್ ಕೊಟ್ಟಿದ್ದಾರೆ ನೋಡಿ ಈ ವಿಡಿಯೋದಲ್ಲಿ…
ವಿಡಿಯೋ ನೋಡಿ
View this post on Instagram
ಟಾಯ್ಲೆಟ್ ನಲ್ಲಿ ಯೂಸ್ ಆಗುವ ಬ್ರಷ್, ಪುಟ್ಟ ಬಕೆಟ್, ನೀರು ಸೋಸುವ ಸ್ಟ್ರೆನ್, ಲಾಳಿಕೆ, ಏರ್ ಫ್ರೆಶರ್ ಹೀಗೆ ವಿಧ ವಿಧ ಪ್ರಕಾರದ ವಸ್ತುಗಳನ್ನು ಸುಮಾರು 10 ಜನ ಮಿತ್ರರು ಸೇರಿ ನೀಡಿದ್ದಾರೆ. ಕೆಲವೇ ಸೆಕೆಂಡುಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.