ರಸ್ತೆಯ ಮೇಲೆ ನಿಂತ ನಾಯಿ ಹಠಾತ್ತನೆ ಹೆದರಿ ಓಡಲು ಶುರು ಮಾಡಿತು ! ಅಷ್ಟಕ್ಕೂ ಅಲ್ಲಿ ನಡೆದಿದ್ದದ್ದೇನು ನೋಡಿ ಈ ತಮಾಷೆಯ ವಿಡಿಯೋದಲ್ಲಿ…
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋಗಳು ನೋಡುಗರಿಗೆ ತುಂಬಾ ತಮಾಷೆಯನ್ನು ಉಂಟುಮಾಡುತ್ತವೆ. ಹೀಗಾಗಿ ಈ ತಮಾಷೆಯ ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ನೆಟಿಜನ್ಸ್ ಗಳಿಗೆ ಈ ವಿಡಿಯೋಗಳು ಸಖತ್ ಇಷ್ಟವಾಗುತ್ತವೆ. ಸದ್ಯ ನಾಯಿಯ ವಿಡಿಯೋವೊಂದನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋದಲ್ಲಿ ರಸ್ತೆಯ ಮೇಲೆ ಸುಮ್ಮನೆ ನಿಂತ ನಾಯಿ ಹಠಾತ್ತನೆ ಹೆದರಿ ದಿಕ್ಕೆಟ್ಟು ಓಡಿ ಹೋಗಲು ಶುರುಮಾಡುತ್ತದೆ, ಯಾಕೆ ಎಂಬುದು ತಿಳಿದಾಗ ಮಾತ್ರ ತುಂಬಾ ತಮಾಷೆಯೆನ್ನಿಸುತ್ತದೆ.
ವಿಡಿಯೋದಲ್ಲಿ ಕಾಣುವ ಹಾಗೆ ನಾಯಿಯೊಂದು ರಸ್ತೆಯ ಮೇಲೆ ನಿಂತಿದೆ. ಆಗ ಒಮ್ಮೆಲೆ ಗಾಳಿ ಬೀಸಲು ಶುರುವಾಗುತ್ತದೆ. ಮೊದಲು ಗಾಳಿಯು ಸೌಮ್ಯ ವಾಗಿರುವುದರಿಂದ ರಸ್ತೆಯ ಮೇಲೆ ಬಿದ್ದ ತರಗೆಲೆಗಳು ನಿಧಾನವಾಗಿ ಗಾಳಿಯ ದಿಕ್ಕಿಗೆ ಸರಿಯಲು ಶುರುಮಾಡುತ್ತವೆ. ನಂತರ ಗಾಳಿಯ ವೇಗ ಒಮ್ಮೆಲೆ ಹೆಚ್ಚಿದಂತೆ ರಸ್ತೆಯ ಮೇಲಿನ ತರಗೆಲೆಗಳು ವೇಗವಾಗಿ ನಾಯಿಯ ಕಡೆಗೆ ಹರಿದು ಬರಲು ಶುರುವಾಗುತ್ತವೆ. ಆಗ ಅಲ್ಲಿಯೇ ನಿಂತ ನಾಯಿಯು ತನ್ನ ಕಡೆಗೆ ಬರುವ ತರಗೆಲೆಗಳನ್ನು ನೋಡಿ ಭಯದಿಂದ ತಬ್ಬಿಬ್ಬಾಗುತ್ತದೆ. ಇಲ್ಲಿ ಏನು ನಡೆಯುತ್ತಿದೆ ಎಂಬುದು ನಾಯಿಗೆ ಸ್ವಲ್ಪವೂ ತಿಳಿಯುವುದಿಲ್ಲ. ಆಗ ನಾಯಿಯು ಸಹ ಹುಚ್ಚನಂತಾಗಿ ತರಗೆಲೆಗಳ ಜೊತೆಗೆ ಓಡಲು ಶುರು ಮಾಡುತ್ತದೆ. ನಾಯಿಯ ಈ ಬೆಚ್ಚಿಬಿದ್ದ ಈ ಅವತಾರ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ animalsugary ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಜೊತೆಗೆ attack of killer leaves ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋವನ್ನು 2.8 ಲಕ್ಷ ಜನರು ಲೈಕ್ ಮಾಡಿದ್ದಾರೆ.