ಪ್ರೇಯಸಿ ಮತ್ತು ಪ್ರಿಯಕರ ಇಬ್ಬರ ಜಗಳದಲ್ಲಿ ಡಿಲೇವರಿ ಬಾಯ್ ಎಂಟ್ರಿ! ಮುಂದಿನ ದೃಶ್ಯ ನೀವು ನೋಡಲೇಬೇಕು; ವಿಡಿಯೋ ವೈರಲ್…
ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರೇಮಿಗಳಿಬ್ಬರ ಜಗಳದ ವಿಡಿಯೋ ಒಂದು ತುಂಬಾನೇ ವೈರಲ್ ಆಗುತ್ತಿದೆ. ವರದಿ ಒರಿಸ್ಸಾದಿಂದ ಬಂದಿದೆ. ಇಲ್ಲಿಯ ಭುವನೇಶ್ವರ್ ದಲ್ಲಿರುವ ಇಂದಿರಾ ಗಾಂಧಿ ಪಾರ್ಕ್ ನಿಂದ ಪ್ರೇಮಿಗಳು ಹೊರಬಿದ್ದ ನಂತರ ಇಬ್ಬರಲ್ಲಿ ಜಗಳ ಶುರುವಾಗಿದೆ. ಈ ಜಗಳದಲ್ಲಿ ಪ್ರೇಯಸಿ ಪ್ರಿಯಕರನ ಮೇಲೆ ಸವಾರಿ ಮಾಡುತ್ತಿರುವದು ಕಂಡು ಬರುತ್ತಿದೆ. ಕಾರಣ ಪ್ರೇಯಸಿ ಪ್ರಿಯಕರನಿಗೆ ಬಾಯಿಗೆ ಬಂದಂತೆ ಬಯ್ಯುವದರ ಜೊತೆಗೆ ಆತನನ್ನು ಥಳಿಸಲು ಸಹ ಪ್ರಯತ್ನಿಸುತ್ತಿದ್ದಾಳೆ. ಅಷ್ಟೇ ಅಲ್ಲದೆ ತನ್ನದೇ ಪ್ರಿಯಕರನ ಮೇಲೆ ಕಲ್ಲು ತೂರಾಟ ಮಾಡಲು ಸಹ ಯತ್ನಿಸಿದ್ದಾಳೆ. ಇದೇ ವಿಡಿಯೋ ನೋಡುಗರು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅಲ್ಲಿ ನೆರೆದಿದ್ದ ಜನರು ಈ ಪ್ರೇಮಿಗಳ ಜಗಳವನ್ನು ತಮ್ಮ ಮೊಬೈಲ್ ನಲ್ಲಿ ಶೂಟ್ ಮಾಡಿಕೊಂಡಿದ್ದಾರೆ. ಈ ಕೃತ್ಯದಿಂದಾಗಿ ಪ್ರೇಯಸಿ ಇನ್ನಷ್ಟು ತನ್ನ ಸಮತೋಲನ ಕಳೆದುಕೊಂಡು ಅವರ ಮೊಬೈಲ್ ಕಸಿದುಕೊಳ್ಳುವ ಯತ್ನ ಮಾಡಿದ್ದಾಳೆ. ಏತನ್ಮಧ್ಯೆ ಫುಡ್ ಡಿಲೇವರಿ ಬಾಯ್ ಒಬ್ಬನು ಮಧ್ಯೆ ಪ್ರವೇಶಿಸಿ ಜಗಳವನ್ನು ಬಗೆಹರಿಸಲು ಯತ್ನಿಸಿದ್ದಾನೆ. ಇದರಿಂದ ಹುಡುಗಿಯೂ ಇನ್ನಷ್ಟು ಸಿಟ್ಟಾಗಿ ಆತನಿಗೂ ಅಪಶಬ್ದಗಳನ್ನು ಉಪಯೋಗಿಸಲು ಶುರು ಮಾಡಿದಳು. ಅಷ್ಟೇ ಅಲ್ಲದೆ ತನ್ನ ಪ್ರಿಯಕರನಿಗೆ ಬದಿಗೆ ಸರಿಸಿ ಡಿಲೇವರಿ ಬಾಯ್ ಜೊತೆ ಜಗಳಕ್ಕೆ ನಿಂತಳು. ಆತನಿಗೆ ಬೈಗಳುವನ್ನು ನೀಡಲು ಶುರು ಮಾಡಿದ ನಂತರ ಡಿಲೇವರಿ ಬಾಯ್ ನ ಸಿಟ್ಟು ಹತೋಟಿ ಮೀರಿದೆ. ಆಗ ಡಿಲೇವರಿ ಬಾಯ್ ಆಕೆಯನ್ನು ಪ್ರಿಯಕರನ ಮುಂದೆಯೇ ಥಳಿಸುವದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಇಷ್ಟೆಲ್ಲಾ ನಡೆಯುತ್ತಿರುವಾಗ ಅಲ್ಲಿ ನೆರೆದ ಜನ ಆಮೇಲೆ ಈ ಪ್ರಕರಣವನ್ನು ಅಲ್ಲಿಯೇ ಶಾಂತ ಮಾಡಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಯಾರು ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಿಲ್ಲ.
ವಿಡಿಯೋ ನೋಡಿ
Girl direct volley of expletives, beat up Boyfriend in full public glare outside #IG Park in #Bhubaneswar pic.twitter.com/7ZVUrfz7Wd
— Mohammad Suffian (@iamsuffian) March 31, 2022
ಆದರೆ ವೈರಲ್ ವಿಡಿಯೋ ಗಮನಕ್ಕೆ ಬಂದ ನಂತರ ಭುವನೇಶ್ವರ್ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಹೊಡೆದಾಟ ಮಾಡಿದ್ದರಿಂದ ಇಬ್ಬರ ವಿರುದ್ಧವೂ ಕೇಸ್ ದಾಖಲು ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.