Video: ವಿರಾಟ್ ಕೊಹ್ಲಿ ಉತ್ತಮ ಕ್ರಿಕೆಟಿಗ ಮಾತ್ರವಲ್ಲದೆ ಉತ್ತಮ ಗಾಯಕ ಕೂಡಾ ಆಗಿದ್ದಾರೆ ಅನ್ನೋದಕ್ಕೆ ಈ ವೀಡಿಯೋನೆ ಸಾಕ್ಷಿ! ವೀಡಿಯೋ ನೋಡಿ
ವಿರಾಟ್ ಕೊಹ್ಲಿ ಹೆಸರು ನೆನಪಿಗೆ ಬಂದಾಗಲೆಲ್ಲ ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನದಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಕೊಹ್ಲಿಯ ಚಿತ್ರ ಕಣ್ಮುಂದೆ ಬರುತ್ತದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ತನ್ನ ಅದ್ಭುತ ಕ್ರಿಕೆಟ್‌ನ ಆಧಾರದ ಮೇಲೆ ಎಲ್ಲವನ್ನೂ ಸಾಧಿಸಿ ಕೋಟ್ಯಂತರ ಜನರ ನೆಚ್ಚಿನ ಆಟಗಾರ ರಾಗಿದ್ದಾರೆ.
ಕ್ರಿಕೆಟ್ ವಿರಾಟ್ ಕೊಹ್ಲಿಯ ಜೀವನವನ್ನು ಬದಲಾಯಿಸಿದೆ. ಅದಕ್ಕಾಗಿ ಇವರು ಸಾಕಷ್ಟು ಕಷ್ಟಪಟ್ಟು ಈ ಸಾಧನೆ ಮಾಡಿದ್ದಾರೆ. ಆದರೆ ಕ್ರಿಕೆಟಿನ ಹೊರತಾಗಿ ವಿರಾಟ್ ಕೊಹ್ಲಿಯಲ್ಲೂ ಮತ್ತೊಂದು ಶ್ರೇಷ್ಠ ಗುಣವಿದೆ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಅದೇನೆಂದರೆ ಹಾಡು ಹಾಡುವದು. ಕೊಹ್ಲಿ ಹಾಡುಗಳನ್ನು ಹಾಡುವುದರಲ್ಲಿ ಸಹ ತುಂಬಾ ನಿಪುಣರು. ಹೌದು, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಹಾಡಿದ್ದಾರೆ ಮತ್ತು ಅವರ ಆ ಹಾಡಿನ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಸ್ವಲ್ಪ ಹಳೆಯದಾಗಿದ್ದು ಇದರಲ್ಲಿ ವಿರಾಟ್ ಕೊಹ್ಲಿ ‘ಜೋ ವಾದ ಕಿಯಾ ನಿಭಾನಾ ಪಡೆಗಾ’ ಹಾಡನ್ನು ಹಾಡುತ್ತಿರುವದನ್ನು ನಾವು ಕಾಣಬಹುದು.
ವಿಡಿಯೋದಲ್ಲಿ ವಿರಾಟ್ ಕೊಹ್ಲಿಯನ್ನು ನೋಡಿದಾಗ ಅವರು ಕ್ರಿಕೆಟ್ ಮಂಡಳಿಯ ಅಧಿಕೃತ ಬ್ಲೇಜರ್ ಅನ್ನು ಧರಿಸಿರುವಂತೆ ತೋರುತ್ತದೆ. ಇದರ ಮೇಲಿಂದ ತಿಳಿದು ಬರುವದೇನೆಂದರೆ ಕೊಹ್ಲಿ ಕ್ರಿಕೆಟ್ ಸಂಬಂಧಿತ ಗ್ಯಾಕ್ವದೋ ಸಮಾರಂಭದಲ್ಲಿ ಹಾಡೊಂದನ್ನು ಹಾಡುತ್ತಿದ್ದಾರೆ. ವೇದಿಕೆಯಲ್ಲಿ ಕೊಹ್ಲಿಯವರೊಂದಿಗೆ ಒಬ್ಬಮಹಿಳೆಯೂ ಇದ್ದಾರೆ. ವಿರಾಟ್ ಕೊಹ್ಲಿ ಹಾಡನ್ನು ಹಾಡುವುದನ್ನು ನೋಡುವುದು ತುಂಬಾ ವಿಭಿನ್ನ ಮತ್ತು ಅದ್ಭುತ ಅನುಭವ. ವಿರಾಟ್ ಕೊಹ್ಲಿ ಹಾಡಿರುವ ಈ ವಿಡಿಯೋವನ್ನು ಹರ್ಷ್ ಗೋಯೆಂಕಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ತುಂಬಾನೇ ವೈರಲ್ ಆಗುತ್ತಿದೆ.
ವಿಡಿಯೋವನ್ನು ಹಂಚಿಕೊಂಡಿರುವ ಹರ್ಷ್ ಗೋಯೆಂಕಾ ಅವರು ‘ವಿರಾಟ್ ಕೊಹ್ಲಿ ಹಾಡನ್ನು ಹಾಡುವುದನ್ನು ಕೇಳಲು ತುಂಬಾ ಸಂತಸವಾಗುತ್ತೆ’ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರವೇ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಶೇರ್ ಮಾಡಿ ರೀಟ್ವೀಟ್ ಮಾಡಿದ್ದಾರೆ. ನೀವೂ ಕೂಡ ವಿರಾಟ್ ಕೊಹ್ಲಿ ಹಾಡುವುದನ್ನು ನೋಡಲು ಬಯಸಿದರೆ, ನೀವು ಅದನ್ನು ಕೆಳಗೆ ನೀಡಲಾದ ಟ್ವಿಟರ್ ಲಿಂಕ್‌ನಲ್ಲಿ ನೋಡಬಹುದು.
ವೀಡಿಯೋ ನೋಡಿ.
Nice to hear #ViratKohli singing! pic.twitter.com/B6ZneWP3Fo
— Harsh Goenka (@hvgoenka) April 3, 2022