ಹಗ್ ಮಾಡಿದ ಈ ಕಪಲ್ಸ್ ಕಾಲುಗಳು ನೇಟಿಜನ್ಸ್ ಗಳ ತಲೆ ಕೆಡಿಸುತ್ತಿದೆ; ಈ ಫೋಟೋದಲ್ಲಿ ಅಡಗಿರುವ ರಹಸ್ಯವೇನು…?
Optical Illusion: ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಅನೇಕ ರೀತಿಯ ತಲೆಚಿಟ್ಟು ಹಿಡಿಯುವ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಆ ಫೋಟೋಗಳಲ್ಲಿಯ ಅಡಗಿರುವ ರಹಸ್ಯ ಕಂಡು ಹಿಡಿಯಬೇಕಾದರೆ ನೇಟಿಜನ್ಸ್ ಗಳಿಗೆ ಒಂದು ಚಾಲೆಂಜ್ ಇದ್ದಹಾಗೆ. ಕೆಲವರಂತೂ ಅದರ ಉತ್ತರವನ್ನು ಶೋಧಿಸುವವರೆಗೆ ಸಮಾಧಾನದಿಂದ ಕುಳಿತುಕೊಳ್ಳುವುದೇ ಇಲ್ಲ.
ಸದ್ಯಕ್ಕೆ ಇದೇ ರೀತಿ ತಲೆ ಕೆಡಿಸುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸುತ್ತಾಡುತ್ತಿದೆ. ಪ್ರಸ್ತುತ ಫೋಟೋದಲ್ಲಿ ಸಮುದ್ರದ ದಂಡೆಯಲ್ಲಿ ಜೋಡಿಯೊಂದು ಹಗ್ ಮಾಡುತ್ತಿರುವದು ಕಂಡುಬರುತ್ತಿದೆ. ಈ ಫೋಟೋದಲ್ಲಿ ಕಂಡುಬರುವ ಹಾಗೆ ಪುರುಷ ಬಿಳಿ ಬಣ್ಣದ ಹಾಗೂ ಮಹಿಳೆಯು ಕಪ್ಪುಬಣ್ಣದ ಬಟ್ಟೆಯನ್ನು ತೊಟ್ಟಿದ್ದಾಳೆ.
ಇಬ್ಬರ ಕಾಲುಗಳು ಸಹ ಉಲ್ಟಾ ಕಾಣುತ್ತಿವೆ..
ಇಬ್ಬರು ಒಬ್ಬರಿಗೊಬ್ಬರು ಬಿಗಿದಪ್ಪಿ ನಿಂತುಕೊಂಡ ಫೋಟೋ ಇದಾಗಿದೆ ಸರಿ. ಆದರೆ ಸಮಸ್ಯೆ ಇರುವುದು ಕಾಲುಗಳಲ್ಲಿ. ಯಾಕೆಂದರೆ ಇಬ್ಬರ ಕಾಲುಗಳು ಸ್ಪಷ್ಟವಾಗಿ ಉಲ್ಟಾ ಕಾಣಿಸುತ್ತಿವೆ. ಈ ಫೋಟೋ ನೋಡಿ ಕೆಲವರು ಇದರಲ್ಲಿ ಏನೋ ಟ್ರಿಕ್ ಇದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಈ ಫೋಟೋ ಭೂತ-ಪ್ರೇತಗಳ ಫೋಟೋ ಆಗಿದೆ ಎಂದೂ ಸಹ ಹೇಳುತ್ತಿದ್ದಾರೆ. ಆದರೆ ಈ ಫೋಟೋವನ್ನು ತುಂಬಾ ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ ಇದರಲ್ಲಿ ಅಡಗಿದ ರಹಸ್ಯ.
ಅಲ್ಲಿ ಅಡಗಿದ ಆ ರಹಸ್ಯವನ್ನು ನಿಮ್ಮ ಕಣ್ಣುಗಳು ಶೋಧಿಸಲು ಸಾಧ್ಯವೇ?
ಯಾಕೆಂದರೆ ಈ ಫೋಟೋದಲ್ಲಿ ಯಾವುದೇ ಭೂತಪ್ರೇತವಿಲ್ಲ ಮತ್ತು ಟ್ರಿಕ್ಸ್ ಇಲ್ಲ. ಬರೀ ಅಡಗಿರುವುದು ರಹಸ್ಯ ಮಾತ್ರ. ಅದು ಸೂಕ್ಷ್ಮದೃಷ್ಟಿಯನ್ನು ಹೊಂದಿರುವ ಕಣ್ಣುಗಳು ಮಾತ್ರ ಶೋಧಿಸಲು ಸಾಧ್ಯ. ಟ್ರೈ ಮಾಡಿ ಮತ್ತು ಅಲ್ಲಿರುವ ರಹಸ್ಯವನ್ನು ಗುರುತಿಸಲು ಯಶಸ್ವಿಯಾಗಿ.
ಏನಿದೆ ರಹಸ್ಯ?
ಮಿತ್ರರೇ ಒಂದುವೇಳೆ ನೀವು ಈ ಚಾಲೆಂಜ್ ಕಂಡುಹಿಡಿದರೆ ನಿಮಗೆ ಶುಭಾಶಯಗಳು ಮತ್ತು ನಿಮ್ಮ ಕಣ್ಣುಗಳು ಸಂಪೂರ್ಣವಾಗಿ ತೇಜಸ್ವಿಯಾಗಿವೆ ಹಾಗೂ ಸೂಕ್ಷ್ಮವಾದದ್ದನ್ನು ಗ್ರಹಿಸುವ ಶಕ್ತಿ ಹೊಂದಿವೆ ಎಂತಲೇ ಅರ್ಥ. ಒಂದು ವೇಳೆ ನಿಮಗೆ ಇಲ್ಲಿ ಅಡಗಿರುವ ರಹಸ್ಯದ ಉತ್ತರವನ್ನು ಶೋಧಿಸಲು ಸಾಧ್ಯವಾಗದೇ ಇದ್ದರೆ ಅದಕ್ಕೆ ನಾವು ಸಹಾಯ ಮಾಡುತ್ತೇವೆ. ‘ದ ಸನ್’ ನೀಡಿದ ರಿಪೋರ್ಟ್ ಪ್ರಕಾರ, ವ್ಯಕ್ತಿಯೊಬ್ಬನು ಇದರ ರಹಸ್ಯ ಭೇದಿಸಿದ್ದಾನೆ. ಇವರಿಬ್ಬರ ಫೋಟೋ ತೆಗೆಯುವಾಗ ಯಾವುದೇ ರೀತಿಯ ಟ್ರಿಕ್ಸ್ ಉಪಯೋಗಿಸಿಲ್ಲ ಎಂದು ಹೇಳುತ್ತಾನೆ, ಮಾತ್ರ ಅವರು ತೊಟ್ಟುಕೊಂಡಿರುವ ಬಟ್ಟೆಗಳಲ್ಲಿ ರಹಸ್ಯ ಅಡಗಿದೆ ಎಂದಿದ್ದಾನೆ.
ಪುರುಷನು ಬಿಳಿ ಬಣ್ಣದ ಟಿ-ಶರ್ಟ್ ಜೊತೆಗೆ ಕಪ್ಪು ಬಣ್ಣದ ಕ್ಯಾಪ್ರಿ ತೊಟ್ಟುಕೊಂಡಿದ್ದಾನೆ. ಮತ್ತು ಆ ಕ್ಯಾಪ್ರಿ ಮೇಲೆ ಬಿಳಿ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡು ಮಹಿಳೆಗೆ ಅಪ್ಪಿಕೊಂಡು ನಿಂತಿದ್ದರಿಂದ ಈ ಫೋಟೋ ಇಷ್ಟೊಂದು ವಿಚಿತ್ರವಾಗಲು ಕಾರಣವಾಗಿದೆ ಎನ್ನುತ್ತಾನೆ. ಹೀಗಾಗಿ ಯಾರ ಕಾಲು ಯಾವ ಕಡೆ ತಿರುಗಿದೆ ಎಂಬುದು ಸಹಜವಾಗಿ ತಿಳಿದುಬರುತ್ತಿಲ್ಲ. ಇದೆಲ್ಲವೂ ಅವರ ತೊಟ್ಟುಕೊಂಡಿರುವ ಬಟ್ಟೆಯಿಂದ ಭ್ರಮೆ ನಿರ್ಮಾಣವಾಗಿದೆ.
ಇನ್ನೊಂದು ಲಾಜಿಕ್…
ಇನ್ನೊಬ್ಬ ನೇಟಿಜನ್ಸ್ ಹೇಳುವ ಪ್ರಕಾರ, ಪುರುಷನು ತೊಟ್ಟುಕೊಂಡಿರುವ ಶಾರ್ಟ್ಸ್ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳನ್ನು ಹೊಂದಿದೆ. ಇದು ಮಧ್ಯದಲ್ಲಿ ಬಿಳಿ ಹಾಗೂ ಬದಿಗೆ ಕಪ್ಪು ಬಣ್ಣ ಹೊಂದಿದೆ. ಮಹಿಳೆಯು ಕಪ್ಪುಬಣ್ಣದ ಡ್ರೆಸ್ ತೊಟ್ಟುಕೊಂಡಿದ್ದಾಳೆ, ಇದರಿಂದಾಗಿ ಈ ಭ್ರಮೆ ನಿರ್ಮಾಣವಾಗುತ್ತಿದೆ ಎಂದಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ ಅವರ ಕಾಲುಗಳು ಸರಿಯಾಗಿಯೇ ಇದ್ದು ಅವರು ತೊಟ್ಟುಕೊಂಡಿರುವ ಬಟ್ಟೆಗಳಿಂದ ನೋಡುಗರಿಗೆ ಕನ್ಫ್ಯೂಸ್ ಆಗಿ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ, ಅಷ್ಟೇ. ಇದರ ಹೊರತಾಗಿ ಈ ಫೋಟೋದಲ್ಲಿ ಯಾವುದೇ ಟ್ರಿಕ್ಸ್ ಇಲ್ಲ.