ಎಂಗೇಜ್ ಮೆಂಟ್ ನಲ್ಲಿ ಜೋಡಿ ಮಾಡಿದ ಸಖತ್ ಕ್ರೇಜಿ ಡ್ಯಾನ್ಸ್ ಆಯ್ತು ವೈರಲ್! 4 ನಿಮಿಷಗಳ ಕುಣಿತದಲ್ಲಿ ಹಾಕಿದ ಸೂಪರ್ ಸ್ಟೆಪ್ಸ್ ಒಮ್ಮೆ ನೋಡಿ…
ಮದುವೆ ಮತ್ತು ಎಂಗೇಜ್ ಮೆಂಟ್ ಹೀಗೆ ಯಾವುದೇ ಕಾರ್ಯಕ್ರಮಗಳಿರಲಿ ಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಕಾರಣ ನಮ್ಮ ಭಾರತದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿರುತ್ತಾರೆ. ಹೀಗಿದ್ದಾಗ ಅವರ ಮದುವೆಯ ಮೊದಲು ಮನೆಯಲ್ಲಿರುವ ಸದಸ್ಯರಿಗೆ ಮತ್ತು ಬಂಧು ಮಿತ್ರರಿಗೆ ಮುಂಬರುವ ಮದುವೆಯ ಸಂಭ್ರಮವನ್ನು ನಿರ್ಮಾಣ ಮಾಡುತ್ತದೆ ಈ ನಿಶ್ಚಿತಾರ್ಥ. ಇತ್ತೀಚೆಗಂತೂ ಮದುವೆಯಲ್ಲಿ ಬಿಡಿ ಚಿಕ್ಕ ಪುಟ್ಟ ಕಾರ್ಯಕ್ರಮಗಳಲ್ಲೂ ಎಲ್ಲರೂ ಡ್ಯಾನ್ಸ್ ಮಾಡುವದು ಒಂದು ಪ್ಯಾಶನ್, ವಾಡಿಕೆಯಾಗಿ ಬಿಟ್ಟಿದೆ.
ಈಗ ವೈರಲ್ ಆಗುತ್ತಿರುವ ಡ್ಯಾನ್ಸ್ ಒಂದು ಯಂಗೆಜ್ ಮೆಂಟ್ ನಲ್ಲಿಯದಿದೆ. ಈ ಕಾರ್ಯಕ್ರಮದಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿರುವ ಜೋಡಿಯೊಂದು ಸಖತ್ ಕಪಲ್ ಡ್ಯಾನ್ಸ್ ಹೊಡೆದಿದ್ದಾರೆ. ಇಬ್ಬರೂ ಕೂಡಿ 3 ನಿಮಿಷ 40 ಸೆಕೆಂಡುಗಳವರೆಗೆ ತುಂಬಾ ಸುಂದರವಾಗಿ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದನ್ನು ಇಲ್ಲಿ ನೋಡಬಹುದು. ಇವರಿಬ್ಬರ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡುತ್ತಿದ್ದಾಗ ತುಂಬಾ ನುರಿತವರ ಹಾಗೆ ಡ್ಯಾನ್ಸ್ ಮಾಡಿದ್ದಾರೆ ಎಂದೆನಿಸುತ್ತದೆ.
ನೋಡಿ ಈ ಸಖತ್ ವಿಡಿಯೋ…
ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಮಯೂರೇಶ ಜೋಷಿ ಹೆಸರಿನ ಚಾನೆಲ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 2.7 ಮಿಲಿಯನ್ ಜನರು ನೋಡಿ ಆನಂದಿಸಿದ್ದಾರೆ.