27 ಮಿಲಿಯನ್ ವ್ಯೂವ್ಜ್ ! ಮಮತೆಯ ಮೈದುನನ ಮದುವೆಯಲ್ಲಿ ಅತ್ತಿಗೆ ಪ್ರೀತಿಯಿಂದ ಮಾಡಿದ ಡ್ಯಾನ್ಸ್ ಆಯಿತು ವೈರಲ್ ! ನೋಡಿ ಈ ವಿಡಿಯೋ…
ಮದುವೆ ಫಿಕ್ಸ್ ಆದರೆ ಸಾಕು ಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ಎಲ್ಲಿಲ್ಲದ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿ ಬಾಳುತ್ತಾರೆ. ಮದುವೆಯಿಂದಾಗಿ ಮನೆಯಲ್ಲಿರುವ ಎಲ್ಲ ಸದಸ್ಯರೂ ಮತ್ತು ಬಂಧು ಮಿತ್ರರೂ ತಮ್ಮ ತಮ್ಮ ಜವಾಬ್ದಾರಿಗಳ ಕಡೆಗೆ ತುಂಬಾ ಗಮನ ನೀಡಬೇಕಾಗುತ್ತದೆ. ಇತ್ತೀಚೆಗಂತೂ ಮದುವೆಯಲ್ಲಿ ಮನೆಯ ಸದಸ್ಯರು ಮತ್ತು ಬಂಧು ಮಿತ್ರರು ಡಾನ್ಸ್ ಮಾಡುವುದು ಒಂದು ಪ್ಯಾಶನ್ ಮತ್ತು ವಾಡಿಕೆಯಾಗಿ ಬಿಟ್ಟಿದೆ. ಏಕೆಂದರೆ ಮದುವೆಯಲ್ಲಿ ಡಾನ್ಸ್ ಇಲ್ಲದಿದ್ದರೆ ಅದು ಪರಿಪೂರ್ಣವೆನಿಸುವದಿಲ್ಲ ಎಂಬಂತಾಗಿಬಿಟ್ಟಿದೆ. ಮದುವೆಯಲ್ಲಿ ನಡೆಯುವ ಎಲ್ಲಾ ಆಚರಣೆಗಳು ಶಾಸ್ತ್ರೋಕ್ತವಾಗಿ ಸಾಂಗೋಪಾಂಗವಾಗಿ ನಡೆಯುತ್ತಿರುತ್ತವೆ. ಅದೇ ಸಂದರ್ಭದಲ್ಲಿ ಮೈದುನನ ಅತ್ತಿಗೆಯೊಬ್ಬಳು ಈ ಸಂದರ್ಭದಲ್ಲಿ ಒಂದು ಸುಂದರವಾದ ಡ್ಯಾನ್ಸ್ ಪ್ರೆಸೆಂಟ್ ಮಾಡಿದ್ದಾರೆ. ಇದೇ ಡ್ಯಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಅತ್ತಿಗೆಯವರು ಹಿಂದಿ ಸೂಪರ್ ಹಿಟ್ ‘ಹಮ್ ಅಪ್ಕೆ ಹೈ ಕೌನ್’ ಚಿತ್ರದ ‘ಲೋ ಚಲಿ ಮೈ ಅಪ್ನೆ ದೇವರ್ ಕಿ ಬಾರಾತ್ ಲೇಕೆ’ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ತಮ್ಮ ಮುದ್ದಿನ ಮೈದನನ ಮದುವೆಯಲ್ಲಿ ಅತ್ತಿಗೆ ಮಾಡಿದ ಈ ಡ್ಯಾನ್ಸ್ ನೆಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.
ವಿಡಿಯೋ ನೋಡಿ
ಯೂಟ್ಯೂಬ್ ನಲ್ಲಿ ಶೇರ್ ಆದ ಈ ವೀಡಿಯೋವನ್ನು ಇಲ್ಲಿಯವರೆಗೆ 27 ಮಿಲಿಯನ್ ಜನರು ನೋಡಿದ್ದಾರೆ. ಈ ಡ್ಯಾನ್ಸ್ ನೇಟಿಜನ್ಸ್ ಗಳು ತುಂಬಾ ಇಷ್ಟಪಟ್ಟು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.