ಜನರ ಹೃದಯದಲ್ಲಿ ಮನೆ ಮಾಡಲು ಬರುತ್ತಿದೆ ಟಾಟಾ ಅವರ ಹೊಸ ಕಾರು; ಸಕ್ಕತ್ ಡಿಸೈನ್ ಜೊತೆ ಈ ವಿಶೇಷ ಫೀಚರ್ಸ್!

 

ಕೊನೆಗೂ ಟಾಟಾ ಮೋಟರ್ಸ್ ತಮ್ಮ ವಿಶೇಷ ನೂತನ ಕಾರಿನ ಮೇಲಿಂದ ಪರದೆಯನ್ನು ಸರಿಸಿತು. ಈ ಕಾರಿನ ಮಾಡೆಲ್ ಹೆಸರು ಟಾಟಾ ಕರ್ವ್ ಇದ್ದು (Tata Curvv) ಇದೊಂದು ಎಲೆಕ್ಟ್ರಿಕ್ SUV ಆಗಿದೆ. ಈ ಮಾಡೆಲ್ ಕಾರಿಗೆ ಕಂಪನಿಯು ನಂತರ ಪೆಟ್ರೋಲ್ ಮತ್ತು ಡೀಸೆಲ್ ಆಪ್ಷನ್ ನಲ್ಲಿಯೂ ಬಿಡುಗಡೆ ಮಾಡಲಿದೆ. ಟಾಟಾ ಮೋಟಾರ್ಸ್ ತನ್ನ ಈ ಹೊಸದಾದ ಕರ್ವ್ ಕಾರಿನ ಬಗ್ಗೆ ಹೆಚ್ಚಿಗೆ ಡೀಟೇಲ್ಸ್ ಗಳನ್ನು ಜಾರಿ ಮಾಡಿಲ್ಲ. ಆದರೆ ಈ ಕಾರು ಟಾಟಾ ಅವರ ಹೊಸ ಅಪ್ ಗ್ರೇಡ್ ಮಾಡಲಾದ X1 ಪ್ಲಾಟ್ಫಾರ್ಮ್ ಬೇಸ್ಡ್ ಆಗಿದೆ. ಈ ಹೊಸ ಕಾರಿನ ಉದ್ದಳತೆ 4.3 ಮೀಟರ್ ಇದ್ದು ಇದೊಂದು ದೊಡ್ಡ ವ್ಹೀಲ್ ಬೆಸ್ ಜೊತೆಗೆ ಬರಲಿದೆ.

ರೇಂಜ್ ಎಷ್ಟಿರಲಿದೆ?

ಟಾಟಾ ಮೋಟರ್ಸ್ ಕಂಪನಿಯು ಈ ಕಾರಿನ ಬೆಲೆ ಮತ್ತು ರೇಂಜ್ ಬಗ್ಗೆ ಇನ್ನೂವರೆಗೆ ಯಾವುದೇ ಡೀಟೇಲ್ಸ್ ಶೇರ್ ಮಾಡಿಲ್ಲ. ಆದರೆ ಕಂಪನಿಯು Curvv EV SUV ಯ ಸರ್ಟಿಫೈಡ್ ರೇಂಜ್ 400-500km ಇರುವ ಸಾಧ್ಯತೆ ಇದೆ. Tata Curvv ಈ ಕಾರು ತುಂಬಾ ಹೊಸ ಡಿಸೈನ್ ನೊಂದಿಗೆ ಮಾರುಕಟ್ಟೆಯಲ್ಲಿ ಎಂಟ್ರಿ ಮಾಡಲಿದೆ. ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಲಾಂಚ್ ಮಾಡಿದ ನಂತರ ಈ ಕಾರಿನ ಸ್ಪರ್ಧೆ Hyundai Creta, Kia Seltos ಜೊತೆಗೆ ನಡೆಯಲಿದೆ. Tata Curvv ಎಲೆಕ್ಟ್ರಿಕ್ SUV ನಲ್ಲಿ ಬುಲೆಟ್ ಮೇಲೆ ಎಲ್ಇಡಿ ಲೈಟ್ಸ್ ಗಳ ಜೊತೆಗೆ ಸ್ಪ್ಲಿಟ್ ಎಲ್ಇಡಿ ಹೆಡ್ ಲೈಟ್ ಸೆಟಪ್ ಮಾಡಲಾಗಿದೆ. ಮತ್ತು ಫ್ರಂಟ್ ಬಂಪರ್ ನಲ್ಲಿ ತ್ರಿಕೋನಾಕಾರದ ಎಲ್ಇಡಿ ಲೈಟ್ ಗಳನ್ನು ಅಳವಡಿಸಲಾಗಿದೆ. ಕರ್ವ್ ಕಾರಿನಲ್ಲಿ ಗಮನ ಸೆಳೆಯುವಂತಹ ಫೀಚರ್ಸ್ ಗಳನ್ನು ನೀಡಲಿದ್ದಾರೆ ಎಂಬುದು ತಿಳಿದುಬಂದಿದೆ. ಹೊರಗಿನ ಬದಿಯ ರಿಯರ್ ವ್ಯೂ ಮಿರರ್ ಬದಲಾಗಿ ನೀಡಿದ ರಿಯಲ್ ಕ್ಯಾಮೆರಾ ಇದು ಹೊಸ ಲುಕ್ ನೀಡುತ್ತದೆ. ಮತ್ತು ಟಾಟಾ ಅವರ ಬೇರೆ ಕಾರುಗಳಿಗಿಂತ ಇದು ತುಂಬಾ ಭಿನ್ನವಾಗಿ ಕಂಡು ಬರುತ್ತಿದೆ.

Tata Curvv ಈ ಕಾರು 2023 ರಲ್ಲಿ ಲಾಂಚ್ ಮಾಡಲಿದೆ. ಟಾಟಾ ಮೋಟರ್ಸ್ ಹೇಳುವ ಪ್ರಕಾರ ಈ ಕರ್ವ್ ಕಾರಿಗೆ ಪ್ರೀಮಿಯಂ ಎಸ್ಯುವಿ ಸೆಗ್ಮೆಂಟ್ ನಿದರ್ಶನದಲ್ಲಿ ಇಡಲಾಗಿದೆ. ಕಂಪನಿಯು ಪ್ಲಾನ್ ಪ್ರಕಾರ, Curvv ಕಾರಿಗೆ ಭಾರತದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿಯೇ ನಡೆಯುವ ಅಟೋ ಎಕ್ಸ್ಪೋ ನಲ್ಲಿ ಬಿಡುಗಡೆ ಮಾಡುವವರಿದ್ದರು. ಆದರೆ ಕೋವಿಡ್ ನಿಂದಾಗಿ ಇದು ನಿಂತುಹೋಯಿತು. ಹೀಗಾಗಿ ಈ ಎಕ್ಸ್ಪೋ ಈಗ 2023 ಎಲ್ಲಿ ಆಯೋಜನೆ ಮಾಡಲಾಗಿದೆ.