ಕಾಡಿನ ರಾಜನಾದರೇನಂತೆ ಇಲ್ಲಿಯೂ ಹೆಂಡತಿಯ ಸೆರಗು ಅಲ್ಲ ಬಾಲ ಹಿಡಿಯಲೇಬೇಕು ಎಂದ್ಹೇಳುವ ಸತ್ಯವಾದ ಸುಂದರ ತಮಾಷೆಯ ವಿಡಿಯೋ…
ಪ್ರಾಣಿಗಳ ಜೀವನವು ಸಹ ಅನೇಕ ರೀತಿಯಲ್ಲಿ ಮನುಷ್ಯನ ಹಾಗೆಯೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಾಣಿಗಳ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಎಷ್ಟೋ ವಿಡಿಯೋಗಳು ಮಾನವನ ನೈಜ ಬದುಕಿಗೆ ಹಿಡಿದ ಕನ್ನಡಿಯಾಗಿರುತ್ತವೆ. ಸಮಾಜದಲ್ಲಿ ಅಥವಾ ಹೊರಗಿನ ಜಗತ್ತಿನಲ್ಲಿ ಪುರುಷ ಎಷ್ಟೇ ಪ್ರಭಾವಶಾಲಿ ಅಥವಾ ಶಕ್ತಿವಂತನಿದ್ದರೂ ಮನೆಯಲ್ಲಿ ಮಾತ್ರ ಹೆಂಡತಿಯ ಮುಂದೆ ಆತನ ಆಟ ಏನು ನಡೆಯುವುದಿಲ್ಲ. ಅದಕ್ಕೆ ಹಿರಿಯರು ಇಂಥ ವ್ಯಕ್ತಿಗಳಿಗೆ ಒಪ್ಪುವ ಗಾದೆಮಾತೊಂದು ಮೊದಲೇ ಹೇಳಿದ್ದಾರೆ. ‘ಮನೇಲಿ ಇಲಿ, ಬೀದೀಲಿ ಹುಲಿ’ ಎಂದು ಹೇಳುವ ಗಾದೆ ಮಾತು ಮೊದಲಿನಿಂದಲೂ ರೂಢಿಯಲ್ಲಿದೆ. ಈಗ ಈ ಮೇಲೆ ಹೇಳಿದ ವಿಚಾರಕ್ಕೆ ಒಪ್ಪುವ ದೃಶ್ಯವೊಂದನ್ನು ಕಾಡಿನ ರಾಜನಿಂದ ನಡೆದುಹೋಗಿದೆ. ಆ ದೃಶ್ಯವನ್ನು ಫೋಟೋಗ್ರಾಫರ್ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯಶಸ್ವಿಯಾಗಿದ್ದಾನೆ.
ಕಾಡಿನಲ್ಲಿ ಎಲ್ಲಕ್ಕೂ ಕ್ರೂರ ಹಾಗೂ ಶಕ್ತಿಯುತ ಪ್ರಾಣಿ ಸಿಂಹ. ಇದರ ಮುಂದೆ ಕಾಡಿನಲ್ಲಿರುವ ಯಾವುದೇ ಪ್ರಾಣಿಗಳ ಆಟ ನಡೆಯುವುದಿಲ್ಲ. ಆದ್ದರಿಂದಲೇ ಇದಕ್ಕೆ ಕಾಡಿನ ರಾಜನೆಂದು ಕರೆಯುತ್ತಾರೆ. ಆದರೆ ಸಿಂಹಿಣಿಯ ಮುಂದೆ ಕಾಡಿನ ರಾಜನ ಅವಸ್ಥೆಯೂ ಮನುಷ್ಯನ ಹಾಗೆಯೇ ಹೇಗಾಗುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ…
ವಿಡಿಯೋದ ದೃಶ್ಯದಲ್ಲಿ ಕಂಡುಬರುವ ಹಾಗೆ ಒಂದು ಗಂಡು ಇನ್ನೊಂದು ಹೆಣ್ಣು ಎರಡು ಸಿಂಹಗಳು ರೋಮ್ಯಾಂಟಿಕ್ ಮೂಡ್ ನಲ್ಲಿ ಇರುತ್ತವೆ. ಆಗ ಹೆಣ್ಣು ಸಿಂಹ ಮುಂದೆ ನಡೆಯಲು ಶುರು ಮಾಡಿದಾಗ ಗಂಡು ಸಿಂಹ ಅದನ್ನು ಫಾಲೋ ಮಾಡುವ ದೃಶ್ಯ ತುಂಬಾ ತಮಾಷೆಯದಾಗಿದೆ. ಏಕೆಂದರೆ ಹೆಣ್ಣು ಸಿಂಹದ ಬಾಲವನ್ನು ಬಾಯಿಯಲ್ಲಿ ಹಿಡಿದು (ಪುರುಷರು ಹೆಂಡತಿಯ ಸೆರಗು ಹಿಡಿದಂತೆ) ಓಡಲು ಶುರು ಮಾಡುತ್ತದೆ. ಈ ದೃಶ್ಯ ನೋಡಲು ತುಂಬಾ ಅಪರೂಪವಾಗಿದ್ದು ಸೇಮ್ ಟು ಸೇಮ್ ಮನುಷ್ಯ ಜೀವಿಗೆ ಹೋಲುವಂತೆಯೇ ಇದೆ, ಅಲ್ವಾ?
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ predator.unity ಈ ಹೆಸರಿನಿಂದ ಶೇರ್ ಮಾಡಲಾಗಿದೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ.