ಕಿರಿದಾದ ಸಿಂಗಲ್ ಬ್ರಿಡ್ಜ್ ಮೇಲೆ ಅದ್ಭುತವಾಗಿ ಕಾರ್ ಟರ್ನ್ ಮಾಡಿದ ಡ್ರೈವರ್ ನ ಈ ಕೌಶಲ್ಯಕ್ಕೆ ಏನಂತೀರಾ? ನೋಡಿ ಈ ಸಖತ್ ವೈರಲ್ ವಿಡಿಯೋ…
ವಾಹನಗಳನ್ನು ತುಂಬಾ ಜನರು ನಡೆಸುತ್ತಾರೆ, ಆದರೆ ಅದನ್ನು ನಡೆಸುವ ಸರಿಯಾದ ಕೌಶಲ್ಯ ಕೆಲವರಲ್ಲಷ್ಟೇ ಕಂಡುಬರುತ್ತದೆ ಅಥವಾ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಡ್ರೈವರ್ ಗಳ ಕೌಶಲ್ಯವನ್ನು ತೋರಿಸುವ ಅನೇಕ ವಿಡಿಯೋಗಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಇಕ್ಕಟ್ಟಾದ ಸ್ಥಳದಲ್ಲಿ ವಾಹನ ಪಾರ್ಕ್ ಮಾಡುವುದು, ಮತ್ತು ಇಕ್ಕಟ್ಟಾದ ಪಾರ್ಕಿಂಗ್ ಸ್ಥಳದಲ್ಲಿ ನಿಂತ ವಾಹನವನ್ನು ಹೊರಗೆ ತೆಗೆಯುವುದು, ಹೀಗೆ ಅನೇಕ ರೀತಿಯ ಡ್ರೈವರ್ ಗಳ ಕೌಶಲ್ಯ ನೋಡಿದ್ದೇವೆ. ಆದರೆ ಈಗ ಡ್ರೈವರ್ ನೊಬ್ಬ ತುಂಬಾ ಕಿರಿಯರಾದ ಬ್ರಿಜ್ ಮೇಲಿಂದ ಕಾರು ಟರ್ನ್ ಮಾಡಿಕೊಂಡು ಹೋಗಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಾಣುವ ಹಾಗೆ ಮೊದಲು ಕಾರು ಕಿರಿದಾದ ಬ್ರಿಜ್ ಮೇಲೆ ಹಿಮ್ಮುಖವಾಗಿ (ರಿವರ್ಸ್) ಬರುತ್ತದೆ. ನಂತರ ಡ್ರೈವರ್ ಅತೀ ಸುಂದರವಾಗಿ ತನ್ನ ಕೌಶಲ್ಯವನ್ನು ಉಪಯೋಗಿಸುತ್ತಾ ಹಿಂದೆ ಮುಂದೆ ಮಾಡುತ್ತಾ ಕಾರನ್ನು ಟರ್ನ್ ಮಾಡುವದರಲ್ಲಿ ಯಶಸ್ವಿಯಾಗಿ ಅಲ್ಲಿಂದ ಓಡಿಸಿಕೊಂಡು ಹೋಗಿರುವ ದೃಶ್ಯ ನೋಡುಗರಿಗೆ ಮೈ ನವಿರೇಳಿಸುತ್ತದೆ. ಕಾರಣ ಕಾರನ್ನು ಆ ಸ್ಥಳದಲ್ಲಿ ತಿರುಗಿಸುವಾಗ ಸ್ವಲ್ಪವೇ ಸ್ವಲ್ಪ ಕೂದಲೆಳೆಯಷ್ಟು ಅಂತರ ಹೆಚ್ಚುಕಡಿಮೆಯಾದರೂ ಕಾರು ಕೆಳಗೆ ಹರಿಯುವ ನೀರಿನ ಪ್ರಪಾತದಲ್ಲಿ ಬೀಳುವ ಸಾಧ್ಯತೆ ನೂರಕ್ಕೆ 100% ಗ್ಯಾರಂಟಿ ಇತ್ತು. ಅಂತಹ ಸ್ಥಳದಲ್ಲಿ ಡ್ರೈವರ್ ತುಂಬಾ ಆತ್ಮವಿಶ್ವಾಸದಿಂದ ಲೀಲಾಜಾಲವಾಗಿ ಕಾರು ತಿರುಗಿಸಿದ್ದಾನೆ. ಇಲ್ಲಿ ಡ್ರೈವರ್ ತೋರಿದ ಡ್ರೈವಿಂಗ್ ಕೌಶಲ್ಯ ನಿಜಕ್ಕೂ ಅದ್ಭುತವಾಗಿದೆ ಎಂದೇ ಹೇಳಬಹುದು.
ವಿಡಿಯೋ ನೋಡಿ
ಈ ವಿಡಿಯೋವನ್ನು ಯೂಟ್ಯೂಬ್
ನ ಶಾರ್ಟ್ ವಿಡಿಯೋದಲ್ಲಿ ಶೇರ್ ಮಾಡಲಾಗಿದೆ. ಈ ದೃಶ್ಯವನ್ನು ಇಲ್ಲಿಯವರೆಗೆ ಮಿಲಿಯನ್ ನಲ್ಲಿ ಜನರು ನೋಡಿದ್ದಾರೆ. ಮತ್ತು ಈ ವಿಡಿಯೋಗೆ ಲಕ್ಷ ಲಕ್ಷ ಜನರು ಲೈಕ್ ಮಾಡಿದ್ದಾರೆ.