ಕ್ಯಾಚ್ ಅಂತೂ ದೂರ, ಕನಿಷ್ಠ ಹಿಡಿಯುವ ಪ್ರಯತ್ನವೂ ಇಲ್ಲ; ಗುಜರಾತ್ ಮ್ಯಾಚ್ ವಿನ್ನರ್ ಬ್ಯಾಟ್ಸ್ಮನ್ ನ ಕ್ಯಾಚ್ ಕೈಚೆಲ್ಲಿದ ಶಿವಂ ದುಬೇ ಮೇಲೆ ಜಡೇಜಾ ರಿಯಾಕ್ಷನ್ ನೋಡಿ…

ರವೀಂದ್ರ ಜಡೇಜಾ ಅವರ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಸೋಲು ಕಂಡಿತು. ರವಿವಾರದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಚೆನ್ನೈಗೆ ಮೂರು ವಿಕೆಟ್ ಗಳಿಂದ ಸೋಲಿಸಿತು. ಸದ್ಯದ ಹಂಗಾಮಿನಲ್ಲಿ ಚೆನ್ನೈ 5ನೇ ಬಾರಿ ಸೋಲು ಕಂಡಿದೆ. ಗುಜರಾತಿನ ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಇವರು ತುಂಬಾ ಚೆನ್ನಾಗಿ ಆಟ ಪ್ರದರ್ಶನ ಮಾಡಿದ ಕಾರಣದಿಂದ ಪಂದ್ಯವು ಚೆನ್ನೈ ಕೈಯಿಂದ ಜಾರಿತು. ಈ ಮಧ್ಯೆ ಚೆನ್ನೈ ತಂಡದ ಶಿವಂ ದುಬೆ ಒಂದು ದೊಡ್ಡ ತಪ್ಪನ್ನು ಎಸಗಿದರು. ಇದರಿಂದಾಗಿ ನಾಯಕ ಜಡೇಜಾ ಲೈವ್ ಪಂದ್ಯದಲ್ಲಿಯೇ ಭರ್ಜರಿಯಾಗಿ ಸಿಟ್ಟಾಗಿದ್ದನ್ನು ನೋಡಬಹುದು.

ಶಿವಂ ದುಬೆ ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅವರ ತುಂಬಾ ಸರಳವಾದ ಕ್ಯಾಚ್ ಕೈ ಚೆಲ್ಲಿಬಿಟ್ಟರು. ಅವರ ಈ 1 ತಪ್ಪಿನಿಂದಾಗಿ ಡೇವಿಡ್ ಮಿಲ್ಲರ್ ಅವರಿಗೆ ಜೀವದಾನ ಸಿಕ್ಕಿತು. ಡೇವಿಡ್ ಮಿಲ್ಲರ್ ಈ ಪಂದ್ಯದಲ್ಲಿ ಔಟಾಗದೆ 94 ರನ್ಗಳನ್ನು ಸಿಡಿಸಿ ತಂಡ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಪ್ರಸ್ತುತ ಪ್ರಸಂಗವು ಗುಜರಾತ್ ಬ್ಯಾಟಿಂಗ್ ಮಾಡುವಾಗ 17 ನೇ ಓವರ್ ನಲ್ಲಿ ಘಟಿಸಿತು. ಗುಜರಾತಿಗೆ ಆ ಸಮಯದಲ್ಲಿ 24 ಚೆಂಡುಗಳಲ್ಲಿ 52 ರನ್ನುಗಳ ಅವಶ್ಯಕತೆ ಇತ್ತು. ಡ್ವೆನ್ ಬ್ರಾವೋ ಅವರು ತಮ್ಮ ಓವರ್ ನ ಮೊದಲೆರಡು ಬಾಲ್ ಗಳಲ್ಲಿ ಬರಿ 2 ರನ್ನುಗಳನ್ನು ನೀಡಿದ್ದರು. ಮೂರನೇ ಬಾಲ್ ಗೆ ಮಿಲ್ಲರ್ ಮಿಡ್ ವಿಕೆಟ್ ಕಡೆಗೆ ಹವೆಯಲ್ಲಿ ಫುಲ್ ಶಾಟ್ ಹೊಡೆದರು. ಅಲ್ಲಿ ಫೀಲ್ಡಿಂಗ್ ಸಲುವಾಗಿ ನಿಂತಿರುವ ಶಿವಂ ದುಬೆ ತುಂಬಾ ಸರಳವಾದ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡದೆ ಚಾನ್ಸ್ ಮಿಸ್ ಮಾಡಿದರು.

ಈ ಸಮಯದಲ್ಲಿ ಶಿವಂ ದುಬೆ ಅವರು ಕ್ಯಾಚ್ ಹಿಡಿಯಲು ಸ್ವಲ್ಪವೂ ಪ್ರಯತ್ನಿಸದೆ ಬಾಲ್ ಹತ್ತಿರ ಬಂದು ನಿಂತುಬಿಟ್ಟು ನಂತರ ಅದು ಒನ್ ಬೌನ್ಸ್ ಆದನಂತರ ಹಿಡಿದರು. ಇಷ್ಟೊಂದು ಸರಳವಾದ ಕ್ಯಾಚ್ ಹಿಡಿಯಲು ಶಿವಂ ದುಬೆ ಸ್ವಲ್ಪವೂ ಪ್ರಯತ್ನಿಸದ ಕಾರಣ ಬೌಲರ್ ಬ್ರಾವೊ ನಿರಾಶರಾದರೆ ನಾಯಕ ಜಡೇಜಾ ಅವರು ತಮ್ಮ ಸಿಟ್ಟನ್ನು ಪ್ರದರ್ಶಿಸುವಾಗ ತಲೆಯ ಮೇಲಿನ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆ ಹೊಡೆಯಬೇಕೆನ್ನುವಷ್ಟರಲ್ಲಿ ಮತ್ತೆ ಕಂಟ್ರೋಲ್ ಮಾಡಿಕೊಂಡರು. ಕಾಮೆಂಟೇಟರ್ ಸಹ ದುಬೆಯವರ ಈ ಕೃತಿ ನೋಡಿ ನಿಶ್ಯಬ್ದರಾಗಿದ್ದರು.

ವಿಡಿಯೋ ನೋಡಿ

ಶಿವಂ ದುಬೆ ಅವರು ಮಿಲ್ಲರ್ ಅವರ ಕ್ಯಾಚ್ ಬಿಟ್ಟಾಗ ಮಿಲ್ಲರ್ 43 ಬಾಲ್ ಗಳಲ್ಲಿ 79 ರನ್ಗಳನ್ನು ತೆಗೆದಿದ್ದರು. ಮುಂದೆ ಮಿಲ್ಲರ್ ಅವರು ದೊರೆತ ಅವಕಾಶದ ಲಾಭ ಪಡೆಯುತ್ತಾ ಔಟಾಗದೆ 94 ರನ್ನುಗಳನ್ನು ಬಾರಿಸಿದರು. ಹೀಗೆ ಮಿಲ್ಲರ್ ಅವರು ಒಟ್ಟು 51 ಬಾಲ್ ಗಳಲ್ಲಿ 6 ಸಿಕ್ಸ್ ಮತ್ತು 8 ಫೋರ್ ಗಳ ಸಹಾಯದಿಂದ ಒಟ್ಟು 94 ರನ್ ಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಅವರ ಈ ಸುಂದರ ಆಟಕ್ಕಾಗಿ ಮ್ಯಾನ್ ಆಫ್ ದ ಮ್ಯಾಚ್ ಪುರಸ್ಕಾರ ನೀಡಲಾಯಿತು.