ಕಳ್ಳತನ ಯಶಸ್ವಿಯಾದ ಖುಷಿಯಲ್ಲಿ ಕಳ್ಳ ಹೊಡೆದನು ಅದೇ ಸ್ಪಾಟ್ ನಲ್ಲಿ ಡ್ಯಾನ್ಸ್! ವಿಡಿಯೋ ವೈರಲ್…
ಯಾರಿಗೆ ಯಾವಾಗ ಖುಷಿ ಯಾಗುತ್ತದೆ ಮತ್ತು ಖುಷಿಯಾದಾಗ ಯಾರು ಯಾವ ರೀತಿ ಸೇಲಿಬ್ರೆಟ್ ಮಾಡುತ್ತಾರೆ ಅವರವರ ವಿಚಾರಕ್ಕೆ ಬಿಟ್ಟಿದ್ದು. ಕಾರಣ ಪ್ರತಿಯೊಬ್ಬರೂ ಆನಂದಿಸುವ ರೀತಿ ಬೇರೆಯಾಗಿಯೇ ಇರುತ್ತದೆ. ಇಲ್ಲಿ ಕಳ್ಳನೊಬ್ಬ ಒಂದು ಅಂಗಡಿಯಲ್ಲಿ ಕನ್ನ ಹಾಕಿದ್ದಾನೆ. ಆಲ್ಲಿ ಆತನಿಗೆ ಕೈಗೆ ಎಣಿಸಿದ್ದಕ್ಕಿಂತ ಹೆಚ್ಚಿಗೆ ಏನಾದರೂ ಹತ್ತಿದೆ. ಅದೇ ಖುಷಿಯನ್ನು ಆತ ವ್ಯಕ್ತ ಮಾಡಿದ ರೀತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೆಲವರು ದುಡಿದು, ಪರಿಶ್ರಮ ಪಟ್ಟು ಒಳ್ಳೆಯ ಮಾರ್ಗದಿಂದ ಹಣ ಗಳಿಸಿದರೆ ಇನ್ನು ಕೆಲವರು ದುಡಿಯದೆ ಆರಾಮಾಗಿ ಇನ್ನೊಬ್ಬರಿಗೆ ಲೂಟಿ ಮಾಡುತ್ತ ಸಮಾಜ ವಿರೋಧಿ ಕೆಲಸ ಮಾಡಿ ಹಣ ಗಳಿಸುವ ವಿಚಾರವನ್ನು ಹೊಂದಿರುತ್ತಾರೆ. ಇಲ್ಲೊಬ್ಬ ಕಳ್ಳ ಹಾರ್ಡ್ ವೇರ್ ಅಂಗಡಿಗೆ ಕನ್ನ ಹಾಕಿದ್ದಾನೆ. ಅಲ್ಲಿ ಕಳ್ಳನಿಗೆ ಅಪೇಕ್ಷೆಗಿಂತಲೂ ಹೆಚ್ಚು ಏನಾದರೂ ಕೈಗೆ ಹತ್ತಿದೆ. ಆಗ ಕಳ್ಳನಿಗೆ ತುಂಬಾ ಖುಷಿಯಾಗಿದೆ. ಆ ಖುಷಿಯನ್ನು ವ್ಯಕ್ತಮಾಡಲು ತನ್ನ ಎರಡು ಕೈಗಳನ್ನು ಮೇಲೆ ಮಾಡಿ ಡ್ಯಾನ್ಸ್ ಮಾಡುತ್ತಾ ತನ್ನ ಖುಷಿ ಜಾಹೀರು ಪಡಿಸಿದ್ದಾನೆ. ಈ ಘಟನೆ ಕಳೆದ ಶುಕ್ರವಾರ ಯುಪಿಯ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ. ವಿಶೇಷ ವೆಂದರೆ ಪ್ರಸ್ತುತ ಅಂಗಡಿ ಪೊಲೀಸ್ ಸೂಪರಿಂಟೆಂಡೆಂಟ್ ಅವರ ನಿವಾಸದ ಹತ್ತಿರವೇ ಇದ್ದರೂ ಕಳ್ಳತನವಾಗಿದೆ ಎಂದರೆ ತುಂಬಾ ತಮಾಷೆಯ ವಿಷಯ ಅಲ್ವೇ? ತಕರಾರುದಾರನ ಹೇಳಿಕೆಯ ಪ್ರಕಾರ, ಸುಮಾರು 10 ಸಾವಿರ ರೂಪಾಯಿಗಳವರೆಗೆ ನಗದು ಹಾಗೂ ಸಾವಿರಾರು ರೂಪಾಯಿಗಳ ಸಾಮಾನುಗಳನ್ನು ದೋಚಿಕೊಂಡು ಹೋಗುವ ಮುನ್ನ ಕಳ್ಳ ಅಂಗಡಿಯಲ್ಲಿಯ ಸಿಸಿಟಿವಿ ಎದುರು ಕುಣಿದು ಕುಪ್ಪಳಿಸಿ ಹೋಗಿದ್ದಾನೆ. ಪ್ರಸ್ತುತ ಘಟನೆಯ ಸಿಸಿಟಿವಿ ಫೂಟೇಜ್ ಮುಖಾಂತರ ಪೊಲೀಸರು ತನಿಖೆಗೆ ಶುರು ಮಾಡಿದ್ದಾರೆ.
ವಿಡಿಯೋ ನೋಡಿ
यूपी में अब चोर चोरी के बाद जश्न मना रहा है चंदौली में @chandaulipolice आपकी कोई ज़िम्मेदारी है क्या ? @adgzonelucknow pic.twitter.com/RTnNJdScEa
— Manoj KAKA (@ManojSinghKAKA) April 18, 2022