ಈ ಮೇಧಾವಿಯಲ್ಲಿ ಕ್ರಿಯೇಟಿವಿಟಿ ಲೇವಲ್ ಹದ್ದು ಮೀರಿ ತುಂಬಿದೆ ಎಂದರೆ ತಪ್ಪಿಲ್ಲ; ಒಮ್ಮೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ…
ಜನರ ತಲೆಯಲ್ಲಿ ಎಂಥೆಂಥ ಐಡಿಯಾಗಳು ತುಂಬಿವೆ ಮತ್ತು ಈ ಐಡಿಯಾಗಳನ್ನು ಹೊರ ಹಾಕಲು ಸೋಶಿಯಲ್ ಮೀಡಿಯಾದ ಉಪಯೋಗ ಹೇಗೆ ಮಾಡಿಕೊಳ್ಳುತ್ತಾರೆ ಇವೆಲ್ಲವನ್ನೂ ಸೋಶಿಯಲ್ ಮೀಡಿಯಾ ಮುಖಾಂತರ ದಿನನಿತ್ಯ ನೋಡಿ ನೋಡಿ ಸಾಕಾಗುತ್ತಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಇಣುಕಿ ನೋಡುವ ಜನರ ಅಭಿರುಚಿಯೇನು ಕಡಿಮೆಯಾಗುತ್ತಿಲ್ಲ, ಬದಲಾಗಿ ಹೆಚ್ಚೆ ಆಗುತ್ತಿದೆ.
ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಒಮ್ಮೆ ಮೀಡಿಯಾ ಎದುರಿಗೆ ಕುಳಿತುಕೊಂಡ ಸಮಯ ಟೇಬಲ್ ಎದುರಿಗೆ ಇಟ್ಟಿದ್ದ ಕೋಕಾಕೋಲದ ಎರಡು ಬಾಟಲ್ ಗಳನ್ನು ತೆಗೆದು ಬದಿಗೆ ಇಟ್ಟರು. ಆ ಸಮಯದಲ್ಲಿ ಕ್ರಿಸ್ಟಿಯಾನೋ ಅವರ ಈ ವಿಡಿಯೋ ತುಂಬಾ ವೈರಲ್ ಆಗಿತ್ತು. ಮೀಡಿಯಾದಲ್ಲಿಯೂ ಕಂಪನಿಗೆ ಸಂಬಂಧಿಸಿ ವಿವಿಧ ರೀತಿಯ ಮಿಮ್ಸ್ ಗಳು ಹರಿದಾಡಿದ್ದವು. ಈಗ ವ್ಯಕ್ತಿಯೊಬ್ಬ ಇದೇ ವಿಡಿಯೋವನ್ನು ಉಪಯೋಗಿಸಿ ಸಖತ್ ತಮಾಷೆಯ ರೀಲ್ಸ್ ಒಂದನ್ನು ತಯಾರಿಸಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾನೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ನಕ್ಕು ನಲಿಸಿದೆ.
ಟಿವಿಯಲ್ಲಿ ಈ ವಿಡಿಯೋ ಪ್ರಸಾರವಾಗುವ ಸಮಯದಲ್ಲಿ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾನೆ. ಕ್ರಿಸ್ಟಿಯಾನೋ ಅವರು ಕೋಕಾಕೋಲ ಬಾಟಲ್ ಗಳನ್ನು ಬದಿಗೆ ತೆಗೆದಿಡುವ ಮುನ್ನ ವ್ಯಕ್ತಿಯು ಆತನ ಹೆಸರಿನಿಂದ ಕರೆ ನೀಡುತ್ತಾನೆ, ಆಗ ಕ್ರಿಸ್ಟಿಯಾನೋ ಆತನ ಕಡೆಗೆ ನೋಡುತ್ತಾನೆ. ಅದೇ ಸಮಯದಲ್ಲಿ ಸನ್ನೆ ಮಾಡಿ ವ್ಯಕ್ತಿಯು ಆ ಬಾಟಲ್ ಗಳು ತನಗೆ ನೀಡಲು ವಿನಂತಿಸುತ್ತಾನೆ. ಆತನ ವಿನಂತಿಗೆ ಕ್ರಿಸ್ಟಿಯಾನೋ ಎದುರಿನ ಬಾಟಲ್ ಗಳನ್ನು ತೆಗೆದು ಈತನಿಗೆ ಸೇಮ್ ಟು ಸೇಮ್ ಕೊಟ್ಟಂತೆ ಭಾಸವಾಗುತ್ತದೆ. ನಂತರ ವ್ಯಕ್ತಿಯು ಸಹ ತುಂಬಾ ವಿನಯದಿಂದ ಒಂದು ಕೊಟ್ಟ ನಂತರ ಇನ್ನೊಂದು ಎಂದು ಹೇಳಿ ಎರಡೂ ಬಾಟಲ್ ಗಳು ತೆಗೆದುಕೊಳ್ಳುವ ನಟನೆ ಹಾಗೂ ಟೈಮಿಂಗ್ ನಿಜಕ್ಕೂ ಅದ್ಭುತ ಜೊತೆಗೆ ಸಖತ್ ತಮಾಷೆಯಾಗಿದೆ.
ನೋಡಿ ನೀವು ಈ ವಿಡಿಯೋ…
View this post on Instagram
ಈ ವೀಡಿಯೋವನ್ನು ಇಲ್ಲಿಯವರೆಗೆ 21 ಮಿಲಿಯನ್ ಜನರು ನೋಡಿದ್ದು 1.9 ಜನರು ಲೈಕ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಕ್ರಿಸ್ಟಿಯಾನೋ 7 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.