ಜಾಲಿಯಾಗಿ ಸೈಕಲ್ ಸವಾರಿ ಮಾಡುವಾಗಲೇ ಹಠಾತ್ ಮಧ್ಯೆ ಸೇರಿತು ಉದ್ದನೆಯ ಹಾವು..!ಇಬ್ಬರ ಫಜೀತಿಯ ಸೂಪರ್ ವಿಡಿಯೋ ವೈರಲ್…
ಗೆಳೆಯರೆಂದಾಗ ಏನಾದರೂ ಅವಾಂತರ ಆಗಲಿಲ್ಲ ಅಂದರೆ ಹೇಗೆ? ಅದೇನು ಗೆಳತನವೇ? ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವಿಡಿಯೋ ಒಂದು ಸುತ್ತಾಡುತ್ತಿದೆ. ಈ ವಿಡಿಯೋ ನೋಡಿದಾಗ ಬಿದ್ದು ಬಿದ್ದು ನಗುವದರ ಜೊತೆಗೆ ನಿಮ್ಮ ಮಿತ್ರರಿಗೂ ನಗಿಸಲು ಶೇರ್ ಮಾಡುತ್ತೀರಿ, ಆ ರೀತಿಯ ವಿಡಿಯೋ ಇದಾಗಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಮುಖ್ಯ ರಸ್ತೆಯ ಮೇಲಿಂದ ಇಬ್ಬರು ಮಿತ್ರರು ಸೈಕಲ್ ಮೇಲೆ ಬರುತ್ತಿದ್ದಾರೆ. ಮುಂದೆ ಬರುತ್ತಲೇ ಉಪದಾರಿಗೆ ಟರ್ನ್ ತೆಗೆದುಕೊಳ್ಳುತ್ತಾರೆ. ಇಬ್ಬರೂ ಮಿತ್ರರೆಂದಾಗ ಅವರಿಗ್ಯಾಕೆ ಬೇಕು ಈ ಜಗದ ಪರಿವು? ಆ ರೀತಿಯಲ್ಲಿ ಸೈಕಲ್ ಮೇಲೆ ಜಾಲಿಯಾಗಿ ಚಲಿಸುತ್ತಿದ್ದಾರೆ. ಬಹುಶಃ ಅವರ ಖುಷಿ ನಿಸರ್ಗಕ್ಕೆ ನೊಡಲಿಕ್ಕಾಗಿಲ್ಲ. ಅವರು ಬರುವ ದಾರಿಯಿಂದ ಅಡ್ಡಲಾಗಿ ಒಂದು ಉದ್ದನೆಯ ಹಾವೊಂದು ನುಸುಳಿ ಬಂದಿದೆ. ಇಬ್ಬರೂ ಹಾವಿನ ಕಡೆಗೆ ಗಮನವೇ ನೀಡಿಲ್ಲ. ಹಾವು ಮಾತ್ರ ಅವರಿಗೆ ಮಧ್ಯದಲ್ಲಿ ನೋಡಿ ಹೆದರಿ ಅವರು ಬರುವ ಮುನ್ನ ತಾನೇ ರಸ್ತೆಯನ್ನು ದಾಟಬೇಕೆಂದು ಮತ್ತಷ್ಟು ವೇಗವಾಗಿ ಚಲಿಸಲಿಕ್ಕೆ ಪ್ರಯತ್ನಿಸಿದೆ. ಆದರೆ ಹಾವಿನ ದುರದೃಷ್ಟವೋ ಇಲ್ಲ ಸೈಕಲ್ ಸವಾರ ದುರದೃಷ್ಟವೋ ಗೊತ್ತಿಲ್ಲ, ಹಾವು ಬರೋಬ್ಬರಿ ಅವರ ಸೈಕಲ್ ಚಕ್ರದಲ್ಲಿ ನುಸುಳಿದೆ. ಅಷ್ಟರ ಹೊತ್ತಿಗೆ ಸೈಕರ್ ಸವಾರರಿಗೂ ಪರಿಸ್ಥಿತಿಯ ಅರಿವು ಆಗಿತ್ತು. ಆದರೆ ಸಮಯ ಮೀರಿ ಹೋಗಿತ್ತು. ಇಬ್ಬರಿಗೂ ಏನು ಮಾಡಬೇಕೆಂದು ತಿಳಿಯದೇ ಪೇಚಿಗೆ ಬಿದ್ದು ಒದ್ದಾಡಿದ್ದಾರೆ. ಅವರ ಆ ಫಜೀತಿಯ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆ. ಕೊನೆಗೆ ಸೈಕಲ್ ಅಲ್ಲಿಯೇ ಬಿಟ್ಟು ಮೊದಲು ದೂರ ಸರಿದು ಓಡಿದ್ದಾರೆ. ಅದೃಷ್ಟ ಚೆನ್ನಾಗಿತ್ತು ಯಾರಿಗೂ ಯಾವ ರೀತಿಯ ದೈಹಿಕ ಹಾನಿಯಾಗಿಲ್ಲ ಮತ್ತು ಹಾವು ಸಹ ಕಚ್ಚಲಿಲ್ಲ.
ನೋಡಿ ಈ ವಿಡಿಯೋ…
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಲಕ್ಷಾಂತರ ಜನರು ನೋಡಿ ನಕ್ಕಿದ್ದಾರೆ. ಈ ವಿಡಿಯೋ ನಿಜಕ್ಕೂ ಗಂಭೀರತೆಯ ಮತ್ತು ಹೆದರಿಕೆಯ ವಿಡಿಯೋ ಆದರೂ ಎಷ್ಟೇ ತಡೆದುಕೊಂದರೂ ನಗು ಮಾತ್ರ ತಡೆಯಲು ಸಾಧ್ಯವಾಗುವುದಿಲ್ಲ.