Video! ಕರಡಿಯ ಮುಂದೆ ಹುಲಿಯಾಯಿತು ಇಲಿ, ಬೇಟೆಯ ಸೊಕ್ಕು ಇಳಿದು ಜೀವವನ್ನು ಉಳಿಸಿಕೊಳ್ಳಲು ಅಲ್ಲಿಂದ ಪಲಾಯನವಾದ ಹುಲಿ, ವೀಡಿಯೋ ಒಮ್ಮೆ ನೋಡಿ!!!

  1. ಕೆಲವು ದಿವಸಗಳ ಹಿಂದೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿತ್ತು ಅದರಲ್ಲಿ ಒಂದು ಮಂಗ ಐದು ಹುಲಿಗಳೊಂದಿಗೆ ಹೋರಾಡಿ ತನ್ನ ಪ್ರಾಣ ಉಳಿಸಿಕೊಳ್ಳುತ್ತದೆ. ಸದ್ಯಕ್ಕೆ ಅಂತಹದೇ ಮತ್ತೊಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಹುಲಿ ಬೇಟೆಯಾಡುವ ಬದಲಾಗಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು ಹುಲಿ ದಾಪುಗಾಲು ಇಡುತ್ತಾ ಕರಡಿಯ ಬೇಟೆಯಾಡಲು ಹೋಗುತ್ತದೆ. ಹುಲಿಗೆ ಕರಡಿಯ ಬೇಟೆಯಾಡುವದು ಮಾತ್ರ ತುಂಬಾನೆ ದುಬಾರಿ ಬಿದ್ದಿದೆ. ಏಕೆಂದರೆ ಹುಲಿ ಹಾರಿ ಕರಡಿಯನ್ನು ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ಕರಡಿನೆ ಆ ಹುಲಿಯನ್ನು ಬಾಯಲ್ಲಿ ಹಿಡಿದು ಅದಕ್ಕೆ ಎಸೆಯುತ್ತದೆ. ಸಿಟ್ಟಿಗೆದ್ದ ಕರಡಿ ತನ್ನ ಜೀವವನ್ನು ಉಳಿಸಿಕೊಳ್ಳಲು ಹುಲಿಯ ಮೇಲೆ ಎರಗಿ ಬೀಳುತ್ತದೆ. ಸಿಟ್ಟಿಗೆದ್ದ ಕರಡಿಯ ಅವತಾರವನ್ನು ಕಂಡು ಹೇಗಾದರೂ ಮಾಡಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕು ಎಂದು ಅಲ್ಲಿಂದ ಓಡಿ ಹೋಗುತ್ತದೆ. ಆದರೂ ಸಹ ಕರಡಿ ಅದರ ಹಿಂದೆ ಓಡಿ ಹೋಗಿ ಹೆದರಿಸುತ್ತದೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋತುಂಬಾನೇ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ನಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಇದುವರೆಗೆ ಈ ವೀಡಿಯೋವನ್ನು ಹನ್ನೆರಡು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ.