ವೈರಲ್ ಆಯ್ತು ‘ಅಕ್ಕ’ ಳ ಆವಾಂತರದ ವಿಡಿಯೋ…ಸ್ಕೂಟಿಯಿಂದಾಗಿ ನಡೆದು ಹೋದ ಪ್ರತಾಪ! ನೇಟಿಜನ್ಸ್ ಗಳೆನ್ನುತ್ತಿದ್ದಾರೆ ವ್ವಾವ್ ಅಕ್ಕಾ ಸೂಪರ್.

ಸೋಶಿಯಲ್ ಮೀಡಿಯಾದಲ್ಲಿ ಕಂಡು ಬರುವ ಕೆಲವು ವಿಡಿಯೋಗಳು ಹುಚ್ಚೆದ್ದು ನಗೆಗೆ ಈಡು ಮಾಡುತ್ತವೆ. ಅದರಲ್ಲೂ ಹುಡುಗಿಯರು ಟು ವೀಲರ್ ವಾಹನಗಳನ್ನು ಚಲಾಯಿಸುವಾಗ ನಡೆದ ಅತಿರೇಕದ ಪ್ರಸಂಗಗಳು ತುಂಬಾ ವೈರಲ್ ಆಗುತ್ತವೆ.

ಈ ಹುಡುಗಿಗೆ ಮರೆವು ಜಾಸ್ತಿ ಇದ್ದಂತೆ ವಿಡಿಯೊದಿಂದ ಕಂಡು ಬರುತ್ತಿದೆ. ಕೆಲವೇ ಕೆಲವು ಸೆಕೆಂಡುಗಳ ಈ ವಿಡಿಯೋ ನೋಡುಗರಿಗೆ ನಕ್ಕು ನಕ್ಕು ಸುಸ್ತಾಗಿಸುತ್ತದೆ. ಒಂದು ಹುಡುಗಿಯು ಬಂದು ರಸ್ತೆ ಪಕ್ಕದಲ್ಲಿ ತನ್ನ ವಾಹನವನ್ನು ಪಾರ್ಕ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಸರಿಯಾಗಿ ವಾಹನಕ್ಕೆ ಸ್ಟ್ಯಾಂಡ್ ಹಚ್ಚುವುದನ್ನು ಮರೆತುಬಿಡುತ್ತಾಳೆ. ಹೀಗಾಗಿ ಸ್ಕೂಟಿ ಆಕೆ ಸರಿಯುತ್ತಿರುವಾಗ ಕೆಳಗೆ ಬೀಳುತ್ತದೆ. ಆಗ ಹುಡುಗಿಯು ಆ ಸ್ಕೂಟಿಯನ್ನು ಮತ್ತೆ ನಿಲ್ಲಿಸುತ್ತಾಳೆ. ಆದರೆ ವಾಹನ ಕೀ ತೆಗೆಯದ ಕಾರಣದಿಂದಾಗಿ ಹಾಗೆಯೇ ಸ್ಟಾರ್ಟಿಂಗ್ ಕಂಡೀಶನ್ ನಲ್ಲಿ ಇರುತ್ತದೆ. ಹೀಗಾಗಿ ಎದುರಿಗೆ ನಿಂತಿರುವ ಬೈಕಿಗೆ ಹೋಗಿ ಡಿಕ್ಕಿ ಹೊಡೆಯುತ್ತದೆ. ಈ ಡಿಕ್ಕಿಯಿಂದಾಗಿ ಬೈಕ್ ಕೆಳಗೆ ಬೀಳುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by Bhutni_ke (@bhutni_ke_memes)

ತಮಾಷೆಯ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ತರತರದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.