ಮೃತ್ಯುವಿಗೆ ಮುದ್ದು ನೀಡುತ್ತಿರುವ ಮುದ್ದಾದ ಹುಡುಗಿಯ ವಿಡಿಯೋ ಆಯಿತು ವೈರಲ್! ನೀವು ನೋಡಿ ಧೈರ್ಯದಿಂದ ಒಮ್ಮೆ…

ಸೋಶಿಯಲ್ ಮೀಡಿಯಾ ಎಂದರೆ ಇಲ್ಲಿ ರೀತಿಯ ಪ್ರಾಣಿಗಳ ಎಲ್ಲ ತರದ ವಿಡಿಯೋಗಳು, ಫೋಟೋಗಳು ದೊರೆಯುವ ಅಗಣಿತವಾದ ಖಜಾನೆ. ಇಲ್ಲಿ ನಗಿಸುವ, ರೋದಿಸುವ, ಆಶ್ಚರ್ಯ ಪಡಿಸುವ, ಮನ ಕಲಕುವ, ಗಾಬರಿ ಪಡಿಸುವ ಹೀಗೆ ಎಲ್ಲ ನವರಸಗಳಿಗೆ ಸಂಬಂಧ ಪಟ್ಟ ಕಂಟೆಂಟ್ ಸಿಗುತ್ತದೆ. ಈಗ ಉಸಿರು ಬಿಗಿ ಹಿಡಿದು ನೋಡುವ ಮುದ್ದಾದ ಹುಡುಗಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ, ಆಕೆ ಮಾಡುವ ಕೆಲಸವೇ ಆ ರೀತಿಯಾದ್ದಾಗಿದೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ಕಾಳಿಂಗ ಸರ್ಪವೊಂದು ತನ್ನ ಹೆಡೆ ಎತ್ತಿ ಯಾವುದೇ ಸಂಕಟಕ್ಕೆ ಎದುರಾಗಲು ಸನ್ನದ್ಧವಾಗಿ ನಿಂತಿದೆ. ಅದರ ಎದುರೇ ಹುಡುಗಿಯೊಬ್ಬಳು ತನ್ನ ಮುಂದೆ ಯಾವುದೇ ರೀತಿಯ ಅಣುವಿನಷ್ಟು ಗಂಡಾಂತರವಿಲ್ಲವೆನೋ ಎನ್ನುವ ಹಾಗೆ ತುಂಬಾ ಕೂಲಾಗಿ ಒಂದು ಕೆಲಸ ಮಾಡುತ್ತಿದ್ದಾಳೆ. ಆಕೆ ಮಾಡುವ ಕೆಲಸ ನೋಡಿದರೆ ನೋಡುಗರ ಮೈ ಕಂಪಿಸುವ ಹಾಗಿದೆ.

ಅದೇನೆಂದರೆ, ಮುದ್ದಾದ ಹುಡುಗಿಯು ಕಾಳಿಂಗಕ್ಕೆ ಯಾವುದೇ ಭಯವಿಲ್ಲದೇ ನೇರ ಬಾಯಿಗೆ ಮುತ್ತು ಕೊಡುತ್ತಿದ್ದಾಳೆ. ಈ ಕೆಲಸವನ್ನು ಆಕೆ ಎರಡು ಬಾರಿ ಮಾಡುತ್ತಿದ್ದಾಳೆ. ಜೊತೆಗೆ ಅದರ ಹೆಡೆಯ ಮೇಲೆ ಸ್ವಲ್ಪವೂ ಭಯವಿಲ್ಲದೆ ಕೈ ಆಡಿಸುತ್ತಿದ್ದಾಳೆ. ಈ ಕೆಲಸ ಮಾಡುವುದಂತೂ ದೂರದ ಮಾತು ಬರೀ ಈ ವಿಡಿಯೋ ನೋಡಲು ಸಹ ತುಂಬಾ ಧೈರ್ಯ ಬೇಕು.

ವಿಡಿಯೋ ನೋಡಿ

 

View this post on Instagram

 

A post shared by Saurabh Jadhav 2110 (@rasal_viper)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ ತುಂಬಾ ಜನರು ನೋಡಿ ಗಾಬರಿಯಾಗುವದರ ಜೊತೆಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಈ ಹುಡುಗಿಯ ಧೈರ್ಯವನ್ನು ಮೆಚ್ಚಿದರೆ ಇನ್ನೂ ಕೆಲವರು ಇದು ತುಂಬಾ ಭಯ ಹುಟ್ಟಿಸುವ ದೃಶ್ಯವಾಗಿದೆ ಎಂದಿದ್ದಾರೆ.