ಜೂಮ್ ಮಾಡಿ ನೋಡಬಹುದು; ಈ ಫೋಟೋದಲ್ಲಿ ಅಡಗಿವೆ ಏನೆಲ್ಲಾ? ನಿಮಗೆ ಕಾಣಿಸುವುದು ಬರೀ ಮರ. ಮತ್ತೇನಿದೆ ಹುಡುಕಿ ನೋಡೋಣ…
ಆಪ್ಟಿಕಲ್ ಇಲ್ಯೂಜನ್ ಚಿತ್ರಗಳು ಕಣ್ಣುಗಳಿಗೆ ತುಂಬಾ ಮೋಸ ಮಾಡುತ್ತವೆ. ಈ ಭ್ರಮೆಯ ಮೂಡಿಸುವ ಚಿತ್ರದಲ್ಲಿ ಕಾಣಿಸುತ್ತದೆ ಬೇರೆ, ಆದರೆ ಪ್ರತ್ಯಕ್ಷದಲ್ಲಿರುತ್ತದೆ ಬೇರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಅನೇಕ ಚಿತ್ರಗಳು ಕಂಡು ಬರುತ್ತಿವೆ. ಈಗ ಮತ್ತೊಂದು ಚಿತ್ರ ನೇಟಿಜನ್ಸ್ ಗಳ ತಲೆ ತಿನ್ನುತ್ತಿದೆ.
ವೈರಲ್ ಆಗುತ್ತಿರುವ ಈ ಚಿತ್ರ ನೋಡಿ ನೆಟ್ಟಿಗರ ತಲೆ ಗಿರ್ರ ಎನ್ನುತ್ತಿದೆ. ಪ್ರಸ್ತುತ ಚಿತ್ರದಲ್ಲಿ ಬೇರೆ ಬೇರೆ ಘಟಕಗಳು ಅಡಗಿವೆ. ಮೊದಲಿಗೆ ದೃಷ್ಟಿ ಹಾಕಲು ನಿಮ್ಮ ಕಣ್ಣಿಗೆ ಹೆಚ್ಚಾಗಿ ಮರವೆ ಕಂಡು ಬರುತ್ತದೆ. ಆದರೆ ಈ ಚಿತ್ರದಲ್ಲಿ ಕೆಲವು ಪ್ರಾಣಿಗಳು ಸಹ ಅಡಗಿವೆ. ಅವು ಸಹಜವಾಗಿ ಕಂಡು ಬರುವದಿಲ್ಲ. ಅವುಗಳನ್ನು ಸೂಕ್ಷ್ಮವಾಗಿ ಮತ್ತು ತೀಕ್ಷ್ಣವಾದ ದೃಷ್ಟಿಯಿಂದ ಶೋಧಿಸಬೇಕಾಗುತ್ತದೆ.

ಈ ಚಿತ್ರದಲ್ಲಿ ಒಟ್ಟು ಮೂರು ಪ್ರಾಣಿಗಳು ಮರೆಯಾಗಿವೆ. ಈಗ ತುಂಬಾ ಕೂಲಂಕಷವಾಗಿ ನೋಡಿದಾಗ ಜಾಸ್ತಿ ಎಂದರೆ ನಿಮಗೆ ಎರಡು ಪ್ರಾಣಿಗಳು ಕಾಣಬಹುದು. ಆದರೆ ಇಲ್ಲಿ ಒಟ್ಟು ಮೂರು ಪ್ರಾಣಿಗಳು ಇವೆ.
ನೀವು ಉತ್ತರ ಶೋಧಿಸಿದರೆ ತುಂಬಾ ಒಳ್ಳೆಯದು ಮತ್ತು ನಿಮ್ಮ ಕಣ್ಣುಗಳು ನಿಜಕ್ಕೂ ತೇಜಸ್ವಿಯಾಗಿವೆ ಎಂದರ್ಥ. ಒಂದು ವೇಳೆ ಉತ್ತರ ಹುಡುಕುವಲ್ಲಿ ನೀವು ಸಫಲವಾಗದಿದ್ದರೆ ನಿಮಗಾಗಿ ಕೆಳಗೆ ಉತ್ತರ ನೀಡಲಾಗಿದೆ.

ಈ ಚಿತ್ರದಲ್ಲಿ ಒಟ್ಟು ಮೂರು ಪ್ರಾಣಿಗಳು ಅಡಗಿವೆ. ಒಂದು ಗೊರಿಲ್ಲಾ, ಇನ್ನೊಂದು ಸಿಂಹ ಮತ್ತು ಹಾರಾಡುತ್ತಿರುವ ಮೀನುಗಳು.