100 % ಸತ್ಯ; ಯುವತಿ ತವರುಮನೆಗೆ ಬರುವಾಗ…ಗಂಡನ ಮನೆಗೆ ಹೋಗುವಾಗ.. ಎರಡರ ಮಧ್ಯದ ಅಂತರ ತೋರಿಸುವ ಈ ಸೂಪರ್ ವೈರಲ್ ವಿಡಿಯೋ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ಓಡಾಡುವ ಕೆಲವೊಂದು ವಿಡಿಯೋಗಳು ನಿಜಕ್ಕೂ ತುಂಬಾ ಖತರ್ನಾಕ್ ಮೆಸೇಜ್ ನೀಡುತ್ತವೆ. ಅಂತ ವಿಡಿಯೋಗಳಲ್ಲಿ ನೂರಕ್ಕೆ ನೂರರಷ್ಟು ಸತ್ಯ ತುಂಬಿರುತ್ತದೆ. ಈಗ ಇದೇ ರೀತಿಯ ಒಂದು ವಿಡಿಯೋವನ್ನು ನೀವಿಲ್ಲಿ ನೋಡಬಹುದು.

ಮದುವೆಯಾದ ನಂತರ ಯುವತಿಯು ತವರು ಮನೆಗೆ ಬರುವಾಗ ಹಾಗೂ ನಂತರ ಗಂಡನ ಮನೆಗೆ ಮರಳಿ ಹೋಗುವಾಗ ಯಾವ ಬದಲಾವಣೆಗಳು ಕಂಡುಬರುತ್ತವೆ ಎಂಬುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು. ಪ್ರಸ್ತುತ ವಿಡಿಯೋ ನೋಡುವಾಗ ಮುಖದಲ್ಲಿ ಹಾಸ್ಯ ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ಸತ್ಯವಾದ ಸಂದೇಶವನ್ನು ಸಹ ನೀಡುತ್ತದೆ. ಯಾರೇ ಆಗಲಿ ಹೆಣ್ಣುಮಕ್ಕಳು ತವರು ಮನೆಗೆ ಬರುವಾಗ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣ ತವರುಮನೆಯಲ್ಲಿ ಮಗಳಿಗೆ ಕಡ್ಡಾಯವಾಗಿ ಯಾರು ಜಬರ್ದಸ್ತಿನಿಂದ ಕೇಳುವವರು ಇರುವುದಿಲ್ಲ. ಯಾಕೆಂದರೆ ತವರುಮನೆ ಮೊದಲಿನಿಂದಲೂ ಮಗಳ ಹಕ್ಕಿನ ಮನೆಯಾಗಿರುತ್ತದೆ.

ಆದರೆ ಗಂಡನ ಮನೆಗೆ ಮರಳಿ ಬರುವಾಗ ಮಾತ್ರ ಯುವತಿ ಹೇಗೆ ಬರುತ್ತಾಳೆ ಎಂಬ ದೃಶ್ಯ ನೋಡಿದಾಗ ಮಾತ್ರ ಯಾರಿಗೂ ನಗು ತಡೆಯಲಾಗುವುದಿಲ್ಲ. ಯುವತಿ ತವರು ಮನೆಗೆ ಬರುವಾಗ ಮತ್ತು ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ಈ ಎರಡು ದೃಶ್ಯಗಳ ಮಧ್ಯದಲ್ಲಿರುವ ಡಿಫರೆನ್ಸ್ ತೋರಿಸುವ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಆದ್ದರಿಂದಲೇ ಈ ವಿಡಿಯೋಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚಿಗೆ ಲೈಕ್ ಮಾಡಿದ್ದಾರೆ. ಈ ವಿಡಿಯೋ ಜನರಿಗೆ ಯಾಕಿಷ್ಟು ಲೈಕ್ ಆಗಿದೆ ಎಂಬುದು ನೀವು ಈ ವಿಡಿಯೋ ನೋಡಿದಾಗಲೇ ಗೊತ್ತಾಗುತ್ತದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Neha Bagga (@nehabagga)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ nehabaggaa ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 23 ಮಿಲಿಯನ್ ಗಿಂತಲೂ ಜಾಸ್ತಿ ಜನರು ನೋಡಿದ್ದಾರೆ ಹಾಗೂ ಒಂದು ಮಿಲಿಯನ್ ಗಿಂತಲೂ ಜಾಸ್ತಿ ಲೈಕ್ ಗಳು ಬಂದಿವೆ.