ಹಸುವಿನ ಕರು ಮೇಲೆ ಹೆಬ್ಬಾವು ಮಾಡಿತು ಅಟ್ಯಾಕ್! ಕಾಲು ಹಿಡಿದಾಗ ಕರು ಅಂಬಾ ಅಂಬಾ ಎನ್ನುತ್ತಿರುವ ಆರ್ತನಾದದ ವಿಡಿಯೋ ವೈರಲ್…

ಹಾವು ಎಂದ ತಕ್ಷಣವೇ ಭೀತಿಯಿಂದ ಎಷ್ಟೋ ಜನರ ಮೈ ಥರ ಥರನೇ ಕಂಪಿಸುವದು. ಇನ್ನು ಹೇಬ್ಬಾವು ಹಸುವಿನ ಮುದ್ದು ಕರು ಮೇಲೆ ಅಟ್ಯಾಕ್ ಮಾಡಿದಾಗ ಪಾಪ ಅದಕ್ಕೆ ಎಷ್ಟು ನೋವಾಗಿರಬೇಡ? ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೇ ವಿಡಿಯೋ ಎಲ್ಲ ಕಡೆಗೆ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಹೆಬ್ಬಾವು ಕರುವಿಗೆ ನುಂಗುವ ಪ್ರಯತ್ನದಲ್ಲಿದೆ. ಪುಟ್ಟ ಕರು ಅದರಿಂದ ಹೇಗಾದರೂ ಮಾಡಿ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಓಡಾಡುತ್ತಿದೆ. ಈ ಮಧ್ಯೆ ಕರು ಅಂಬಾ ಅಂಬಾ ಎಂದು ಒಂದೇ ಸವನೆ ಗೋಗರೆಯುತ್ತ ಆರ್ತನಾದದಿಂದ ತನ್ನ ತಾಯಿಯನ್ನು ಕರೆಯುತ್ತಿರುವ ಹಾಗಿದೆ. ಹೆಬ್ಬಾವು ಸುಮಾರು 10 ಅಡಿ ಉದ್ದವಿದೆ. ಹಾವು ಕೊಟ್ಟಿಗೆಯಲ್ಲಿ ಸೇರಿ ಕರುವಿನ ಮೇಲೆ ಅಟ್ಯಾಕ್ ಮಾಡಿದಾಗ ಬೇರೆ ಕರುಗಳು ಜೀವಭಯದಿಂದ ದಿಕ್ಕೆಟ್ಟು ಓಡಿ ಹೋಗುತ್ತಿವೆ. ಆದರೆ ಒಂದು ಕರು ಮಾತ್ರ ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿ ಬಿದ್ದು ಒದ್ದಾಡುತ್ತಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Wildlifeanimall (@wildlifeanimall)

ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪ್ರಸ್ತುತ ವಿಡಿಯೋ ಯಾರು ಮಾಡುತ್ತಿದ್ದಾರೆ ಮತ್ತು ಆ ಕರುವಿನ ಸಹಾಯಕ್ಕೆ ಯಾರು ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಗಳನ್ನು ನೇಟಿಜನ್ಸ್ ಕೇಳಿದ್ದಾರೆ. ಇನ್ನು ಕೆಲವರು ಕರುವಿನ ಮಾಲೀಕ ಆ ಸಂದರ್ಭದಲ್ಲಿ ಈ ರೀತಿಯ ವಿಡಿಯೋ ಎಂದಿಗೂ ಮಾಡಲಾರ ಎಂಬ ಭಾವನೆಯನ್ನು ಸಹ ವ್ಯಕ್ತ ಮಾಡಿದ್ದಾರೆ.