ಪುಟ್ಟನ ಈ ಸೂಪರ್ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ ಸೋಶಿಯಲ್ ಮೀಡಿಯಾದಲ್ಲಿ! ಅಂಥದ್ದೇನಿದೆ ಈ ವಿಡಿಯೋದಲ್ಲಿ ಅಂತೀರಾ? ಕ್ಲಿಕ್ ಮಾಡಿ ಗೊತ್ತಾಗುತ್ತೆ…
ಡಿಜೆ ಶಬ್ದ ಕೇಳುತ್ತಲೇ ಅನೇಕ ಜನರು ತಮ್ಮ ಕಾಲುಗಳನ್ನು ಅಲುಗಾಡಿಸಲು ಶುರುಮಾಡುತ್ತಾರೆ. ಕೆಲವರ ದೇಹದಲ್ಲಂತೂ ಭೂತ ಸಂಚಾರವಾದಂತೆ ಆಗಿಬಿಡುತ್ತದೆ. ಸರಿಯಾಗಿ ಕುಣಿಯಲು ಬರದಿದ್ದರೂ ನಾಗಿಣಿ ಡ್ಯಾನ್ಸ್, ಆರ್ಮಿ ಡ್ಯಾನ್ಸ್, ಎರಡು ಕೈಗಳನ್ನು ಮೇಲೆ ಮಾಡಿ ಗಣೇಶೋತ್ಸವದ ಡ್ಯಾನ್ಸ್ ಹೀಗೆ ಯಾವುದಾದರೂ ಒಂದು ಡ್ಯಾನ್ಸ್ ಮಾಡಿಬಿಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಒಬ್ಬ ಪುಟ್ಟ ಬಾಲಕ ಮಾಡಿದ ಡ್ಯಾನ್ಸ್ ವೈರಲ್ ಆಗುತ್ತಿದೆ. ಆತ ಎಲ್ಲ ನೇಟಿಜನ್ಸ್ ಗಳ ಗಮನವನ್ನು ತನ್ನ ಕಡೆ ಸೆಳೆದುಕೊಂಡಿದ್ದಾನೆ.
ಈ ಪುಟ್ಟ ಬಾಲಕ ಕುಳಿತಲ್ಲಿಯೇ ಬಿಂದಾಸಾಗಿ ಡ್ಯಾನ್ಸ್ ಮಾಡುತ್ತಿದ್ದಾನೆ. ಆತನ ಈ ವಿಡಿಯೋ ನೋಡಿದ ನಂತರ ನಿಮಗೂ ಸಹ ಆತನ ಜೊತೆಗೆ ಕುಣಿಯಬೇಕೆಂಬ ಹಂಬಲ ನಿರ್ಮಾಣವಾಗುತ್ತದೆ. ಆತನ ಬಾಡಿ ಲ್ಯಾಂಗ್ವೇಜ್ ಅಷ್ಟೊಂದು ನೋಡುವವರಿಗೆ ಔಟ್ ಆಫ್ ಕಂಟ್ರೋಲ್ ಮಾಡಿಬಿಡುತ್ತದೆ. ಈ ಬಾಲಕನ ವಿಡಿಯೋ ನೋಡುವಾಗ ಆತನ ಮೇಲೆ ನೆಟ್ಟ ದೃಷ್ಟಿ ಒಂದೇ ಒಂದು ಕ್ಷಣವೂ ಅತ್ತಿತ್ತ ಮಾಡಲು ಸಾಧ್ಯವಾಗುವುದಿಲ್ಲ. ಮೇಲಿಂದ ಮೇಲೆ ಈ ಹುಡುಗನ ಆಕ್ಷನ್ ನೋಡಬೇಕೆನಿಸುತ್ತದೆ.
ವಿಡಿಯೋದಲ್ಲಿ ಕಾಣುವ ಹಾಗೆ ಪುಟ್ಟ ಬಾಲಕ ಎಲ್ಲ ಹುಡುಗರ ಜೊತೆಗೆ ಜಗಲಿಯ ಮೇಲೆ ಕುಳಿತಿದ್ದಾನೆ. ಬ್ಯಾಗ್ರೌಂಡ್ ನಲ್ಲಿ ಹಾಡಿನ ಮ್ಯೂಸಿಕ್ ಜೋರು ಜೋರಾಗಿ ಕೇಳಿ ಬರುತ್ತಿದೆ. ಈ ಹುಡುಗ ಆ ಕೆಲಿಸುತ್ತಿರುವ ಹಾಡನ್ನು ತುಂಬಾ ಗಮನವಿಟ್ಟು ಕೇಳುತ್ತಿದ್ದಾನೆ ಮತ್ತು ಆ ಹಾಡಿನ ಜೊತೆಗೆ ತಾನು ಸಹ ತುಂಬಾ ಮಗ್ನನಾಗಿ ಕುಳಿತಲ್ಲಿಯೇ ಕುಣಿಯುತ್ತಿದ್ದಾನೆ. ಮ್ಯೂಸಿಕ್ ಗೆ ತಕ್ಕಂತೆ ಮೂವ್ ಮೆಂಟ್ ಮಾಡುತ್ತಿದ್ದಾನೆ.
ಮೊದಮೊದಲು ಎರಡು ಕೈಗಳನ್ನು ಅಲ್ಲಾಡಿಸುತ್ತಾ ನಂತರ ಕಾಲುಗಳಿಂದಲೂ ಮೂವ್ ಮೆಂಟ್ ಮಾಡುತ್ತಾನೆ. ಇಷ್ಟಾದಮೇಲೆ ಆತನ ಡ್ಯಾನ್ಸ್ ವೇಗ ತೆಗೆದುಕೊಳ್ಳುತ್ತದೆ. ಎರಡು ಕೈಗಳನ್ನು ಮೇಲೆ ಮಾಡಿ ತಿರುಗಿಸುತ್ತಾ ಕುತ್ತಿಗೆಯನ್ನು ಅಲ್ಲಾಡಿಸುತ್ತಾ ಕುಣಿಯಲು ಶುರುಮಾಡುತ್ತಾನೆ. ಆತನ ಸುತ್ತಮುತ್ತ ಕುಳಿತಿರುವ ಮಕ್ಕಳು ಸಹ ಆತನಿಗೆ ನೋಡಿ ನಗುತ್ತಾರೆ. ಆದರೆ ಈ ಬಾಲಕ ಮಾತ್ರ ಯಾವುದರ ಕಡೆಯು ಗಮನ ನೀಡದೆ ತನ್ನದೇ ಜಗತ್ತಿನಲ್ಲಿ ಸಂಚರಿಸುತ್ತಿರುತ್ತಾನೆ. ತಾನು ಎಲ್ಲಿದ್ದೇನೆ, ತನ್ನ ಕಡೆಗೆ ಯಾರು ನೋಡುತ್ತಿದ್ದಾರೆ, ಹಾಗೂ ತನ್ನ ಬಗ್ಗೆ ಯಾರು ಏನಾದರೂ ಮಾತನಾಡುತ್ತಿದ್ದಾರೆಯೇ, ಎಂಬುದರ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಆತ ಬರೀ ತನ್ನ ಲೋಕದಲ್ಲಿಯೇ ಮಗ್ನನಾಗಿದ್ದಾನೆ.
ವಿಡಿಯೋ ನೋಡಿ