ಆನಂದ ಮಹೀಂದ್ರ ಶೇರ್ ಮಾಡಿದರು ಮಕ್ಕಳ ವಿನೂತನ ಕಲ್ಪಕತೆಯ ಸುಂದರ ವಿಡಿಯೋ… ನೆಟ್ಟಿಗರು ಉಸುರಿದರು ಚಡ್ಡಿ ದೋಸ್ತಿ ಅಂದ್ರೆ ಇದು…
ಸೋಶಿಯಲ್ ಮೀಡಿಯಾವು ವೈರಲ್ ವಿಡಿಯೋ ಮತ್ತು ಫೋಟೋಗಳ ಆಗರ, ಮಹಾಸಾಗರ. ಇಲ್ಲಿ ಬಿತ್ತರವಾಗುವ ಅನೇಕ ಕಂಟೆಂಟ್ ಗಳು ನಿಜಕ್ಕೂ ಅದ್ಭುತ, ಅವರ್ಣನೀಯ, ವಿಸ್ಮಯ. ಅನೇಕ ವಿಡಿಯೋಗಳು ನೋಡುಗರಿಗೆ ಜೀವನದ ಪಾಠ ಮತ್ತು ಸತ್ಯವನ್ನು ಕಲಿಸುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಉದ್ಯಮಿ ಆನಂದ ಮಹೀಂದ್ರಾ ಅವರು ಟ್ವಿಟರ್ ಮುಖಾಂತರ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ವೈರಲ್ ಆದ ಈ ವಿಡಿಯೋದಲ್ಲಿ ಇಬ್ಬರು ಗೆಳೆಯರು ಕೂಡಿ ಅಪರೂಪದ ಸ್ಟೈಲ್ ನಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಇದು ನೋಡಲು ನಿಜಕ್ಕೂ ತುಂಬಾ ಸೊಗಸಾಗಿದೆ.
ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ ಸಮವಯಸ್ಕರಾದ ಇಬ್ಬರು ಮಿತ್ರರು ಒಂದೇ ಸೈಕಲ್ ನ್ನು ಚಲಾಯಿಸುತ್ತಿದ್ದಾರೆ. ಈಗ ನೀವು ಇದರಲ್ಲೇನು ವಿಶೇಷ ಎನ್ನಬಹುದು. ಏಕೆಂದರೆ ನಾವು ಸಹ ನಮ್ಮ ಗೆಳೆಯರೊಂದಿಗೆ ಚಿಕ್ಕವರಿದ್ದಾಗ ಈ ರೀತಿಯಾಗಿ ಸೈಕಲ್ ನಡೆಸಿದ್ದೇವೆ. ಅಂದರೆ ಸೈಕಲ್ ನ ಮುಂದಿನ ಬಾರ್ ಮೇಲೆ ಕುಳಿತು ಅಥವಾ ಹಿಂದೆ ಇರುವ ಕ್ಯಾರಿಯರ್ ಮೇಲೆ ಕುಳಿತು ಇಬ್ಬರು ಕೂಡಿ ಒಂದೇ ಸೈಕಲ್ ತುಳಿದಿದ್ದೇವೆ ಎನ್ನುತ್ತೀರಿ ಅಲ್ವಾ?
ಆದರೆ ಈ ಗೆಳೆಯರ ಸೈಕಲ್ ತುಳಿಯುವ ಸ್ಟೈಲ್ ತುಂಬಾ ಯುನೀಕ್ ಆಗಿದೆ. ಮಳೆ ಬಂದಿರುವ ಒಂದು ರಸ್ತೆಯ ಮೇಲೆ ಇಬ್ಬರು ಗೆಳೆಯರು ಒಂದೇ ಸೈಕಲ್ ತುಳಿಯುತ್ತಿದ್ದಾರೆ. ಹೇಗೆಂದರೆ ಇಬ್ಬರು ಒಂದೊಂದು ಪ್ಯಾಡಲ್ ಮೇಲೆ ಸೇಪ್ರೆಟ್ ಆಗಿ ಅತ್ತಿತ್ತ ನಿಂತಿದ್ದಾರೆ. ಮತ್ತು ಹಾಗೆಯೇ ಇಬ್ಬರು ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಂಡು ಒಬ್ಬರು ಒಂದೇ ಪ್ಯಾಡಲ್ ತುಳಿಯುತ್ತಾ ಸೈಕಲ್ ಚಲಾಯಿಸುತ್ತಿದ್ದಾರೆ. ಈ ದೃಶ್ಯ ನೋಡಲು ತುಂಬಾ ಸುಂದರವಾಗಿದೆ.
ನೋಡಿ ನೀವು ಈ ವಿಡಿಯೋ…
Even Harvard Business School would not have a better video to communicate the virtues of collaboration & teamwork! pic.twitter.com/ALBRYRCFN0
— anand mahindra (@anandmahindra) April 23, 2022
ಈ ವಿಡಿಯೋವನ್ನು ಭಾರತದ ಖ್ಯಾತ ಉದ್ಯಮಿ ಆನಂದ ಮಹಿಂದ್ರಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ ಮತ್ತು ರೀಟ್ವೀಟ್ ಸಹ ಮಾಡಿದ್ದಾರೆ.