Hornbill (ಮಂಗಟ್ಟೆ) ಹಕ್ಕಿಯ ಮುಂದೆ ಮುಂಗುಸಿ ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಮಾಡಿತು ಸತ್ತಂತೆ ನಟನೆ! ವೈರಲ್ ಆಯಿತು ವಿಡಿಯೋ…

ಭೂಮಿಯ ಮೇಲೆ ಬರಿ ಮನುಷ್ಯನಷ್ಟೇ ನಟಿಸುವದರಲ್ಲಿ ಪರಿಣಿತನಾಗಿದ್ದಾನೆಂದು ತಿಳಿದಿದ್ದರೆ ಅದು ಸಂಪೂರ್ಣವಾಗಿ ತಪ್ಪು. ಯಾಕೆಂದರೆ ಈ ಮುಂಗುಸಿಯ ಆಕ್ಟಿಂಗ್ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತದೆ, ಮನುಷ್ಯನ ಹೊರತಾಗಿ ಇನ್ನಿತರ ಪ್ರಾಣಿಗಳು ಸಹ ಆಕ್ಟಿಂಗ್ ಮಾಡುವುದರಲ್ಲಿ ಹೇಗೆ ಮುಂದಿವೆ ಎಂಬುದು.

ಪ್ರಸ್ತುತ ವಿಡಿಯೋ ಒಂದು ಕಾಡಿನಲ್ಲಿ ಶೂಟ್ ಮಾಡಲಾಗಿದ್ದು ಇಲ್ಲಿ ಎರಡು ಮುಂಗುಸಿಗಳು ಮತ್ತು ಒಂದು ಹಾರ್ನ್ ಬಿಲ್ ಹಕ್ಕಿ ಕಂಡುಬರುತ್ತದೆ. ಎರಡು ಮುಂಗುಸಿಗಳಲ್ಲಿ ಒಂದು ಮುಂಗುಸಿ ಎದುರಿಗಿದ್ದ ಹಾರ್ನಬಿಲ್ ಹಕ್ಕಿಯ ಕಡೆಗೆ ಓಡಿ ಹೋಗುತ್ತದೆ. ಹಾರ್ನಬಿಲ್ ಹಕ್ಕಿ ಮುಂಗುಸಿಗೆ ನೋಡುತ್ತಲೇ ಮುಂಗುಸಿ ಒಮ್ಮೆಲೆ ಮುಖ ಮೇಲೆ ಮಾಡಿ ಅಲ್ಲಿಯೇ ಸತ್ತಂತೆ ಬೀಳುತ್ತದೆ. ಹಾರ್ನಬಿಲ್ ಹಕ್ಕಿ ದೃಷ್ಟಿ ತೆಗೆದಾಗ ಮತ್ತೆ ಈ ಮುಂಗುಸಿ ಏಳುತ್ತದೆ. ಹೀಗೆ ಹಕ್ಕಿಯು ತನ್ನ ಕಡೆ ನೋಡಲು ಮೂರು ನಾಲ್ಕು ಬಾರಿ ಮುಂಗುಸಿ ಮೇಲಿಂದ ಮೇಲೆ ಅದರ ಎದುರಿಗೆ ಸತ್ತಂತೆ ನಟಿಸುತ್ತದೆ. ಈ ದೃಶ್ಯವು ನೋಡಲು ತುಂಬಾ ತಮಾಷೆಯಾಗಿದ್ದು ನೇಟಿಜನ್ಸ್ ಗಳ ಗಮನ ತನ್ನ ಕಡೆಗೆ ಸೆಳೆಯಲು ಯಶಸ್ವಿಯಾಗಿದೆ.

ವೀಡಿಯೋ ನೋಡಿ

 

View this post on Instagram

 

A post shared by WILD (@wildchanell)

ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ‘ವೈಲ್ಡ್ ಚಾನೆಲ್’ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಒಂದು ಮಿಲಿಯನ್ ಗಿಂತಲೂ ಮೇಲ್ಪಟ್ಟು ಜನರು ವೀಕ್ಷಿಸಿದ್ದಾರೆ ಹಾಗೂ ಲಕ್ಷಾವಧಿ ಜನರು ಲೈಕ್ ಮಾಡಿದ್ದಾರೆ.