ರಭಸದಿಂದ ಹರಿಯುತ್ತಿದ್ದ ಕೊಳಚೆ ನಾಲೆಯ ನೀರಿನ ಪ್ರವಾಹದಲ್ಲಿ ಸಿಲುಕಿ ಕಕ್ಕಾಬಿಕ್ಕಿಯಾದ ನಾಯಿಯನ್ನು ಉಳಿಸಿದ ವಿಡಿಯೋ ವೈರಲ್!

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ದಿನನಿತ್ಯ ನಮ್ಮ ಕಣ್ಣೆದುರಿಗೆ ಬರುತ್ತದೆ. ಅವುಗಳಲ್ಲಿ ಕೆಲವು ವಿಡಿಯೋಗಳು ಕಾಡಿನಿಂದ ಶೂಟ್ ಆಗಿದ್ದರೆ ಇನ್ನು ಕೆಲವು ವಿಡಿಯೋಗಳು ಸಾಕುಪ್ರಾಣಿಗಳಿಗೆ ಸಂಬಂಧಿತವಾಗಿರುತ್ತವೆ. ಒಟ್ಟಾರೆಯಾಗಿ ನೇಟಿಜನ್ಸ್ ಗಳು ಪ್ರಾಣಿಗಳ ವಿಡಿಯೋಗಳನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ಅವುಗಳ ಜೀವಕ್ಕೆ ಸಂಬಂಧಿಸಿರುವ ಮನಕಲಕುವ ವಿಡಿಯೋಗಳನ್ನು ನೋಡಲು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಸದ್ಯ ಇದೇ ರೀತಿಯ ಒಂದು ಪ್ರಾಣಿಯ ಜೀವಕ್ಕೆ ಆಪತ್ತು ಬಂದಾಗ ಅದನ್ನು ಉಳಿಸಿದ ರೆಸ್ಕ್ಯೂ ಆಪರೇಶನ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸುಂದರವಾದ ವಿಡಿಯೋವನ್ನು ನೀವಿಲ್ಲಿ ನೋಡಲಿದ್ದೀರಿ.

ವಿಡಿಯೋದ ಪ್ರಾರಂಭಕ್ಕೆ ಒಬ್ಬ ವ್ಯಕ್ತಿಯು ಜೆಸಿಬಿ ಯ ಬಕೆಟ್ ನಲ್ಲಿ ಹರಿಯುವ ಕೊಳಚೆ ನೀರಿನ ನಾಲೆಯ ಮೇಲೆ ನೀರಿನಿಂದ ಸ್ವಲ್ಪ ಅಂತರದಲ್ಲಿ ಸನ್ನದ್ದನಾಗಿ ಕುಳಿತುಕೊಳ್ಳುತ್ತಾನೆ. ಅಲ್ಲಿಯವರೆಗೆ ಆತ ಯಾಕೆ ಹಾಗೆ ಕುಳಿತುಕೊಳ್ಳುತ್ತಾನೆ ಎಂಬುದರ ಬಗ್ಗೆ ಗೊತ್ತೇ ಆಗುವುದಿಲ್ಲ. ಸ್ವಲ್ಪ ಕ್ಷಣಗಳ ನಂತರ ಗೊತ್ತಾಗುತ್ತದೆ ಯಾವ ಉದ್ದೇಶದಿಂದ ಕುಳಿತಿದ್ದಾನೆ ಎಂದು. ಕೆಲವೇ ಕ್ಷಣಗಳಲ್ಲಿ ದೂರದಿಂದ ಒಂದು ಪ್ರಾಣಿ ನೀರಿನಲ್ಲಿ ತೇಲುತ್ತ ಬರುತ್ತಿರುತ್ತದೆ. ಮೊದಮೊದಲು ಅದೇನು ಎಂಬುದು ಗೊತ್ತಾಗುವುದಿಲ್ಲ. ಪ್ರಾಣಿ ಹತ್ತಿರ ಬರುತ್ತಲೇ ಜೆಸಿಬಿಯಲ್ಲಿ ಕುಳಿತ ವ್ಯಕ್ತಿ ತುಂಬ ಜಾಣತನದಿಂದ ಅದನ್ನು ತನ್ನ ಕೈಗಳಿಂದ ಹಿಡಿಯಲು ಯತ್ನಿಸಿ ಸಫಲನಾಗುತ್ತಾನೆ. ಅದು ವೇಗದ ನಾಲೆಯ ಕೊಳಚೆ ನೀರಿನಲ್ಲಿ ತುಂಬಾ ರಭಸವಾಗಿ ಬರುತ್ತಿರುತ್ತದೆ. ವ್ಯಕ್ತಿಯು ತುಂಬಾ ಜಾಣತನದಿಂದ ಸರಿಯಾಗಿ ಆ ಪ್ರಾಣಿಯನ್ನು ಹಿಡಿದಾಗ ಗೊತ್ತಾಗುತ್ತದೆ ಅದು ನಾಯಿ ಎಂದು.

ಏತನ್ಮಧ್ಯೆ ನಾಯಿಯು ತನ್ನ ಕಥೆ ಮುಗಿದೇ ಹೋಯಿತು ಎಂಬಂತೆ ತುಂಬಾ ಗಾಬರಿಯಾಗಿ ಆತನ (ಉಳಿಸಿದವನ) ಮಡಿಲಲ್ಲಿ ಕುಳಿತಿರುವುದನ್ನು ನೀವು ಗಮನಿಸಬಹುದು. ನಾಲೆಯಲ್ಲಿ ನೀರು ತುಂಬಾ ವೇಗವಾಗಿ ಹರಿಯುತ್ತಿರುವುದರಿಂದ ನಾಯಿಯನ್ನು ಉಳಿಸಿಕೊಳ್ಳುವುದು ರೆಸ್ಕ್ಯೂ ಆಪರೇಷನ್ ದವರಿಗೆ ಒಂದು ಚಾಲೆಂಜ್ ಆಗಿತ್ತು. ಕಾರಣ ನೀರು ತುಂಬಾ ವೇಗವಾಗಿ ಹರಿಯುತ್ತಿರುವುದರಿಂದ ನಾಯಿಯನ್ನು ಹಿಡಿಯುವಾಗ ವ್ಯಕ್ತಿಯು ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಂಡು ಹಿಡಿಯಬೇಕಾಗಿತ್ತು. ಕೊನೆಗೆ ಈ ಕೆಲಸದಲ್ಲಿ ಜಯ ಸಾಧಿಸಿ ಹರಿದುಹೋಗುವ ನಾಯಿಯ ಜೀವವನ್ನು ಉಳಿಸುವಲ್ಲಿ ಈ ಟೀಮ್ ಯಶಸ್ಸು ಕಂಡಿದೆ.

ನೋಡಿ ಈ ವಿಡಿಯೋ..

ಪ್ರಸ್ತುತ ವಿಡಿಯೋವನ್ನು ಶಿವ ಅರೂರ್ ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 9.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ.