ಬೀಚ್ ನಲ್ಲಿ ಬಿಂದಾಸ್ ಆಗಿ ಮಸ್ತಿ ಮಾಡುತ್ತಿರುವಾಗ, ಹಠಾತ್ತನೆ ಬಂದು ಬಿತ್ತು ನೀರಿನಲ್ಲಿ ವಿಮಾನ… ನೋಡಿ ಈ ವೈರಲ್ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮೈನವಿರೇಳಿಸುವ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರವಾಸಿಗರು ಸಮುದ್ರದ ದಂಡೆಯಲ್ಲಿ ಬಿಂದಾಸ್ ಆಗಿ ಮಜಾ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೈನವಿರೇಳಿಸುವ ಘಟನೆಯೊಂದು ಎಲ್ಲರ ಮುಂದೆ ನಡೆದುಹೋಗುತ್ತದೆ.
ಯಾವುದೇ ನದಿ ಅಥವಾ ಸಮುದ್ರದ ನೀರಿನಲ್ಲಿ ನೀವು ನಿಮ್ಮ ಫ್ಯಾಮಿಲಿ ಅಥವಾ ಮಿತ್ರರ ಜೊತೆಗೆ ಮಜಾ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಕಾಶದಿಂದ ವಿಮಾನ ಒಂದು ಹಾರಾಡುತ್ತ ಬಂದು ನಿಮ್ಮ ಹತ್ತಿರವೇ ಬಿದ್ದರೆ ಹೇಗಾಗುತ್ತದೆ ಎಂದು ವಿಚಾರ ಮಾಡಿ. ನಿಜವಾಗಿಯೂ ಮನುಷ್ಯ ದಿಕ್ಕೆಟ್ಟು ಹೋಗುತ್ತಾನೆ. ನಿಮ್ಮ ಬ್ರೇನ್ ಕೆಲವು ಕ್ಷಣಗಳವರೆಗೆ ಯಾವುದೇ ಕೆಲಸ ಮಾಡದೆ ಪಾಜ್ ಆಗಿಬಿಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಘಟನೆಯ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಂಡು ಬರುವ ಹಾಗೆ ಜನರು ಸಮುದ್ರದ ದಂಡೆಯಲ್ಲಿ ನೀರಿನ ಅಲೆಗಳ ಜೊತೆಗೆ ಆಟವಾಡುತ್ತಿರುವಾಗ ಆಕಾಶದಿಂದ ವಿಮಾನವೊಂದು ಇವರ ಹತ್ತಿರ ನೀರಿನಲ್ಲಿಯೇ ಬಂದು ಬಿದ್ದಿದೆ. ಸಮುದ್ರ ದಂಡೆಯಲ್ಲಿ ಸುತ್ತಮುತ್ತ ಅನೇಕ ಜನರು ಮಜಾ ಮಸ್ತಿ ಮಾಡುವುದರಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋ ನೋಡಿದ ನಂತರ ನೋಡುಗರ ದೇಹ ಭಯದಿಂದ ಕಂಪಿಸುವುದು. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ oceanholic_life ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಈ ವಿಡಿಯೋಗೆ 1 ಲಕ್ಷ ಮೇಲ್ಪಟ್ಟು ಲೈಕ್ ಆಗಿವೆ. ಮತ್ತು ಸಾವಿರಾರು ಕಾಮೆಂಟ್ಗಳು ಬಂದಿವೆ.