ಲಾಕ್ ಡೌನ್ ದಲ್ಲಿ ಸೈಕಲ್ ನಿಂದ ತಯಾರಿಸಿದ ಹಿಟ್ಟಿನ ಗಿರಣಿ, ವ್ಯಾಯಾಮದ ಜೊತೆಗೆ ಹೀಟ್ಟೂ ಸಹ ರುಬ್ಬುವರು.

ಝಾರಖಂಡನ ಜಮಶೆದಪುರ್ ನಲ್ಲಿಯ ಒಂದು ಕುಟುಂಬದಲ್ಲಿಯ ಸಹೋದರ ಮತ್ತು ಸಹೋದರಿ ಕೂಡಿಕೊಂಡು ಲಾಕ್ಡೌನ್ ಸಮಯದಲ್ಲಿ ವ್ಯಾಯಾಮ ಮಾಡುವ ಸೈಕಲ್ಲಿನಿಂದ ಹಿಟ್ಟಿನ ಗಿರಣಿಯ ಆವಿಷ್ಕಾರ ಮಾಡಿದ್ದಾರೆ. ಇದರಿಂದ ಅವರ ಕುಟುಂಬ ವ್ಯಾಯಾಮ ಮಾಡುವದರ ಜೊತೆಗೆ ಹಿಟ್ಟು ಸಹ ತಯಾರಾಗುವದು. ಲಾಕ್ಡೌನ್ ಕಾರಣದಿಂದ ಜನರು ಮನೆಯಲ್ಲಿಯೇ ಕುಳಿತುಕೊಂಡು ಊಟ ಮಾಡುವದರಿಂದ ಹಾಗೂ ಜೀಮ್ ಗೆ ಹೋಗದ ಕಾರಣ ಶರೀರದ ತೂಕದಲ್ಲಿ ಹೆಚ್ಚಳವಾಗುತ್ತಿತ್ತು ಅದನ್ನು ನೋಡಿದ ಸಹೋದರಿ ಮತ್ತು ಆಕೆಯ ಎಂಜಿನಿಯರ್ ಅಣ್ಣ ಇಬ್ಬರು ಕೂಡಿಕೊಂಡು ಸೈಕಲ್ ದ ಹೊಸ ಆವಿಷ್ಕಾರದ ಪ್ರಯೋಗ ಮಾಡಿದ್ದಾರೆ.

ಲಾಕ್ಡೌನ್ ದಿಂದಾಗಿ ಬಜಾರ್ ಬಂದ್ ಇದ್ದುದರಿಂದ ಅವರಿಬ್ಬರು ತಮ್ಮ ಮನೆಯಲ್ಲಿ ಬಿದ್ದಿದ್ದ ಹಳೆಯ ವಸ್ತುಗಳನ್ನು ಉಪಯೋಗಿಸಿ ಹಿಟ್ಟು ಬೀಸುವ ಸೈಕಲ್ ತಯಾರು ಮಾಡಿದ್ದಾರೆ. ಅದರ ಸಲುವಾಗಿ ಬೀಸುವ ಮಷಿನ್ ಸೈಕಲ್ ಗೆ ಜೋಡಿಸಿದ್ದಾರೆ. ಇದರಿಂದ ಸೈಕಲ್ನಡೆಸುವದರ ಜೊತೆಗೆ ಹಿಟ್ಟು ಸಹ ಬೀಸುವದು. ಈ ಯಂತ್ರದಿಂದ ಎಲ್ಲ ಪ್ರಕಾರದ ಮಸಾಲೆ ಹಾಗೂ ಧಾನ್ಯಗಳು ಸಲೀಸಾಗಿ ರುಬ್ಬಬಹುದು.

ಈ ಯಂತ್ರದಲ್ಲಿ ಗೋಲಾಕಾರದ ಒಂದು ದೊಡ್ಡ ಪಾತ್ರೆಯನ್ನು ಜೋಡಿಸಲಾಗಿದೆ. ಅದರಲ್ಲಿ ರುಬ್ಬುವ ಧಾನ್ಯ ಹಾಕಿ ಸೈಕಲ್ ನಡೆಸಲಾಗುತ್ತದೆ ಮತ್ತು ಸೈಕ್ಲಿಂಗ್ ಮಾಡುತ್ತಲೇ ಅದರಲ್ಲಿಯ ಧಾನ್ಯದ ಹಿಟ್ಟು ತಯಾರಾಗಿ ಕೆಳಗೆ ಬರುವದು. ಇದರಿಂದ ಕುಟುಂಬದ ಸದಸ್ಯರು ಜೀಮ್ ಗೆ ಹೋಗುವ ಬದಲು ಇಲ್ಲೇ ತಮ್ಮ ಕಸರತ್ತು ಮಾಡಬಹುದು. ಈ ಯಂತ್ರ ಆವಿಷ್ಕಾರ ಮಾಡಿದ ನಂತರ ಬದಿಯಲ್ಲಿದ್ದ ಜನರು ಸಹ ತಮ್ಮ ಧಾನ್ಯಗಳನ್ನು ರುಬ್ಬಲು ಇವರ ಮನೆಗೆ ಬರುತ್ತಿದ್ದಾರೆ.

ಎಂಜಿನಿಯರ್ ಮನದೀಪ್ ತಿವಾರಿಯವರು ಹೇಳುವದೇನೆಂದರೆ, ‘ ನಾವು ಮನೆಯಲ್ಲಿಯೇ ಒಂದು ರುಬ್ಬುವ ಮಷಿನ್ ತಯಾರಿಸಿದ್ದೇವೆ. ಲಾಕ್ಡೌನ್ ಕಾರಣದಿಂದ ಮನೆಯಲ್ಲಿ ಕುಳಿತು ತುಂಬಾ ಬೋರ್ ಆಗುತ್ತಿತ್ತು ಅಲ್ಲದೆ ವ್ಯಾಯಾಮ ಸಹ ಆಗುತ್ತಿರಲಿಲ್ಲ ಆಗ ನಮ್ಮ ಮನೆಯಲ್ಲಿದ್ದ ಸೈಕಲ್ ತಗೆದುಕೊಂಡು ಅದಕ್ಕೆ ರುಬ್ಬುವ ಯಂತ್ರ ಜೋಡಿಸಿದೆ. ಈಗ್ ಈ ಸೈಕಲ್ ನಿಂದ ನಮ್ಮ ದೈನಂದಿನ ಎಕ್ಸರಸೈಜ್ ಜೊತೆಗೆ ಊಟ ಮಾಡುವ ಸಲುವಾಗಿ ಹಿಟ್ಟು ಸಹ ತಯಾರಾಗುವದು. ಅವರ ತಂಗಿ ಸೀಮಾ ಪಾಂಡೆ ಯವರ ಪ್ರಕಾರ ‘ ಲಾಕ್ಡೌನ್ ದಿಂದ ಎಲ್ಲ ಸದಸ್ಯರು ಮನೆಯಲ್ಲಿಯೇ ಉಳಿದುಕೊಳ್ಳುವ ಪರಸ್ಥಿತಿ ಬಂದಿತು ಅಲ್ಲದೆ ನನ್ನ ಸಹೋದರನ ತೂಕದಲ್ಲಿ ಸಹ ಹೆಚ್ಚಳವಾಗುತ್ತಿತ್ತು ಜೀಮ್ ಗೆ ಹೋಗಲು ಸಹ ಸಾಧ್ಯವಾಗದೇ ಇದ್ದಾಗ ನಾವಿಬ್ಬರೂ ಕೂಡಿ ಈ ಹೊಸ ಪ್ರಕಾರದ ಯಂತ್ರವನ್ನು ತಯಾರಿಸಿದ್ದೇವೆ. ಈ ಹೊಸ ಯಂತ್ರದಿಂದ ಅಲ್ಲಿದ್ದ ಜನರು ಸಹ ಮುಂಜಾನೆಯ ಸಮಯದಲ್ಲಿ ಅವರ ಮನೆಗೆ ಬಂದು ಕಸರತ್ತು ಮಾಡುತ್ತ ತಮ್ಮ ಧಾನ್ಯಗಳನ್ನು ರುಬ್ಬಿಕೊಂಡು ಹೋಗುತ್ತಿದ್ದಾರೆ.