ರಸ್ತೆಯ ಬದಿಯಿಂದ ಹೊರಟಾಗ ಕೆಂಪು ಮುಖದ ವ್ಯಕ್ತಿಯನ್ನು ಕಂಡು ತನ್ನ ಬಾಲದಿಂದ ಮುಖಕ್ಕೆ ಜೋರಾಗಿ ಬಾರಿಸಿದ ಆನೆ, ವೆಲ್ ಡನ್ ಎಂದ ಐಎಫ್ಎಸ್ ಅಧಿಕಾರಿ!!!!

ಅರಣ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದಷ್ಟಪುಷ್ಟವಾದ ಪ್ರಾಣಿ ಎಂದರೆ ಅದು ಆನೆ. ಆನೆಯನ್ನು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಪಲಾಯನ ಮಾಡುತ್ತೇವೆ. ಏಕೆಂದರೆ ಆನೆಯ ಭಾರವೇ ಅಷ್ಟೊಂದು ಇರುತ್ತದೆ ಅದು ಒಂದು ಹೆಜ್ಜೆ ಮನುಷ್ಯನ ಮೇಲೆ ಇಟ್ಟರೆ ಕೆಳಗಿದ್ದ ಮನುಷ್ಯ ಚೂರು ಚೂರಾಗುತ್ತಾನೆ. ಆದ್ದರಿಂದಲೇ ಈ ಪ್ರಾಣಿಯನ್ನು ಕಂಡಾಗ ಅಲ್ಲಿಂದ ದೂರ ಹೋಗುವದೇ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಆನೆಯನ್ನು ಸಹ ಮನೆಯಲ್ಲಿ ಸಾಕುತ್ತಾರೆ. ಆನೆಯನ್ನು ಸಾಕಿ ಅವುಗಳಿಂದ ತಮಗೆ ಬೇಕಾದ ಭಾರವಾದ ಕೆಲಸ ಸಹ ಮಾಡಿಸಿಕೊಳ್ಳುತ್ತಾರೆ ಹೀಗಾಗಿ ಆನೆ ಇದೊಂದು ಸಹಾಯ ಮಾಡುವ ಪ್ರಾಣಿ ಸಹ ಎಂದು ತಿಳಿಯಲಾಗುತ್ತದೆ.

ಪ್ರಸ್ತುತವಾಗಿ ಆನೆಯ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಆನೆ ತನ್ನಷ್ಟಕ್ಕೆ ತಾನು ರಸ್ತೆಯ ಬದಿಯಿಂದ ಹೊರಟಿರುತ್ತದೆ. ದೂರದಿಂದ ಇಬ್ಬರು ಪರದೇಶದ ವ್ಯಕ್ತಿಗಳು ಆನೆಯನ್ನು ಕಂಡು ಖುಷಿ ಪಡುತ್ತಿರುತ್ತಾರೆ. ಅದನ್ನು ಆನೆ ಸಹ ಗಮನಿಸುತ್ತದೆ. ಹಾಗೆ ಸಮೀಪ ಬರುತ್ತಿದ್ದ ಹಾಗೆ ಆನೆಯ ಮನದಲ್ಲಿ ಯಾವ ವಿಚಾರ ಬಂತೋ ಗೊತ್ತಿಲ್ಲ ಆ ಪರದೇಶದ ವ್ಯಕ್ತಿಯ ಹತ್ತಿರ ಬರುತ್ತಿದ್ದ ಹಾಗೆ ತನ್ನ ಬಾಲದಿಂದ ಜೋರಾಗಿ ಆತನ ಮುಖಕ್ಕೆ ಬಾರಿಸುತ್ತದೆ. ಆಗ ಖುಷಿ ಪಡುತ್ತಿದ್ದ ವ್ಯಕ್ತಿ ಆನೆಯ ಬಾಲಿನ ಲತ್ತೆ ತಿಂದಾಗ ಆತನ ಮುಖ ಇನ್ನಷ್ಟು ಕೆಂಪಾಗುತ್ತದೆ. ಆನೆ ಯಾವ ಕಾರಣಕ್ಕೆ ಆತನ ಮುಖಕ್ಕೆ ಹೊಡೆಯಿತು ಎಂಬುದು ತಿಳಿಯದ ಸಂಗತಿ ಯಾಗಿದೆ. ಈ ವೀಡಿಯೋ ನೋಡಿದ ಮೇಲೆ ಆನೆಯನ್ನು ಸರಿಯಾಗಿ ಕೆಲಸ ಮಾಡಿದೆ ಎಂದು ನೀವು ಸಹ ಹೋಗಳುವಿರಿ.

ವೀಡಿಯೋ ನೋಡಿ

ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಡಾ ಸಾಮ್ರಾಟ್ ಗೌಡಾ ಇವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡುವಾಗ ವೆಲ್ ಡನ್ ಅಂತ ಕ್ಯಾಪ್ಶನ್ ಸಹ ನೀಡಿದ್ದಾರೆ. ಈ ವೀಡಿಯೋ ಇದುವರೆಗೂ ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಆನೆಯು ಆ ವ್ಯಕ್ತಿಗೆ ಜೋರಾಗಿ ಬಾರಿಸಲು ಕಾರಣ, ಆನೆಯ ಚೇಷ್ಟೆಯೋ ಅಥವಾ ಕೋಪವೋ ಎಂಬುದು ತಿಳಿದಿಲ್ಲ.