ವಿಡಿಯೋ; ಹದ್ದಿಗೆ ಹೆದರಿ ಓಡಿ ಹೋಗಿ ಸಾಯುವ ಬದಲು ಹೋರಾಟಕ್ಕಿಳಿದ ಮೊಲ! 20 ಸೆಕೆಂಡುಗಳ ಕದನದಲ್ಲಿ ಮೇಲುಗೈ ಸಾಧಿಸಿದ್ದು ಯಾರು?
ಕಾಡಿನಲ್ಲಿ ವಾಸಿಸುವ ಯಾವುದೇ ಪ್ರಾಣಿಗಳು ದಿನಬೆಳಗಾದರೆ ಬದುಕಲು ಹೋರಾಟ ಮಾಡಲೇಬೇಕಾಗುತ್ತದೆ. ಇಲ್ಲಿ ಒಂದು ಇನ್ನೊಂದನ್ನು ತಿನ್ನಲು ಹೊಂಚು ಹಾಕಿ ಕುಳಿತಿರುತ್ತದೆ. ಸ್ವಲ್ಪ ಮೈ ಮರೆತರೆ ಸಾಕು ಇನ್ನೊಂದು ಜೀವಿಗೆ ಆಹಾರವಾಗುವದರಲ್ಲಿ ಕೊಂಚವೂ ಡೌಟ್ ಇಲ್ಲ. ಅದರಲ್ಲೂ ಮೊಲಗಳಂಥ ಸಾಧು ಪ್ರಾಣಿಗಳ ಮೇಲೆ ಸಾವು ಸದಾ ಸುತ್ತು ಹಾಕುತ್ತಿರುತ್ತದೆ. ಈ ಪ್ರಾಣಿಗೆ ನೆಲದ ಮೇಲಿನ ಹೀಸ್ರ ಪ್ರಾಣಿಗಳಿಂದ ಹೇಗಾದರೂ ಬಚಾವ್ ಮಾಡಿಕೊಳ್ಳುವ ಭಯ ಒಂದೇ ಕಡೆ ಇದ್ದರೆ ಆಕಾಶದಿಂದ ಅಟ್ಯಾಕ್ ಮಾಡುವ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸಹ ಒಂದು ಕಷ್ಟಕರವಾದ ಚಾಲೆಂಜ್ ಇದೆ.
ಹೆಚ್ಚು ಕಡಿಮೆ ಹದ್ದಿನ ಬೇಟೆಯಿಂದ ಮೊಲ ಉಳಿದುಕೊಳ್ಳುವುದು ಕಷ್ಟಸಾಧ್ಯ. ಅದಕ್ಕೆ ಕಾರಣ ಮೊಲ ಹೆದರಿ ದಿಕ್ಕೆಟ್ಟು ಓಡಿ ಹೋಗಲು ಪ್ರಯತ್ನ ಮಾಡುತ್ತದೆ. ಈ ಪ್ರಯತ್ನದಲ್ಲಿ ಮೊಲ ಬೆದರಿರುವದರಿಂದ ದಾರಿ ನೋಡದೆ ಹೇಗೋ ಓಡಲು ಯತ್ನ ಮಾಡುತ್ತದೆ. ಹೀಗಾಗಿ ಮೊಲ ಇಲ್ಲಿ ಬೇಗ ದಣಿದು ಹೋಗುತ್ತದೆ. ತದನಂತರ ಹದ್ದಿಗೆ ಮುಂದಿನ ಕೆಲಸ ತುಂಬಾ ಸುಲಭವಾಗಿ ಬಿಡುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಮೊಲದ ಮೇಲೆ ಹದ್ದಿನ ಕಣ್ಣು ಬಿದ್ದು ಅದರ ಮೇಲೆ ಅಟ್ಯಾಕ್ ಮಾಡಲು ಬಂದಿದೆ. ನರಿ, ಮೇಕೆಗಳಂತಹ ಪ್ರಾಣಿಗಳನ್ನು ಸಹಜವಾಗಿ ಎತ್ತಿಕೊಂಡು ಹೋಗಿ ಬೇಟೆಯಾಡುವ ಹದ್ದಿಗೆ ಇನ್ನು ಮೊಲ ಯಾವ ಲೆಕ್ಕ? ನೀವೇ ಹೇಳಿ. ಆಕಸ್ಮಿಕವಾಗಿ ಕಂಡ ಮೊಲದ ಮೇಲೆ ಸಮಯ ಸಾಧಿಸಿ ಹದ್ದು ಅಟ್ಯಾಕ್ ಮಾಡಿದೆ. ಆದರೆ ಈ ಮೊಲ ಬೇರೆ ಮೊಲಗಳಂತಲ್ಲ ಎಂಬುದು ಇದರ ಹೋರಾಟ ನೋಡಿದ ಮೇಲೆ ಹದ್ದಿನ ಜೊತೆಗೆ ನಮಗೂ ತಿಳಿದು ಬರುತ್ತದೆ. ಏಕೆಂದರೆ ಇಲ್ಲಿ ಮೊಲ ಹೆದರಿ ಓಡಿ ಹೋಗದೆ ಹದ್ದಿನ ಜೊತೆಗೆ ಸ್ವರಕ್ಷಣೆಗಾಗಿ ಹೋರಾಟಕ್ಕೆ ಇಳಿದಿದೆ. ಮೊಲ ಓಡಿ ಹೋಗುವಾಗ ಹಿಂದಿನಿಂದ ಹೋಗಿ ಅದನ್ನು ಎತ್ತಿಕೊಂಡು ಹೋಗಲು ಹದ್ದಿಗೆ ತುಂಬಾ ಸುಲಭ. ಆದರೆ ಇಲ್ಲಿ ಮೊಲವು ಹದ್ದಿಗೆ ಆ ಅವಕಾಶವನ್ನೇ ನೀಡಿಲ್ಲ. 20 ಸೆಕೆಂಡುಗಳ ಈ ವಿಡಿಯೋದಲ್ಲಿ ಹದ್ದು, ಹದ್ದು ಮೀರಿ ಮೊಲದ ಬೇಟೆಯಾಡಲು ಪ್ರಯತ್ನಿಸಿದೆ. ಆದರೆ ಧೈರ್ಯವಂತ ಮೊಲದ ಪ್ರಶಂಸೆ ಇಲ್ಲಿ ಮಾಡಲೇಬೇಕು. ಕಾರಣ ಹದ್ದಿಗೆ ತನ್ನನ್ನು ಬೇಟೆಯಾಡುವ ಯಾವುದೇ ಚಾನ್ಸ್ ಮೊಲ ನೀಡಿಲ್ಲದಿರುವದು ಈ ವಿಡಿಯೋದಲ್ಲಿ ಕಂಡು ಬರುತ್ತಿದೆ. ಈ ಹೋರಾಟದಲ್ಲಿ ಹದ್ದು ಸಾಕಷ್ಟು ಬಾರಿ ಮೊಲದ ಮೇಲೆ ಅಟ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಮೊಲ ಅದಕ್ಕೆ ಸರಿಯಾಗಿ ಜಂಪ್ ಮಾಡಿ ಪಂಚ ನೀಡಲು ಪ್ರಯತ್ನಿಸಿದೆ. ಒಂದು ಅಂದಾಜಿನ ಪ್ರಕಾರ ಆ ಸ್ಥಳದಲ್ಲಿ ಬಹುಶಃ ಮೊಲದ ಮರಿಗಳು ಸಹ ಇದ್ದಿರಬೇಕೆಂದು ಅನಿಸುತ್ತಿದೆ. ತನ್ನ ಮರಿಗಳಿಗಾಗಿ ಮೊಲ ತನ್ನ ಜೀವವನ್ನೇ ಒತ್ತೆಯಿಟ್ಟು ಹೋರಾಟ ಮಾಡುತ್ತಿದೆ ಎನ್ನುವ ಹಾಗೆಯೂ ಕಂಡು ಬರುತ್ತಿದೆ. ಕೊನೆಗೆ ಈ ವಿಡಿಯೋದಲ್ಲಿ ಎಂಡ್ ಏನಾಗಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.
ವಿಡಿಯೋ ನೋಡಿ
It is better to stand & fight. If you run, you’ll only die tired…
This hare just did that. Threw counter punches even to make the predator look elsewhere.
(Via Ben Hooper) pic.twitter.com/fUF7Pi3Qpq— Susanta Nanda IFS (@susantananda3) April 25, 2022
ಈ ಸುಂದರವಾದ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಶಾಂತ ನಂದಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.