ಮುಂಬೈ ಲೋಕಲ್ ಟ್ರೈನ್ ನಿಂದ ಮೂವರು ಗೆಳತಿಯರು ಜಿಗಿದರು ಒಬ್ಬರ ಹಿಂದೆ ಒಬ್ಬರಂತೆ! ನೋಡಿ ಈ ವೈರಲ್ ವಿಡಿಯೋ…

ಮುಂಬೈಯಲ್ಲಿ ಕೆಲಸ ಅಥವಾ ಜಾಬ್ ಮಾಡಲು ಬಂದ ಎಷ್ಟೋ ಜನರು ಇಲ್ಲಿ ಓಡಾಡುವ ಲೋಕಲ್ ಟ್ರೈನ್ ಮತ್ತು ಅದರಲ್ಲಿಯ ಜನದಟ್ಟಣೆಯನ್ನು ನೋಡಿ ಇದರಲ್ಲಿ ಏರುವ ಮತ್ತು ಇಳಿಯುವ ಹರಸಾಹಸವನ್ನು ಮಾಡಿದ ನಂತರ ಇದರ ಸಹವಾಸವೇ ಬೇಡವೆಂದು ಮರಳಿ ಊರಿಗೆ ಅಥವಾ ಬೇರೆ ಪಟ್ಟಣಕ್ಕೆ ವಾಪಸಾಗಿದ್ದಾರೆ. ಲೋಕಲ್ ಟ್ರೈನ್ ಹಿಡಿಯಬೇಕಾದರೆ ತುಂಬಾ ಆಕ್ಟಿವ್ ಆಗಿರಬೇಕು. ಲೋಕಲ್ ಟ್ರೈನ್ ಪ್ರತಿಯೊಂದು ಸ್ಟೇಷನ್ನಲ್ಲಿ ಹೆಚ್ಚೆಂದರೆ 15 ರಿಂದ 20 ಸೆಕೆಂಡ್ ಗಳು ಮಾತ್ರ ನಿಲ್ಲುತ್ತವೆ. ಏನೂ ಅರಿಯದ ಮತ್ತು ಅನುಭವವಿಲ್ಲದ ಎಷ್ಟೋ ಜನರಿಗೆ ಲೋಕಲ್ ನಿಂದ ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ದಿನಂಪ್ರತಿ ಸ್ಟೇಷನ್ ಮೇಲೆ, ನೂರಾರು ಬಾರಿ ‘ಚಲಿಸುವ ಟ್ರೈನ್ನಲ್ಲಿ ಹತ್ತಬೇಡಿ ಮತ್ತು ಇಳಿಯಲು ಪ್ರಯತ್ನಿಸಬೇಡಿ’ ಎಂದು ಅನೌನ್ಸ್ ಮಾಡಿದರೂ ಸಹ ಚಲಿಸುವ ಟ್ರೈನ್ನಲ್ಲಿ ಏರುವ ಮತ್ತು ಇಳಿಯುವ ಘಟನೆಗಳು ಹಾಗೂ ಅಪಘಾತವಾಗುವ ಘಟನೆಗಳು ಹಾಗೆಯೇ ನಡೆಯುತ್ತಲೇ ಇವೆ.

ಸದ್ಯ ಚಲಿಸುವ ಲೋಕಲ್ ಟ್ರೈನ್ನಿಂದ ಮೂವರು ಗೆಳತಿಯರು ಜಿಗಿದಿದ್ದಾರೆ. ಹೀಗಾಗಿ ಒಬ್ಬರ ನಂತರ ಒಬ್ಬರು ಪ್ಲಾಟ್ ಫಾರ್ಮ್ ಮೇಲೆ ಬಿದ್ದ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಸ್ತುತ ಘಟನೆ ಮುಂಬೈಯ ಉಪನಗರವಾದ ಜೋಗೇಶ್ವರಿಯಲ್ಲಿ ಸಂಭವಿಸಿದೆ. ಈ ಸ್ಟೇಷನ್ ನಲ್ಲಿ ಮೂವರು ಗೆಳತಿಯರು ಲೋಕಲ್ ಟ್ರೈನಿನ ಒಂದು ಡಬ್ಬಿಯಲ್ಲಿ ಏರಿದ್ದಾರೆ. ಟ್ರೈನ್ ಚಲಿಸಲು ಶುರುಮಾಡುತ್ತಲೇ ಒಬ್ಬಳು ಗೆಳತಿ ಹಠಾತ್ತನೆ ಟ್ರೈನ್ನಿಂದ ಪ್ಲಾಟ್ ಫಾರ್ಮ್ ಮೇಲೆ ಜಂಪ್ ಮಾಡುತ್ತಾಳೆ. ಈ ಜಿಗಿತ ತರುಣಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ. ಕಾರಣ ವೇಗದ ವಿರುದ್ಧ ದಿಶೆಯಲ್ಲಿ ಜಂಪ್ ಮಾಡಿದ್ದಲ್ಲದೆ ಕೈಯಲ್ಲಿ ಹಿಡಿದ ಟ್ರೈನ್ನಲ್ಲಿಯ ಬಾರ್ ಸಹ ಬಿಟ್ಟಿಲ್ಲ. ಇದರಿಂದ ಟ್ರೈನ್ ಆಕೆಗೆ ತನ್ನ ಕಡೆಗೆ ಸೆಳೆದುಕೊಳ್ಳಲು ತಲೆಗೆ ಫುಟ್ಬೋರ್ಡ್ ಪಡೆದಿದೆ. ಇಷ್ಟು ನಡೆದಿರುವಾಗ ಈಕೆಯ ಹಿಂದೆ ಇನ್ನಿಬ್ಬರು ಗೆಳತಿಯರು ಒಬ್ಬರ ನಂತರ ಒಬ್ಬರು ಟ್ರೈನ್ ನಿಂದ ಜಿಗಿಯುತ್ತಾರೆ, ಹಾಗೂ ಅವರು ಸಹ ಬ್ಯಾಲೆನ್ಸ್ ತಪ್ಪಿ ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾರೆ. ಈ ಘಟನೆಯನ್ನು ನೋಡಿದ ಸ್ಟೇಷನ್ ಮೇಲಿನ ಜನರು ಬೆಚ್ಚಿಬಿದ್ದಿದ್ದಾರೆ. ಈ ಸಂಪೂರ್ಣ ದೃಶ್ಯವು ಸ್ಟೇಷನ್ ಮೇಲೆ ಅಳವಡಿಸಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲ ಹುಡುಗಿ ಟ್ರೈನ್ನಿಂದ ಬಿದ್ದ ನಂತರ ಫುಟ್ಬೋರ್ಡ್ ಹಾಗೂ ಪ್ಲಾಟ್ಫಾರ್ಮ್ ಮಧ್ಯದಲ್ಲಿರುವ ಗ್ಯಾಪ್ ನಲ್ಲಿಂದ ಪ್ಲಾಟ್ ಫಾರ್ಮ್ ಕೆಳಗೆ ಇರುವ ಟ್ರ್ಯಾಕ್ ಮೇಲೆ ಬೀಳುತ್ತಾಳೆನೋ ಎನ್ನುವಷ್ಟರಲ್ಲಿಯೇ ಬೋಗಿಯಲ್ಲಿದ್ದ ಹೋಂಗಾರ್ಡ್ ಅಲ್ತಾಫ್ ಶೇಕ್ ಅವರು ತಮ್ಮ ಜೀವದ ಹಂಗು ತೊರೆದು ಆಕೆಯನ್ನು ಉಳಿಸಲು ಪ್ರಯತ್ನಿಸಿ ಸಫಲರಾಗಿದ್ದಾರೆ. ಅಲ್ತಾಫ್ ಶೇಖ್ ಅವರು ಮಾಡಿದ ಕರ್ತವ್ಯ ಮತ್ತು ಧೈರ್ಯದ ಪ್ರಶಂಸೆಯನ್ನು ನೇಟಿಜನ್ಸ್ ಗಳು ಮಾಡುತ್ತಿದ್ದಾರೆ.

ಪ್ರಸ್ತುತ ಘಟನೆ ಎಪ್ರಿಲ್ 16 ರಂದು ಮುಂಬೈಯ ಉಪನಗರವಾದ ಜೋಗೇಶ್ವರಿ ಯಲ್ಲಿ ಘಟಿಸಿದೆ. ಈ ಸಿಸಿಟಿವಿಯ ದೃಶ್ಯವನ್ನು ಐಪಿಎಸ್ ಆಫೀಸರ್ ಆದ ಕೈಸರ್ ಖಾಲಿದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಕ್ಯಾಪ್ಷನ್ ನಲ್ಲಿ ಹೋಂಗಾರ್ಡ್ ಅಲ್ತಾಫ್ ಶೇಕ್ ಅವರ ಕರ್ತವ್ಯಕ್ಕೆ ಪ್ರಶಂಸೆಯನ್ನು ವ್ಯಕ್ತ ಮಾಡಿದ್ದಾರೆ.

ನೋಡಿ ಈ ವಿಡಿಯೋ…