ಲೈಫ್ ನಲ್ಲಿ ಘಟಿಸುವ ಕೆಲವು ನೋವುಗಳು ನಮ್ಮ ಕೈಯಲ್ಲಿಲ್ಲ; ಎದುರಾದ ವೈಫಲ್ಯಕ್ಕೆ ರಿಯಾಕ್ಟ್ ಹೇಗೆ ಮಾಡಬೇಕು? DK ಅವರಿಂದ ಕಲಿಯಬೇಕು…
ಒಂದು ಸಮಯದಲ್ಲಿ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರು ಧೋನಿ ನಂತರ ಎರಡನೆಯ ವಿಕೆಟ್ ಕೀಪರ್ ಎಂದು ಗುರುತಿಸಿಕೊಳ್ಳುತ್ತಿದ್ದರು. ಆ ರೀತಿ ಅವರ ಪರ್ಫಾರ್ಮನ್ಸ್ ಇತ್ತು. ಜೊತೆಗೆ ತಮಿಳುನಾಡಿನ ನಾಯಕ ಸಹ ಇವರೇ ಆಗಿದ್ದರು. ಇದೇ ಸಮಯದಲ್ಲಿ ದಿನೇಶ್ ಅವರ ಜೀವನದಲ್ಲಿ ಒಂದು ಸುಂಟರಗಾಳಿ ಎದ್ದಿತು.
ತಮಿಳುನಾಡು ತಂಡದಲ್ಲಿಯ ಮಿತ್ರ ಹಾಗೂ ಜೊತೆ ಆಟಗಾರ ಮುರಳಿ ವಿಜಯ್ ಅವರು ದಿನೇಶ್ ಕಾರ್ತಿಕ್ ರ ಪತ್ನಿಯ ಜೊತೆಗೆ ಪ್ರೇಮ ಸಂಬಂಧ ಬೆಳೆಸಿದ್ದರು. ಈ ಪ್ರಕರಣದ ಬಗ್ಗೆ ಸ್ವಲ್ಪವೂ ಸಹ ದಿನೇಶ್ ಕಾರ್ತಿಕ್ ಅವರಿಗೆ ಗೊತ್ತಿರಲಿಲ್ಲ. ಸಂಪೂರ್ಣ ತಂಡಕ್ಕೆ ಮಾತ್ರ ಈ ಪ್ರಕರಣವು ಗೊತ್ತಾಗಿತ್ತು. ಒಂದು ದಿನ ದಿನೇಶ್ ಕಾರ್ತಿಕ್ ಅವರ ಪತ್ನಿಯು ನೇರವಾಗಿಯೇ ದಿನೇಶ್ ಕಾರ್ತಿಕ್ ಅವರಿಗೆ, ‘ನನ್ನ ಉದರದಲ್ಲಿ ಮುರಳಿ ವಿಜಯ್ ಅವರ ಮಗು ಬೆಳೆಯುತ್ತಿದೆ ನನಗೆ ವಿಚ್ಛೇದನೆ ಬೇಕು’ ಎಂದು ಸ್ಪಷ್ಟವಾಗಿಯೇ ಹೇಳಿದರು. ಭೂಮಿಯು ಬಾಯ್ದೇರೆದು ನುಂಗುವ ಅನುಭವ ಹೇಗಿರುತ್ತದೆ ಎಂಬುದು ದಿನೇಶ್ ಕಾರ್ತಿಕ್ ಅವರಿಗೆ ಆಗ ಅರಿವಾಯಿತು.
ದಿನೇಶ್ ಅವರ ಪತ್ನಿ ವಿಚ್ಛೇದನ ಪಡೆದು ಮುರಳಿ ವಿಜಯ್ ಜೊತೆಗೆ ಸಂಸಾರ ನಡೆಸತೊಡಗಿದಳು. ಮುರಳಿ ವಿಜಯ್ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಳ್ಳೆಯ ಆಟ ಪ್ರದರ್ಶನ ಮಾಡುತ್ತಿದ್ದರು. ಇತ್ತ ದಿನೇಶ್ ಕಾರ್ತಿಕ್ ಮಾತ್ರ ಸಂಪೂರ್ಣವಾಗಿ ಡಿಪ್ರೆಶನ್ ನಲ್ಲಿ ಇಳಿದು ಬಿಟ್ಟಿದ್ದರು. ಇಂಥ ದೊಡ್ಡ ಹೊಡೆತವನ್ನು ಸಹಿಸಿಕೊಳ್ಳಬೇಕಾದರೆ ಯಾರಿಗೂ ಸಹ ತುಂಬಾ ಕಷ್ಟವಾಗುತ್ತದೆ. ಈ ಎಲ್ಲ ತಾಕಲಾಟದಲ್ಲಿ ದಿನೇಶ್ ಕಾರ್ತಿಕ್ ತಂಡದಲ್ಲಿಯ ತಮ್ಮ ಸ್ಥಾನವನ್ನು ಕಳೆದುಕೊಂಡರು. ಇದೇ ಸಂದರ್ಭದಲ್ಲಿ ತಮಿಳುನಾಡು ತಂಡದ ನಾಯಕತ್ವವು ಹೋಯಿತು. ದುರದೃಷ್ಟವೆಂದರೆ ಆ ನಾಯಕತ್ವ ಮುರುಳಿ ವಿಜಯಗೆ ಸಿಕ್ಕಿತು. ಹೀಗೆ ದಿನೇಶ್ ಕಾರ್ತಿಕ್ ಅವರಿಗೆ ಒಂದರ ಮೇಲೆ ಒಂದು ಸಹಿಸಲಾಗದ ಪೆಟ್ಟು ಬೀಳುತ್ತ ಹೋದವು.
ಈ ವಾತಾವರಣದಲ್ಲಿ ದಿನೇಶ್ ಕಾರ್ತಿಕ್ ಅವರ ಮನಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಜೀವನದಿಂದ ಮುಕ್ತವಾಗಬೇಕೆಂಬ ಕಲ್ಪನೆಗಳು ಬರುತ್ತಿದ್ದವಂತೆ. ಒಂದು ದಿನ ದಿನೇಶ್ ಕಾರ್ತಿಕ್ ರಿಗೆ ತರಬೇತಿ ನೀಡುವ ಟ್ರೈನರ್ ಅವರ ಈ ಪರಿಸ್ಥಿತಿ ನೋಡಿ ಬೆಚ್ಚಿ ಬಿದ್ದರು. ಆಗ ಒತ್ತಾಯಪೂರ್ವಕವಾಗಿ ಅವರನ್ನು ಜಿಮ್ ಗೆ ಕರೆದುಕೊಂಡು ಹೋದರು. ಅದೇ ಜಿಮ್ ಗೆ ದೀಪಿಕಾ ಪಲ್ಲಿಕಲ್ ರಾಷ್ಟ್ರೀಯ ಮಟ್ಟದ ಸ್ಕ್ವಾಷ್ ಆಟಗಾರ್ತಿಯೂ ಅಲ್ಲಿಗೆ ಬರುತ್ತಿದ್ದಳು. ದಿನೇಶ್ ಕಾರ್ತಿಕ್ ರ ಈ ಅವಸ್ಥೆಯನ್ನು ನೋಡಿ ದೀಪಿಕಾಳು ದಿನೇಶ್ ಅವರಿಗೆ ಸಪೋರ್ಟ್ ಮಾಡಿದಳು. ಇಬ್ಬರು ಕೂಡಿ ನಿಧಾನವಾಗಿ ಟ್ರೈನಿಂಗ್ ತೆಗೆದುಕೊಳ್ಳಲು ಶುರು ಮಾಡಿದರು.
ದೀಪಿಕಾ ನೀಡಿದ ಮೋರಲ್ ಸಪೋರ್ಟ್ ನಿಂದಾಗಿ ದಿನೇಶ್ ಅವರ ಜೀವನದಲ್ಲಿ ಧನಾತ್ಮಕವಾದ ಬದಲಾವಣೆ ಕಂಡು ಬರಲು ಶುರುವಾಯಿತು. ಆಮೇಲೆ ಪ್ರಥಮ ಶ್ರೇಣಿಯ ಕ್ರಿಕೆಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಲು ಶುರು ಮಾಡಿದರು. ನಂತರ ಭಾರತದ ತಂಡದಲ್ಲಿಯೂ ಅವರನ್ನು ಶಾಮೀಲು ಮಾಡಲಾಯಿತು. ಜೊತೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾದರು. ಇತ್ತ ಮುರಳಿ ವಿಜಯ್ ಅವರ ಪರ್ಫಾಮಾನ್ಸ್ ಗ್ರಾಫ್ ಇಳಿಯುತ್ತಾ ನಡೆಯಿತು. ಕೊನೆಗೆ ಮುರಳಿ ವಿಜಯ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದಲೂ ತೆಗೆದುಹಾಕಲಾಯಿತು.

2018 ರಲ್ಲಂತೂ ನಿಧಾಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲಲಿರುವ ಪಂದ್ಯವನ್ನು ದಿನೇಶ್ ಕಾರ್ತಿಕ್ ಅವರು ಸಿಕ್ಸ್ ಬಾರಿಸಿ ದೇಶಕ್ಕೆ ಭರ್ಜರಿಯಾದ ಗೆಲುವನ್ನು ತಂದು ಕೊಟ್ಟರು. ಈ ಪ್ರಯತ್ನಕ್ಕೆ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ನೀಡಿ ಗೌರವಿಸಲಾಯಿತು. ದಿನೇಶ್ ಕಾರ್ತಿಕ್ ರು ಒಟ್ಟಿನಲ್ಲಿ ಫೀನಿಕ್ಸ್ ಪಕ್ಷಿಯಂತೆ ಪುಟಿದೇಳುವ ಸ್ವಭಾವ ಹೊಂದಿದ್ದಾರೆ.
ನಂತರ ದೀಪಿಕಾ ಪಲ್ಲಿಕಲ್ ಅವರ ಜೊತೆಗೆ ಮದುವೆ ಮಾಡಿಕೊಂಡು ಈಗ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಡಿಲೆವರಿ ನಂತರ ಬರೀ ಆರು ತಿಂಗಳಲ್ಲಿಯೇ ದೀಪಿಕಾ ಅವರು ಸ್ಕ್ವಾಷ್ ಚಾಂಪಿಯನ್ಶಿಪ್ನಲ್ಲಿ ಪದಕವನ್ನು ಗೆದ್ದು ತನ್ನ ಪತಿಯ ಹಾಗೆ ತಾನೇನು ಕಮ್ಮಿ ಇಲ್ಲ ಎಂದು ತೋರಿಸಿದರು.
ಸದ್ಯ ದಿನೇಶ್ ಕಾರ್ತಿಕ್ ಅವರು ಆರ್ಸಿಬಿ ತಂಡದಲ್ಲಿ ಗಮನಸೆಳೆಯುವಂತೆ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಇವರ ಪ್ರಯತ್ನದಿಂದಾಗಿ ಆರ್ಸಿಬಿ ಈ ಸಲವಾದರೂ ಐಪಿಎಲ್ ಕಪ್ ಗೆಲ್ಲುವಂತಾಗಲಿ ಎಂದು ಹರಸೋಣ.
ಈಗ ಈ ಜೋಡಿಯು ಚೆನ್ನೈನಲ್ಲಿ ಸುಂದರವಾದ ಕನಸಿನ ಮನೆಯೊಂದನ್ನು ಖರೀದಿಸಿದ್ದಾರೆ, ಹಾಗೂ ತಮ್ಮ ಸುಖದಿಂದ ಕೂಡಿದ ಸಂಸಾರದಲ್ಲಿ ಸಂತೋಷದಿಂದ ಮುನ್ನಡೆಯುತ್ತಿದ್ದಾರೆ. ದಿನೇಶ್ ಕಾರ್ತಿಕ್ ಅವರ ಧೈರ್ಯ ಮೆಚ್ಚಲೇಬೇಕು. ಅವರು ತಮ್ಮ ವೈಫಲ್ಯವನ್ನು ಮರೆತು ಅದಕ್ಕೆ ಮಣ್ಣಲ್ಲಿ ಹೂಳಿಟ್ಟು ಮರಳಿ ಮಾಡಿದ ಯತ್ನ ತುಂಬಾ ಗಮನಾರ್ಹ. ಅವರ ಪ್ರಬಲವಾದ ಇಚ್ಛಾಶಕ್ತಿಯಿಂದಾಗಿ ದಿನೇಶ್ ಕಾರ್ತಿಕ್ ಒಂದು ಭಾರಿ ಹೋರಾಟಗಾರನೆಂದು ಜಗತ್ತೇ ಗುರುತಿಸುತ್ತದೆ.