… ಆದ್ದರಿಂದ ಧೋನಿ ಹೆಲ್ಮೆಟ್ ಮೇಲೆ ‘ತ್ರಿವರ್ಣ ಧ್ವಜ’ ಇರುವುದಿಲ್ಲ, ಇದರ ಹಿಂದಿನ ಕಾರಣ ತಿಳಿದುಕೊಂಡರೆ ಧೋನಿ ಮೇಲಿರುವ ಗೌರವ ಇನ್ನೂ ಹೆಚ್ಚಾಗುತ್ತದೆ!
ಭಾರತೀಯ ಕ್ರಿಕೆಟ್ ತಂಡದ ಎಲ್ಲ ಆಟಗಾರರ ಹೆಲ್ಮೆಟ್ ಮೇಲೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಲಾಂಛನನದೊಂದಿಗೆ ತ್ರಿವರ್ಣ ಧ್ವಜ ಸಹ ಹೊಂದಿವೆ. ಆದರೆ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಅವರ ಹೆಲ್ಮೆಟ್ನಲ್ಲಿ ತ್ರಿವರ್ಣ ಇರದನ್ನು ನೀವು ಆಗಾಗ್ಗೆ ಎಷ್ಟೋ ಸಲ ನೋಡಿರಬಹುದು. ಇದರ ಹಿಂದಿನ ಕಾರಣವನ್ನು ನಾವು ನಿಮಗೇ ತಿಳಿಸುವವರಿದ್ದೇವೆ.
ಪಂದ್ಯವನ್ನು ನೋಡುವಾಗ, ಪ್ರೇಕ್ಷಕರ ಮನಸ್ಸಿನಲ್ಲಿ ಆಗಾಗ್ಗೆ ಉದ್ಭವಿಸುವ ಪ್ರಶ್ನೆಯೆಂದರೆ ಧೋನಿ ಹೀಗೆ ಏಕೆ ಮಾಡುತ್ತಿದ್ದಾರೆ? ಆದರೆ ಅಂತಿಮವಾಗಿ, ಎಂಎಸ್ ಧೋನಿ ಇತರ ಆಟಗಾರರಂತೆ ತನ್ನ ಹೆಲ್ಮೆಟ್ನಲ್ಲಿ ತ್ರಿವರ್ಣ ಏಕೆ ಇಲ್ಲ ಎಂಬುದನ್ನು ತಿಳಿಸಿದ್ದಾರೆ. ಆದರೆ ಇತರ ಆಟಗಾರರಂತೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಲಾಂಛನವು ಅವರ ಹೆಲ್ಮೆಟ್ ಮೇಲಿದೆ. ಈಗ ಇದರ ಹಿಂದಿನ ಕಾರಣ ಬೆಳಕಿಗೆ ಬಂದಿದೆ. ಈ ಸುದ್ದಿಯನ್ನು ಬಹಿರಂಗಪಡಿಸಿದ ನಂತರ ಕ್ರಿಕೆಟ್ ಅಭಿಮಾನಿಗಳಿಗೆ ಧೋನಿ ಬಗ್ಗೆ ಗೌರವ ಹೆಚ್ಚಾಗಿದೆ.

ಮಾಹಿಯವರ ವಿಷಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಅಥವಾ ಇತರ ಕ್ರಿಕೆಟಿಗರಿಗಿಂತ ತುಂಬಾ ಭಿನ್ನವಾಗಿದೆ. ಧೋನಿ ಬ್ಯಾಟ್ಸ್ಮನ್ ಹಾಗೂ ವಿಕೆಟ್ಕೀಪರ್ ಸಹ ಇದ್ದಾರೆ. ವಿಕೆಟ್ ಕೀಪಿಂಗ್ ಸಮಯದಲ್ಲಿ ಸ್ಪಿನ್ನರ್ ಬಂದಾಗ ಧೋನಿ ತನ್ನ ಹೆಲ್ಮೆಟ್ ತೆಗೆದು ನೆಲದ ಮೇಲೆ ಇಡುವುದನ್ನು ನೀವು ಎಷ್ಟೋಸಲ ನೋಡಿರಬಹುದು. ಅಲ್ಲದೆ, ಧೋನಿ ಬ್ಯಾಟಿಂಗ್ ಬಂದಾಗ ಸ್ಪಿನ್ನರ್ ಬಂದರೆ ಅವರ ಹೆಲ್ಮೆಟ್ ತಗೆದು ಕ್ಯಾಪ್ ಧರಿಸುವದನ್ನು ಸಹ ನೋಡಿದ್ದೇವೆ.

ರಾಷ್ಟ್ರಧ್ವಜಕ್ಕೆ ಅವಮಾನ ಆಗಬಾರದು ಎಂಬ ಉದ್ದೇಶದಿಂದ ಧೋನಿ ತಮ್ಮ ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜದ ಸ್ಟಿಕರ್ ಹಚ್ಚುವದಿಲ್ಲ. ಧೋನಿಯವರು ಕೀಪಿಂಗ್ ಮಾಡುವಾಗ ಸ್ಪಿನ್ನರ್ ಬಂದರೆ ಅವರ ಹೆಲ್ಮೆಟ್ ನೆಲದ ಮೇಲೆ ಇಡುವರು ಅಲ್ಲದೆ ಬ್ಯಾಟಿಂಗ್ಆಡುವಾಗ ಸಹ ಇದೇ ಪ್ರಕಾರವಾಗಿ ಮಾಡುವರು. ಒಂದು ವೇಳೆ ನಾನು ತ್ರಿವರ್ಣ ಧ್ವಜದ ಸ್ಟಿಕರ್ ನನ್ನ ಹೆಲ್ಮೆಟ್ ಮೇಲೆ ಹಚ್ಚಿಕೊಂಡು ಅದನ್ನು ನೆಲದ ಮೇಲೆ ಇಟ್ಟರೆ ನಮ್ಮ ಧ್ವಜಕ್ಕೆ ಅವಮಾನಿಸಿದಂತಾಗುವದು ಆದುದರಿಂದಲೇ ನಾನು ಹೆಲ್ಮೆಟ್ ಮೇಲೆ ತ್ರಿವರ್ಣ ಅಂಟಿಸುವದಿಲ್ಲ’ ಎಂದು ಧೋನಿ ತಿಳಿಸಿದ್ದಾರೆ. ಧೋನಿಯವರು ರಾಷ್ಟ್ರದ ಮಾನಸನ್ಮಾನದ ಸಲುವಾಗಿ ಹೆಲ್ಮೆಟ್ ಮೇಲೆ ತ್ರಿವರ್ಣ ಅಂಟಿಸುವದಿಲ್ಲವಂತೆ.

ಮುಖ್ಯವಾಗಿ, ಧೋನಿ ಮೊದಲಿನಿಂದಲೂ ಭಾರತೀಯ ಸೇನೆಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು. ಅವರು ಕ್ರಿಕೆಟಿಗರಾಗುವ ಮೊದಲು ಸೈನ್ಯಕ್ಕೆ ಸೇರಲು ಬಯಸಿದ್ದರು. ಪ್ರಸ್ತುತ ಅವರು ಭಾರತೀಯ ಕ್ರಿಕೆಟ್ ಜೊತೆಗೆ ಭಾರತೀಯ ಸೇನೆಯೊಂದಿಗೆ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.
ನಿಮಗೆ ಈ ಲೇಖನವನ್ನು ಇಷ್ಟವಾಗಿದ್ದರೆ, ದಯವಿಟ್ಟು ಇದನ್ನು ಲೈಕ್ ಮಾಡಿ ಮತ್ತು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ಕಾಮೆಂಟ್ ಮಾಡುವ ಮೂಲಕ ನಿಮ್ಮ ಪ್ರತಿಕ್ರಿಯೆ ಏನೆಂದು ನಮಗೆ ತಿಳಿಸಿ.