ಈ ಯುವತಿ ಎತ್ತಿದ ಇಷ್ಟು ದೊಡ್ಡ ಬಂಡೆ ನಿಮ್ಮ ಕೈಯಿಂದ ಎತ್ತೋಕೆ ಸಾಧ್ಯವೇ? ಮೊದಲು ಈ ವೈರಲ್ ವಿಡಿಯೋ ನೋಡಿ ಆಮೇಲೆ ಉತ್ತರಿಸಿ…

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವಿಶ್ವಾಸಕ್ಕೆ ದೂರವಾಗುವ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳನ್ನು ನೋಡಿದಾಗ ನೇಟಿಜನ್ಸ್ ಗಳು ತುಂಬಾನೇ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಸದ್ಯ ಇದೇ ರೀತಿಯ ವಿಡಿಯೋವನ್ನು ನಿಮಗಾಗಿ ಈ ಲೇಖನದಲ್ಲಿ ತಂದಿದ್ದೇವೆ. ಇದನ್ನು ನೋಡುವಾಗ ಮಾತ್ರ ತುಂಬಾನೇ ಅದ್ಭುತ ಮತ್ತು ಆಶ್ಚರ್ಯವೆನಿಸುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಸುಂದರ ಯುವತಿಯೊಬ್ಬಳು ಪಿಂಕ್ ಡ್ರೆಸ್ ಹಾಕಿಕೊಂಡು ಕಾಡಿನಲ್ಲಿ ದೊಡ್ಡದಾದ ಬಂಡೆಯೊಂದನ್ನು ಎತ್ತಿಕೊಂಡು ಬಾಹುಬಲಿಯ ರೀತಿಯಲ್ಲಿ ಬರುತ್ತಿದ್ದಾಳೆ. ಬ್ಯಾಗ್ರೌಂಡ್ ಮ್ಯೂಸಿಕ್ ನಲ್ಲಿ ಬಾಹುಬಲಿಯ ಸುಮಧುರ ಗೀತೆ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಯುವತಿಯು ಮೊಟ್ಟ ಮೊದಲು ಕಾಡಿನಲ್ಲಿಯ ಪೊದೆಗಳ ಮರೆಯಿಂದ ಹಾಯ್ದು ಬರುತ್ತಿರುತ್ತಾಳೆ. ಆಕೆ ದೊಡ್ಡದಾದ ಬಂಡೆಯೊಂದನ್ನು ತುಂಬಾ ಸಹಜವಾಗಿ ಹೊತ್ತುಕೊಂಡು ಬೆಟ್ಟವನ್ನು ಏರುತ್ತಾ ಬರುವುದನ್ನು ನೋಡಿದರೆ ಯಾರಿಗಾದರೂ ಮೊದಲು ಆಶ್ಚರ್ಯವೆನಿಸುತ್ತದೆ. ವಿಡಿಯೋದ ಕೆಲವೇ ಕ್ಷಣಗಳ ನಂತರ ಗೊತ್ತಾಗುತ್ತದೆ ಇದು ದೊಡ್ಡ ಬಂಡೆಯ ತರಹವೇ ತಯಾರಿಸಿದ ಡಮ್ಮಿ ಬಂಡೆ ಎಂದು. ಬಂಡೆಯನ್ನು ಹೊತ್ತುಕೊಂಡು ಬರುವಾಗ ಯುವತಿಯ ಮುಖದ ಮೇಲೆ ಯಾವುದೇ ರೀತಿಯ ಆಯಾಸದ ಅಥವಾ ದಣಿವಿನ ಭಾವನೆ ಕಂಡು ಬರುವ ಬದಲಾಗಿ ತುಂಬಾ ಬ್ಯೂಟಿಫುಲ್ ಸ್ಮೈಲ್ ಕಂಡುಬರುತ್ತಿದೆ. ಆಗ ಗೊತ್ತಾಗುತ್ತದೆ ಈ ಬಂಡೆ ಡಮ್ಮಿ ಇದೆ ಎಂದು. ಮತ್ತು ಇದನ್ನು ಎತ್ತಿಕೊಂಡು ಬರುವವರು ನಮ್ಮ ನಿಮ್ಮ ಪರಿಚಯದ ಆಕ್ಟ್ರೆಸ್ ರಂಜನಿ ರಾಘವನ್ ಅಂತ. ಈ ಡಮ್ಮಿ ಬಂಡೆ ಒರಿಜಿನಲ್ ಬಂಡೆಗಿಂತಲೂ ಡಬಲ್ ಒರಿಜಿನಲ್ ಹಾಗೆ ಕಾಣಿಸುತ್ತಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ರಂಜಿನಿ ರಾಘವನ್ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ ಪ್ರಸ್ತುತ ವಿಡಿಯೋವನ್ನು 7.9 ಮಿಲಿಯನ್ ಜನ ವೀಕ್ಷಿಸಿದ್ದಾರೆ ಮತ್ತು ಐದುವರೆ ಲಕ್ಷ ಜನರು ಲೈಕ್ ಮಾಡಿದ್ದಾರೆ.