ನಿಮ್ಮ ಮಾಂಗಲ್ಯ ಸೂಪರ್ ಆಗಿದೆ; ತುಂಬಾ ಯುನಿಕ್ ಸ್ಟೈಲ್ನಲ್ಲಿ ಮಹಿಳೆಯಿಂದಲೇ ಮಾಂಗಲ್ಯ ಪಡೆದು ಪರಾರಿಯಾದ ಸ್ಮಾರ್ಟ್ ಕಳ್ಳ! CCTV ವಿಡಿಯೋ.

ದಿನಬೆಳಗಾದರೆ ಕಳ್ಳತನದ ಅದರಲ್ಲೂ ಚಿನ್ನದ ಸರಗಳನ್ನು ಕಳ್ಳತನ ಮಾಡುವ ಬೇರೆಬೇರೆ ಪ್ರಕಾರಗಳನ್ನು ಸಿಸಿಟಿವಿಯಲ್ಲಿ ನೋಡುತ್ತೇವೆ. ಈಗ ಒಬ್ಬ ಸ್ಮಾರ್ಟ್ ಕಳ್ಳ ತುಂಬಾ ಯೂನಿಕ್ ಸ್ಟೈಲ್ ನಿಂದ ಮಹಿಳೆಯಿಂದಲೇ ಮಾಂಗಲ್ಯವನ್ನು ಪಡೆದು ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಸ್ತುತ ಘಟನೆ ಮಹಾರಾಷ್ಟ್ರದ ಮುಂಬೈ ಹತ್ತಿರದ ಬದ್ಲಾಪುರ್ ಉಪನಗರದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಗಲಾಟೆ ಇಲ್ಲದೆ ತುಂಬಾ ವಿಶ್ವಾಸದಿಂದ ಸ್ವತ: ಮಹಿಳೆಯೇ ತನ್ನ ಕೊರಳಲ್ಲಿಯ ಮಾಂಗಲ್ಯವನ್ನು ತೆಗೆದುಕೊಂಡುವಂತೆ ಸ್ಮಾರ್ಟ್ ಕಳ್ಳ ಪ್ಲಾನ್ ಮಾಡಿದ್ದ, ಮತ್ತು ಅದರಲ್ಲಿ ಸರಿಯಾಗಿ ಯಶಸ್ವಿಯೂ ಆಗಿ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

ಏನಿದು ಸಂಪೂರ್ಣ ಘಟನೆ…

ಕಳೆದ ಶುಕ್ರವಾರ ಒಂದು ಬಟ್ಟೆ ಅಂಗಡಿಯಲ್ಲಿ ಕಳ್ಳ ಗ್ರಾಹಕನಾಗಿ ಪ್ರವೇಶ ಮಾಡಿದ್ದಾನೆ. ಅಂಗಡಿಯಲ್ಲಿ ಇಂದುಮತಿ ಉತ್ತೇಕರ್ ಹೆಸರಿನ ಮಹಿಳೆ ಕೆಲಸ ಮಾಡುತ್ತಿದ್ದಳು. ಒಳಗೆ ಬಂದ ಕಳ್ಳ ಮಹಿಳೆಗೆ ಬಟ್ಟೆಗಳನ್ನು ತೋರಿಸಲು ವಿನಂತಿಸಿಕೊಂಡ. ಕೆಲವು ಬಟ್ಟೆಗಳನ್ನು ಖರೀದಿಸಿದ ನಂತರ ಬಟ್ಟೆ ಅಂಗಡಿಯ ಮಾಲೀಕಳಾದ ದೀಪಾಲಿ ಮಹಾಲೆ ಅವರಿಗೆ ಕಾಲ್ ಮಾಡಿ ಖರೀದಿಸಿದ ಬಟ್ಟೆಯ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿಕೊಡಲು ವಿನಂತಿಸಿದ.

ಇದಾದ ನಂತರ ಕಳ್ಳ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯದ ಬಗ್ಗೆ ತುಂಬಾ ಪ್ರಶಂಸೆ ಮಾಡಿ, ನಾನು 3 ಜ್ಯುವೆಲರಿ ಶಾಪಗಳ ಮಾಲಿಕನಾಗಿದ್ದು , ನಿಮ್ಮ ಕೊರಳಲ್ಲಿರುವ ಮಾಂಗಲ್ಯವನ್ನು ನನಗೆ ಕೊಡಿ, ನಾನು ಕೆಲವೇ ನಿಮಿಷಗಳಲ್ಲಿ ಇದರ ಅಚ್ಚನ್ನು ಹಾಕಿಸಿಕೊಂಡು ಬೇಗನೆ ವಾಪಸ್ ತಂದು ಕೊಡುತ್ತೇನೆ ಎಂದು ಹೇಳಿದ್ದಾನೆ.

ಈ ಮಾತಿಗೆ ಮಹಿಳೆ ಮೊದಲು ನಿರಾಕರಿಸಿದಾಗ ಕಳ್ಳ, ನಾನು ನಿಮ್ಮ ಅಂಗಡಿಯ ಮಾಲೀಕಳಾದ ದೀಪಾಲಿ ಅವರ ಪರಿಚಯದವನಿದ್ದೇನೆ. ನನ್ನ ಮೇಲೆ ನಿಮಗೆ ಅಷ್ಟು ವಿಶ್ವಾಸವಿಲ್ಲವೆ? ಮೇಲಾಗಿ ನಿಮ್ಮ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಬೇರೆ ಇವೆ, ನಿಮಗೆ ಒಂದು ವೇಳೆ ನನ್ನ ಮೇಲೆ ವಿಶ್ವಾಸವಿಲ್ಲದಿದ್ದರೆ ನನ್ನ ಮೊಬೈಲ್ ನಂಬರ್ ಇಟ್ಟುಕೊಳ್ಳಿ ಜೊತೆಗೆ ನನ್ನ ಕೈಯಲ್ಲಿರುವ ಈ ಚಿನ್ನದ ಕಡಗವನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ ಎಂದು ಮಹಿಳೆಯಲ್ಲಿ ವಿಶ್ವಾಸ ಮೂಡಿಸಿಕೊಂಡಿದ್ದಾನೆ.

ಅಂಗಡಿಯ ಮಾಲೀಕಳು ಈತನಿಗೆ ಪರಿಚಯವಿರುವಾಗ ಜೊತೆಗೆ ತನ್ನ ಕೈಯಲ್ಲಿಯ ಚಿನ್ನದ ಕಡಗವನ್ನು ತೆಗೆದುಕೊಡಲು ಮುಂದಾದಾಗ ಮಹಿಳೆಗೆ ಆತ ಹೇಳುತ್ತಿರುವುದೆಲ್ಲ ಸತ್ಯವಿದೆ ಎಂದೆನಿಸಿ ತಾನಾಗಿಯೇ ಕೊರಳಲ್ಲಿಯ ಮಾಂಗಲ್ಯವನ್ನು ತೆಗೆದು ಕಳ್ಳನಿಗೆ ಕೊಟ್ಟೇ ಬಿಟ್ಟಿದ್ದಾಳೆ. ಅದನ್ನು ತೆಗೆದುಕೊಂಡ ಕಳ್ಳ ಬೈಕ್ ಮೇಲೆ ತನ್ನ ಜೊತೆಗಾರನೊಂದಿಗೆ ಅಲ್ಲಿಂದ ಹೋದವನು ಇನ್ನೂ ಮರಳಿ ಬಂದೇ ಇಲ್ಲ. ಮಹಿಳೆಯು ತಾನು ಮೋಸ ಹೋಗಿದ್ದೇನೆ ಎಂದು ತಿಳಿದಾಗ ತಕ್ಷಣ ಪೊಲೀಸ್ ಸ್ಟೇಷನ್ ಗೆ ಓಡಿ ಹೋಗಿದ್ದಾಳೆ. ಪೊಲೀಸರು ಸಿಸಿಟಿವಿ ಫೂಟೇಜ್ ಆಧಾರದ ಮೇಲಿಂದ ತನಿಖೆ ಮತ್ತು ವ್ಯಕ್ತಿಯ ಶೋಧದಲ್ಲಿ ತೊಡಗಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ.