ಬ್ಯಾಂಡ್ ಮ್ಯೂಸಿಕ್ ಕಿವಿಗೆ ಬೀಳುತ್ತಲೇ ನಾಯಿ ಎರಡೇ ಕಾಲುಗಳ ಮೇಲೆ ಭರ್ಜರಿಯಾಗಿ ಶುರುಮಾಡಿತು ಡಾನ್ಸ್ ! ವಿಡಿಯೋ ವೈರಲ್…

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಹಾಗೂ ಮನರಂಜನೆಯ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ವಿಶೇಷವಾಗಿ ಪ್ರಾಣಿಗಳ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈಗ ನಾಯಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮನರಂಜನೆ ನೀಡುತ್ತಿದೆ.

ಇಲ್ಲಿ ಒಂದು ನಾಯಿಯು ಬ್ಯಾಂಡಿನ ಶಬ್ದ ಕಿವಿಗೆ ಬೀಳುತ್ತಲೇ ನಿಂತಲ್ಲಿಯೇ ತುಂಬಾ ವೇಗವಾಗಿ ಡಾನ್ಸ್ ಮಾಡಲು ಶುರುಮಾಡಿದೆ. ಸಾಕು ಪ್ರಾಣಿಗಳಲ್ಲಿ ನಾಯಿ ಮತ್ತು ಬೆಕ್ಕು ಇವು ತುಂಬಾ ಫೇಮಸ್ ಆಗಿವೆ. ಈ ಪ್ರಾಣಿಗಳ ವಿಡಿಯೋ ನೋಡಲು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ.

ಕೆಲವರಿಗೆ ಡಿಜೆ ಶಬ್ದ ಅಥವಾ ಬ್ಯಾಂಡಿನ ಶಬ್ದ ಕಿವಿಗೆ ಬೀಳುತ್ತದೆ ಮೈಯಲ್ಲಿ ಏನೋ ಒಂದು ವಿಧ್ಯುತ್ ಸಂಚಾರವಾದಂತಾಗಿ ಎಲ್ಲೆಂದರಲ್ಲಿ ಹುಚ್ಚೆದ್ದು ಕುಣಿಯಲು ಶುರುಮಾಡುತ್ತಾರೆ. ಹಾಗೆ ಈಗ ಈ ನಾಯಿಯೂ ಸಹ ಬ್ಯಾಂಡಿನ ಶಬ್ದ ಕೇಳಿದ ನಂತರ ನಿಂತಲ್ಲಿಯೇ ಎರಡು ಕಾಲುಗಳ ಮೇಲೆ ತುಂಬಾ ಉತ್ಸಾಹದಿಂದ ಕುಣಿಯಲು ಶುರುಮಾಡಿದೆ. ಹಾಗೆ ನೋಡಲಾಗಿ ಬ್ಯಾಂಡ್ ನಾಯಿಗಿಂತ ಸ್ವಲ್ಪ ದೂರದ ಅಂತರದಲ್ಲಿ ಬಾರಿಸುತ್ತಿದ್ದಾರೆ. ಆದರೂ ಈ ನಾಯಿಗೆ ತನ್ನ ಡ್ಯಾನ್ಸ್ ಮೇಲೆ ಕಂಟ್ರೋಲ್ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಬ್ಯಾಂಡಿನ ಶಬ್ದ ಕಿವಿಗೆ ಬೀಳಲು ನಾಯಿ ತನ್ನ ಮುಂದಿನ ಕಾಲುಗಳನ್ನು ಮೇಲೆತ್ತಿ ಬರೀ ಹಿಂದಿನ ಎರಡು ಕಾಲುಗಳ ಮೇಲೆ ನಿಂತು ಒಂದೇ ಸವನೆ ಕುಣಿಯಲು ಶುರುಮಾಡಿದೆ.

ವಿಡಿಯೋ ನೋಡಿ

ನೇಟಿಜನ್ಸ್ ಗಳ ಪ್ರತಿಕ್ರಿಯೆ ನೋಡಿ…

ನಾಯಿಯ ನೃತ್ಯ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆಗೂ ವೈರಲ್ ಆಗುತ್ತಿದೆ. ಟ್ವಿಟರ್ನಲ್ಲಿ ಇಲ್ಲಿಯವರೆಗೆ ಈ ವಿಡಿಯೋವನ್ನು 2.5 ಲಕ್ಷ ಜನರು ನೋಡಿ ಆನಂದಿಸಿದ್ದಾರೆ. ಜೊತೆಗೆ ಸಾವಿರಾರು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರು ನಾಯಿಯ ಈ ಡ್ಯಾನ್ಸ್ ಗೆ ಸೂಪರ್ ಎಂದಿದ್ದಾರೆ.