ಭಾರತದಲ್ಲಿ ಸಖತ್ ಪ್ರಸಿದ್ಧಿ ಪಡೆದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪಾಲ್ ಮೇಲೆ ಹಲ್ಲೆ…

ವ್ಯಕ್ತಿಯ ಹತ್ತಿರ ಏನಾದರೂ ಕೌಶಲ್ಯ ವಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ರಾತ್ರಿ ಕಳೆಯುವುದರಲ್ಲಿ ಸ್ಟಾರ್ ಆಗಿರುತ್ತಾನೆ. ಭಾರತೀಯ ಭಾಷೆಗಳಲ್ಲಿ ವಿಶೇಷವಾಗಿ ಹಿಂದಿ ಚಲನಚಿತ್ರಗಳಲ್ಲಿಯ ಹಾಡು ಮತ್ತು ಡೈಲಾಗ್ಸ್ ಗಳನ್ನು ಉಪಯೋಗಿಸಿಕೊಂಡು ವಿಡಿಯೋ, ರೀಲ್ಸ್ ಮತ್ತು ಡಾನ್ಸ್ ಮುಖಾಂತರ ಟಾಂಜಾನಿಯಾದ ಸೋದರ-ಸೋದರಿ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕೀಲಿ ಪಾಲ್ ಮತ್ತು ಆತನ ಸೋದರಿ ಇಬ್ಬರು ಇನ್ಸ್ಟಾಗ್ರಾಮ್ ಇನ್ಫ್ಲುಎನ್ಸರ್ ಆಗಿದ್ದಾರೆ. ಇವರು ಸತತವಾಗಿ ಭಾರತದ ಚಲನಚಿತ್ರಗಳ ಮೇಲೆ ರಿಲ್ಸ್ ಗಳನ್ನು ಮಾಡುತ್ತಾರೆ. ಹೀಗಾಗಿ ಭಾರತದಲ್ಲಿ ಕೋಟ್ಯಾವಧಿ ಜನರು ಇವರ ಅಭಿಮಾನಿ ಗಳಾಗಿದ್ದಾರೆ. ಆದರೀಗ ಅವರ ಅಭಿಮಾನಿಗಳಿಗೆ ಒಂದು ನೋವಿನ ಸುದ್ದಿ ಬಂದಿದೆ. ಅದೇನೆಂದರೆ ಕೀಲಿ ಪಾಲ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.

ಕಿಲಿಯವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕೋಲು ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಮೀಡಿಯಾ ರಿಪೋರ್ಟ್ ಪ್ರಕಾರ, ಕಿಲಿ ಹಲ್ಲೆಯಾದ ಸ್ಥಳದಿಂದ ಹೇಗೋ ತನ್ನ ಜೀವ ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಯಶಸ್ವಿಯಾಗಿದ್ದಾನೆ. ಈ ಬಗ್ಗೆ ಸ್ವತಃ ಕಿಲಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡುತ್ತಾ ಮಾಹಿತಿ ನೀಡಿದ್ದಾನೆ. ಜೊತೆಗೆ ವಿಡಿಯೋವನ್ನು ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿದ್ದಾನೆ. ಈ ಹಲ್ಲೆಯಲ್ಲಿ ಕಿಲಿ ಗಾಯಗೊಂಡಿದ್ದು 5 ಸ್ಟಿಚೆಸ್ಗಳು ಸಹ ಬಿದ್ದಿವೆ ಎಂದು ಹೇಳಿದ್ದಾನೆ. ಕಿಲಿ ಶೇರ್ ಮಾಡಿದ ಪೋಸ್ಟ್ನಲ್ಲಿ ಒಂದು ಫೋಟೋ ಇದೆ. ಫೋಟೋದಲ್ಲಿ ಕಿಲಿ ಬೆಡ್ ಮೇಲೆ ಗಾಯವಾದ ಅವಸ್ಥೆಯಲ್ಲಿ ಕಂಡು ಬರುತ್ತಿದ್ದಾನೆ.

ಭಾರತೀಯ ಹಾಡುಗಳ ವೈರಲ್ ಲಿಪ್ ಸಿಕಿಂಗ್ ವೀಡಿಯೋಗಳಿಂದಾಗಿ ಕಿಲಿ ಯಾವತ್ತೂ ಸುದ್ದಿಯಲ್ಲಿರುತ್ತಾರೆ. ಕಿಲಿ ಇತ್ತೀಚೆಗೆ ಪ್ರದರ್ಶನ ಕಂಡ ಕನ್ನಡದ ಹೆಮ್ಮೆಯ ಚಿತ್ರ ‘KGF 2’ ಮತ್ತು ಬೀಸ್ಟ್ ನಲ್ಲಿಯ ಡೈಲಾಗ್ ಹಾಗೂ ಪುಷ್ಪ ಚಿತ್ರದಲ್ಲಿಯ ಪ್ರಸಿದ್ಧ ಹಾಡುಗಳ ಮೇಲೆ ಡಾನ್ಸ್ ಮಾಡುತ್ತಿರುವ ವೀಡಿಯೋಗಳನ್ನು ಶೇರ್ ಮಾಡಿದ್ದ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಜಬರ್ದಸ್ತ್ ವೈರಲ್ ಆಗಿದ್ದವು.

 

View this post on Instagram

 

A post shared by Viral Bhayani (@viralbhayani)

ಇಡೀ ಭಾರತದಲ್ಲಿಯೇ ಕಿಲಿಯ ಪ್ರಶಂಸೆಯಾಗುತ್ತದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳು ಸಹ ಆತನ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ ನಲ್ಲಿ ಕಿಲಿ ಪಾಲ್ ಹಾಗೂ ಆತನ ಸೋದರಿ ನಿಮಾ ಪಾಲ್ ಬಗ್ಗೆ ಉಲ್ಲೇಖಿಸುತ್ತಾ ಅವರ ಪ್ರಶಂಸೆಯನ್ನು ಮಾಡಿದ್ದಾರೆ. ಕೆಲವೇ ದಿವಸಗಳ ಹಿಂದೆ ತಾಂಜಾನಿಯಾದಲ್ಲಿಯ ಭಾರತೀಯ ಹಾಯ್ ಕಮಿಷನ್ ನಿಂದ ಕಿಲಿ ಪಾಲ್ ಅವರಿಗೆ ಗೌರವಿಸಲಾಗಿದೆ.