99% ಫೇಲ್! ಜೂಮ್ ಮಾಡಿ ನೋಡಿ ಹೇಳಬಹುದು ಉತ್ತರ! ತುಂಬಾ ಕನ್ಫ್ಯೂಸ್ ಮಾಡುವ ಈ ಚಿತ್ರದಲ್ಲಿ ಕಾಣುವ ಸರ್ಕಲ್ ಗಳೇಷ್ಟು?
ಸೋಶಿಯಲ್ ಮೀಡಿಯಾದಲ್ಲಿ ಓಡಾಡುವ ಕೆಲವೊಂದು ಚಿತ್ರಗಳನ್ನು ನೋಡಿದಾಗ ತಲೆಯಲ್ಲಿ ಅಕ್ಷರಶಃ ಹುಳ ಸೇರಿದಂತಾಗುತ್ತದೆ. ಅಂಥ ಚಿತ್ರಗಳನ್ನು ನೋಡುವಾಗ ವ್ಯಕ್ತಿ ತುಂಬಾ ಕನ್ಫ್ಯೂಸ್ ಆಗಿಬಿಡುತ್ತಾನೆ. ಯಾವುದೂ ಸರಿಯಾಗಿ ಕಾಣುವುದಿಲ್ಲ ಮತ್ತು ಏನೂ ತಿಳಿದುಬರುವುದಿಲ್ಲ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಈ ರೀತಿಯ ಅನೇಕ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಓಡಾಡುತ್ತಿವೆ. ಇದೇ ರೀತಿಯ ಒಂದು ಫೋಟೋ ಸದ್ಯ ಇಂಟರ್ನೆಟ್ ನಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿರುವ ಪ್ರಶ್ನೆಯ ಉತ್ತರವನ್ನು ಹುಡುಕಾಡಲು ಯೂಸರ್ಸ್ ಗಳು ತಮ್ಮ ತಲೆ ಚಚ್ಚಿ ಕೊಳ್ಳುತ್ತಿದ್ದಾರೆ.
ಈ ಹೊಸದಾದ ಬ್ರೈನ್ ಟೀಸರ್ ನೋಡುಗರ ಕಣ್ಣುಗಳಿಗೆ ತುಂಬಾ ಗೊಂದಲದಲ್ಲಿ ಹಾಕುತ್ತಿವೆ. ಈಗ ನಿಮ್ಮ ಕಣ್ಣುಗಳಿಗೆ ಕಾಣುತ್ತಿರುವ ಈ ಚಿತ್ರದಲ್ಲಿ ಪುಟ್ಟ ಪುಟ್ಟ ಬ್ಲಾಕ್ ಗಳಿವೆ. ಈ ಬ್ಲಾಕ್ ಗಳಿಂದಲೇ ಸರ್ಕಲ್ ಗಳನ್ನು ತಯಾರಿಸಲಾಗಿದೆ. ನಿಮಗೆ ಈ ಚಿತ್ರದಲ್ಲಿ ಕಂಡು ಬರುವ ಒಟ್ಟು ಸರ್ಕಲ್ ಗಳ ಸಂಖ್ಯೆ ಎಷ್ಟಿವೆ ಎಂದು ಹೇಳಬೇಕಾಗಿದೆ. ಇಲ್ಲಿರುವ ಸರ್ಕಲ್ ಗಳು ಎಷ್ಟಿವೆ ಎಂದು ಹೆಚ್ಚೆಚ್ಚು ಶೋಧಿಸಲು ಹೋದಂತೆ ವ್ಯಕ್ತಿ ಮತ್ತಷ್ಟು ಗೊಂದಲದಲ್ಲಿ ಬೀಳುವುದು ನಿಶ್ಚಿತ. ತುಂಬಾ ಕಡಿಮೆ ಜನರಿಗೆ ಅಂದರೆ ಸಾವಿರಕ್ಕೆ 2 ಸಾವಿರಕ್ಕೆ ಒಬ್ಬರು ಉತ್ತರವನ್ನು ಸರಿಯಾಗಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಫೋಟೋದಲ್ಲಿ ಕಂಡುಬರುವ ವರ್ತುಲಗಳು ಕಪ್ಪು ಹಾಗೂ ಬಿಳಿ ಬಣ್ಣದ ಪುಟ್ಟಪುಟ್ಟ ಬ್ಲಾಕ್ಸ್ ಗಳಿಂದ ತುಂಬಿವೆ. ಕಣ್ಣುಗಳನ್ನು ತುಂಬಾ ತೀಕ್ಷ್ಣ ಮಾಡಿ ಸರಿಯಾಗಿ ನೋಡಲು ಹೋದಂತೆ ವ್ಯಕ್ತಿ ಮತ್ತಷ್ಟು ಗೊಂದಲದಲ್ಲಿ ಬೀಳುತ್ತಾನೆ. ಕಣ್ಣುಗಳ ಮುಂದೆ ಒಂದು ಚಕ್ರವ್ಯೂಹ ತಯಾರಾದಂತೆ ಕಂಡುಬರುತ್ತದೆ. ವರ್ತುಲಗಳ ರಚನೆ ಒಂದರಲ್ಲೊಂದು ಸೇರಿದ ಹಾಗೆ ಕಣ್ಣಿಗೆ ಗೋಚರವಾಗುತ್ತದೆ. ಈ ಚಿತ್ರದಲ್ಲಿ ಕಂಡುಬರುವ ವರ್ತುಲಗಳು ಸರಿಯಾಗಿ ಕಂಡುಬರುತ್ತಿವೆಯೇ? ಒಂದು ವೇಳೆ ಕಂಡುಬರುತ್ತಿದ್ದರೆ ಆ ವರ್ತುಲಗಳ ಸಂಖ್ಯೆಗಳು ಎಷ್ಟು ಹೇಳಿ.
ಉತ್ತರ ಹುಡುಕುವಲ್ಲಿ ನೀವು ಯಶಸ್ವಿಯಾಗದಿದ್ದರೆ ನಿಮಗಾಗಿ ಉತ್ತರವನ್ನು ನಾವೇ ಹೇಳುತ್ತೇವೆ. ಈ ಚಿತ್ರದಲ್ಲಿ ಒಟ್ಟು ವರ್ತುಲಗಳ ಸಂಖ್ಯೆ 4 ಇದೆ.